ಮೀಸಲು: ಸುಪ್ರೀಂ ತೀರ್ಪಿನ ವ್ಯಾಖ್ಯಾನದ ಮರು ಪರಿಶೀಲನೆ ಅಗತ್ಯ
ಮೈಸೂರು

ಮೀಸಲು: ಸುಪ್ರೀಂ ತೀರ್ಪಿನ ವ್ಯಾಖ್ಯಾನದ ಮರು ಪರಿಶೀಲನೆ ಅಗತ್ಯ

February 14, 2020

ಮೈಸೂರು,ಫೆ.13(ಎಂಟಿವೈ)- `ಮೀಸ ಲಾತಿ ಮೂಲಭೂತ ಹಕ್ಕಲ್ಲ’ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವ್ಯಾಖ್ಯಾನದ ಮರು ಪರಿಶೀಲನೆಗೆ ಕೇಂದ್ರ ಸರ್ಕಾರ ಕೂಡಲೇ ಅರ್ಜಿ ಸಲ್ಲಿಸ ಬೇಕೆಂದು ಮಾಜಿ ಸಂಸದ ಆರ್.ಧ್ರುವ ನಾರಾಯಣ್ ಒತ್ತಾಯಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮೀಸಲಾತಿ ವಿಚಾರದಲ್ಲಿ ನೀಡಿದ ಆದೇಶದ ವ್ಯಾಖ್ಯಾನ ಆಘಾತಕಾರಿಯಾಗಿದೆ. ಕೂಡಲೇ ಪ್ರಧಾನಿ ಮೋದಿ, ಸರ್ವಪಕ್ಷಗಳ ಸಭೆ ಕರೆದು ಸಮಾ ಲೋಚಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸ ಬೇಕು. ಈ ಹಿಂದೆ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯಿದೆ ವಿಚಾರದಲ್ಲೂ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ದೇಶಾ ದÀ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಬಳಿಕ ಕೇಂದ್ರ ಸರ್ಕಾರ ಮನವರಿಕೆ ಮಾಡಿಕೊಟ್ಟ ನಂತರ ನ್ಯಾಯಾಲಯವು ತೀರ್ಪಿನಲ್ಲಿದ್ದ ದೋಷವನ್ನು ಸರಿಪಡಿ ಸಿತ್ತು ಎಂದು ನೆನಪಿಸಿದರು.

ಎಸ್‍ಸಿ-ಎಸ್‍ಟಿಯವರಿಗೆ `ಮೀಸಲು’ ಮತ್ತು `ಬಡ್ತಿಯಲ್ಲಿ ಮೀಸಲು’ ವಿಚಾರ ಗಳನ್ನು ಸಂವಿಧಾನದಲ್ಲಿಯೇ ಸೇರಿಸ ಲಾಗಿದೆ. ದಲಿತರನ್ನು ಮುಖ್ಯವಾಹಿನಿಗೆ ತರಲೆಂದೇ ಮೀಸಲಾತಿ ನೀಡಿದ್ದರೂ ಮನುವಾದಿಗಳು, ಮನುಸಂಸ್ಕøತಿಯುಳ್ಳ ವರು ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿರುದ್ಧ ಇರುವ ಈ ವ್ಯಾಖ್ಯಾನದ ಮರು ಪರಿಶೀಲನೆ ಆಗಲೇಬೇಕಾದ ಅನಿವಾ ರ್ಯತೆ ಇದೆ. ಸರ್ಕಾರದ ಸೇವೆಗಳಲ್ಲಿ ಪ್ರಾತಿ ನಿಧ್ಯ ನೀಡುವುದು ರಾಜ್ಯಗಳ ವಿವೇಚನಾ ಧಿಕಾರದ ಜತೆಗೆ ಮೀಸಲಾತಿಯು ಮೂಲ ಭೂತ ಹಕ್ಕಲ್ಲ ಎಂದು ವ್ಯಾಖ್ಯಾನ ನೀಡಿ ರುವುದು ಅಸಂವಿಧಾನಿಕವಾಗಿದೆ. ಸಂವಿ ಧಾನದ 3ನೇ ಅಧ್ಯಾಯವು ಮೂಲಭೂತ ಹಕ್ಕುಗಳ ಕುರಿತದ್ದಾಗಿದ್ದು, ರಾಜ್ಯ ಸರ್ಕಾ ರದ ಸೇವೆಗಳ ನೇರ ನೇಮಕಾತಿಯಲ್ಲಿ ಮುಂಬಡ್ತಿ ಹುದ್ದೆಗಳನ್ನು ಪರಿಗಣಿಸಲು ಅನುಚ್ಛೇದ 16(4) ಮತ್ತು 16(4ಎ) ಸೇರಿಸ ಲಾಗಿದೆ. ಹೀಗಿದ್ದರೂ ತಪ್ಪಾಗಿ ವ್ಯಾಖ್ಯಾನ ಮಾಡಿರುವುದು ಸರಿಯಲ್ಲ ಎಂದರು.

