ಜೆಎಸ್‍ಎಸ್ ಕಾಲೇಜಿನಲ್ಲಿ ‘ಟೀಚರ್ಸ್ ಕೆಪಾಸಿಟಿ ಬಿಲ್ಡಿಂಗ್’ ಕಾರ್ಯಾಗಾರ
ಮೈಸೂರು

ಜೆಎಸ್‍ಎಸ್ ಕಾಲೇಜಿನಲ್ಲಿ ‘ಟೀಚರ್ಸ್ ಕೆಪಾಸಿಟಿ ಬಿಲ್ಡಿಂಗ್’ ಕಾರ್ಯಾಗಾರ

February 15, 2020

ಮೈಸೂರು, ಫೆ. 14- ಮೌಲ್ಯಗಳ ಬಗ್ಗೆ ಮಾತನಾಡುವ ಬದಲು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್‍ನ ಅಧ್ಯಕ್ಷ ಗುರುರಾಜ ಕರ್ಜಗಿ ಹೇಳಿದರು.

ಮೈಸೂರಿನ ಊಟಿ ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ‘ಟೀಚರ್ಸ್ ಕೆಪಾಸಿಟಿ ಬಿಲ್ಡಿಂಗ್’ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಾಪಕರಿಗೆ ಜ್ಞಾನದ ಜೊತೆಗೆ ಬೋಧನಾ ಕೌಶಲವೂ ಇರಬೇಕು. ಮಕ್ಕಳ ಕಲಿಕಾ ಮಟ್ಟ ಒಂದೇ ರೀತಿಯಲ್ಲಿರುವುದಿಲ್ಲ. ಒಂದು ಕೊಠಡಿಯ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಬೋಧನಾ ವಿಧಾನ ಸರಿ ಹೊಂದುವುದಿಲ್ಲ. ಶಿಕ್ಷಕ ಮತ್ತು ವಿದ್ಯಾರ್ಥಿ ಗಳ ನಡುವಿನ ಅಂತರ ಕಡಿಮೆ ಮಾಡಿಕೊಂಡು ಕಲಿಸುವುದೇ ನಿಜವಾದ ಶಿಕ್ಷಣ. ಇಂದಿನ ಶಿಕ್ಷಣ ವಿದ್ಯಾರ್ಥಿ ಕೇಂದ್ರಿತ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅದು ಪ್ರಕಟ ಗೊಳ್ಳಲು ಸಹಾಯ ಮಾಡುವುದು ಅಧ್ಯಾಪಕರ ಗುರುತರ ಜವಾಬ್ದಾರಿ ಎಂದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಪಿ.ಮಂಜುನಾಥ್ ಮಾತ ನಾಡಿ, ಸದಾ ಕಲಿಯುವ ಶಿಕ್ಷಕನಿಂದ ಮಾತ್ರ ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯ. ಇಂದು ಬೋಧನಾ ವಿಧಾನಗಳು ಬದಲಾಗಿವೆ. ಆದ್ದರಿಂದ ಶಿಕ್ಷಕರಿಗೆ ಆಧುನಿಕ ಮಾಧ್ಯಮ ಗಳನ್ನು ಬಳಸುವ ಕೌಶಲ ಇರಬೇಕಾಗುತ್ತದೆ ಎಂದರು. ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆಯಲಿ ಗುರುವಿನ ಸ್ಥಾನ ಎಂದಿಗೂ ಕಡಿಮೆಯಾಗುವುದಿಲ್ಲ. ಅಧ್ಯಾಪಕರು ತಮ್ಮ ವೃತ್ತಿ ಯನ್ನು ಗೌರವಿಸುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಬೇಕು ಎಂದರು.

Translate »