ಮೈಸೂರು,ಫೆ.13(ಎಂಟಿವೈ)- ಗಾಂಧಿ ಪಥ ಶೀರ್ಷಿಕೆಯ `ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ’ವು ರಂಗಾಸಕ್ತರಿಗೆ ಬಹುರೂಪದ ರಂಗ ವೈಭವದ ರಸದೌತಣ ಉಣಬಡಿಸಲು ಸಜ್ಜಾಗಿದೆ. 4 ವೇದಿಕೆಗಳಲ್ಲಿ 25 ನಾಟಕಗಳು, 18 ಸಿನಿಮಾಗಳ ಪ್ರದರ್ಶನದೊಂದಿಗೆ ಜಾನ ಪದ ಸೊಗಡಿನ ಪರಿಚಯವನ್ನೂ ಮಾಡಿ ಕೊಡಲು ಬಹುರೂಪಿ ಸಜ್ಜಾಗಿದೆ.
ವಿವಿಧ ಕಾರಣಗಳಿಂದಾಗಿ 1 ತಿಂಗಳು ತಡ ವಾಗಿ ನಡೆಯುತ್ತಿರುವ `ಬಹುರೂಪಿ’ ನಾಟಕೋ ತ್ಸವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಯ ಮುನ್ನೆಲೆಯೊಂದಿಗೆ ಫೆ.14 ರಂದು ಆರಂಭಗೊಳ್ಳುತ್ತಿದೆ. ನಾಟಕೋತ್ಸವ ಫೆ.19ರವರೆಗೂ ನಡೆಯಲಿದೆ. ಸಿದ್ಧತೆಗಳೆಲ್ಲವೂ ಪೂರ್ಣಗೊಂಡಿದ್ದು, ಶುಕ್ರವಾರ ಬೆಳಿಗ್ಗೆಯಿಂ ದಲೇ ರಂಗಾಯಣದ ಆವರಣ ಕಳೆಕಟ್ಟಲಿದೆ. ಮತ್ತೊಂದೆಡೆ, ಜನಪದೋತ್ಸವದ ಸೊಗಸು ಎಲ್ಲರನ್ನೂ ಆಕರ್ಷಿಸಲಿದ್ದರೆ, ಗಾಂಧಿ ವಿಚಾರ ಧಾರೆಗಳ, ತತ್ವ ಆದರ್ಶ, ಚಿಂತನೆಗಳನ್ನು ಆಧರಿ ಸಿದ ವಿಚಾರಗೋಷ್ಠಿಗಳು ನಡೆಯಲಿವೆ.