ಸಾಮಾಜಿಕ ನ್ಯಾಯ: ಬಿಜೆಪಿ ಮತ್ತು ಸಂಘ ಪರಿವಾರದವರು ಸಾಮಾಜಿಕ ನ್ಯಾಯದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಮೀಸ ಲಾತಿ ಕುರಿತು ಪರಿಶೀಲನೆ ಆಗಬೇಕೆಂದು ಮೋಹನ್ ಭಾಗವತ್ ಹೇಳಿದರೆ, ಸಂವಿ ಧಾನವನ್ನೇ ಬದಲಿಸಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳುತ್ತಾರೆ. ಮೀಸಲು ವಿಚಾರ ದುರ್ಬಲಗೊಳಿಸುವ ಕೆಲಸ 6 ವರ್ಷಗಳಿಂದ ಸದ್ದಿಲ್ಲದೆ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಗೆ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ತಮ್ಮ ಮೂಲ ಅಜೆಂಡಾ ಜಾರಿ ಗಾಗಿ ಷಡ್ಯಂತ್ರ ರೂಪಿಸುತ್ತಿದೆ. ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರದ ಪರ ವಕೀಲರು ಸರಿಯಾಗಿ ವಾದ ಮಾಡದೇ ಇರುವುದೇ ಇದಕ್ಕೆ ಸಾಕ್ಷಿ ಎಂದರು. ಎಸ್‍ಸಿ-ಎಸ್‍ಟಿ ವಿದ್ಯಾರ್ಥಿವೇತನವನ್ನು 2014ರಿಂದಲೂ ಪರಿಷ್ಕರಿಸಿಲ್ಲ. ಕೇಂದ್ರ ಸರ್ಕಾರದ ಕಾರ್ಯ ದರ್ಶಿ, ಜಂಟಿ ಕಾರ್ಯದರ್ಶಿಗಳ ಹುದ್ದೆ ಗಳು ಖಾಲಿ ಇದ್ದರೂ ನೇಮಕಾತಿ ಮಾಡು ತ್ತಿಲ್ಲ. ನೇಮಕ ನಡೆಸಿದರೆ ಮೀಸಲು ಸ್ಥಾನ ಗಳನ್ನು ತುಂಬಬೇಕಾಗುತ್ತದೆಂಬ ಕಾರ ಣಕ್ಕೇ ಹುದ್ದೆಗಳನ್ನು ಖಾಲಿ ಬಿಡಲಾಗಿದೆ. ಮುಂದೆ ಮೀಸಲಾತಿ ಮತ್ತು ಬಡ್ತಿ ಸೌಲಭ್ಯ ಗಳಿಂದ ವಂಚಿಸುವ ಹುನ್ನಾರವಿದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ದಲಿತ ಸಂಸದರಿಗೆ ಕಾಳಜಿ ಇಲ್ಲ: ಸುಪ್ರೀಂ ಕೋರ್ಟ್ ವ್ಯಾಖ್ಯಾನದ ಬಗ್ಗೆ ದಲಿತ ಸಂಸ ದರು ಕಾಳಜಿ ವಹಿಸಿಲ್ಲ, ಪ್ರತಿಭಟನೆ ಯನ್ನೂ ಮಾಡಿಲ್ಲ. ಮೀಸಲು ಕ್ಷೇತ್ರದಿಂದ ಬಂದವರು ಈ ಬಗ್ಗೆ ಗಟ್ಟಿಯಾಗಿ ಮಾತ ನಾಡಬೇಕು. ಎನ್‍ಡಿಎ ಸರ್ಕಾರದ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅವರು 80 ಸಂಸದರನ್ನು ತಮ್ಮ ಮನೆಯಲ್ಲಿ ಸೇರಿಸಿ ಚರ್ಚಿಸಿದ್ದಾರೆ. ಅದೇ ರೀತಿ ದಲಿತ ಸಂಸ ದರು ಸರ್ಕಾರಕ್ಕೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮಹರ್ಷಿ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವೀಕ್ಷಕ ರಾದ ಮಂಜುಳ ಮಾನಸ, ಎಂ.ಲಕ್ಷ್ಮಣ, ಜಿಪಂ ಸದಸ್ಯ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.