ಮೈಸೂರು,ಫೆ.13(ವೈಡಿಎಸ್)-ಮೈಸೂರು ರಂಗಾಯಣದಲ್ಲಿ `ಗಾಂಧಿ ಪಥ’ ಶೀರ್ಷಿಕೆಯಡಿ ಆಯೋಜಿಸಿರುವ `ಬಹು ರೂಪಿ’ ರಾಷ್ಟ್ರೀಯ ನಾಟಕೋತ್ಸವದ ಭಾಗ ವಾದ `ಬಹುರೂಪಿ ಜನಪದೋತ್ಸವ’ಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
ಕಲಾಮಂದಿರದ ಕಿಂದರಜೋಗಿ ವೇದಿಕೆ ಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರು ಜೋಗತಿಗೆ ಹುಡಿ ಹಾಗೂ ಗೊರವನಿಗೆ ಜೋಳಿಗೆ ತುಂಬುವ ಮೂಲಕ ಜನಪ ದೋತ್ಸವಕ್ಕೆ ವಿಶಿಷ್ಟ ರೀತಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಇಷ್ಟು ದಿನ ಟಿವಿಗಳು ರಂಗಭೂಮಿ, ಸಿನಿಮಾ ಗಳನ್ನು ನುಂಗಿ ಹಾಕಿದವು ಎನ್ನುತ್ತಿದ್ದರು. ಆದರೆ, ಇಂದಿನ ಧಾರಾವಾಹಿಗಳು ಮನೆ ಮುರಿಯುತ್ತಿವೆ. ಮಹಾಭಾರತದಲ್ಲಿ ದ್ರೌಪದಿ, ಬಿಚ್ಚಿದ ಮುಡಿಯನ್ನು ಕೌರವರ ರಕ್ತದಿಂ ದಲೇ ತುರುಬು ಕಟ್ಟುವುದಾಗಿ ಶಪಥÀ ಮಾಡಿ ಕೂದಲನ್ನು ಬಿಟ್ಟಿದ್ದಳು. ಆದರೆ, ಇಂದಿನ ಹೆಣ್ಣುಮಕ್ಕಳು ಯಾರಿಗೆ ಶಪತ ಮಾಡಿದ್ದಾರೆಂದು ಗೊತ್ತಿಲ್ಲ. ಎಲ್ಲರೂ ದ್ರೌಪದಿಯಂತೆ ಇದ್ದಾರೆ ಎಂದರು.
ಯಾರು ಹೆಚ್ಚಾಗಿ ಮೊಬೈಲ್ ಅನ್ನು ದಿನಪೂರ್ತಿ ತಲೆ ತಗ್ಗಿಸಿ ನೋಡುತ್ತಾನೊ ಆತನನ್ನು ಜೀವನಪೂರ್ತಿ ತಲೆ ಎತ್ತದಂತೆ ಮಾಡುತ್ತದೆ. ಹಾಗಾಗಿ ಮೊಬೈಲ್ ಹೆಚ್ಚು ಬಳಸದೇ ಪುಸ್ತಕ, ಪತ್ರಿಕೆಗಳನ್ನು ಓದಿ, ರಂಗಭೂಮಿ, ಜಾನಪದ ಕಲೆಗೆ ಆಸಕ್ತಿ ತೋರಿ ಎಂದು ಕಿವಿಮಾತು ಹೇಳಿದರು.
ಸ್ವಚ್ಛತೆ ಇಲ್ಲ: ಸಿನಿಮಾ ನಟರಿಗೆ ಗೌರವ ಕೊಡುವ ಜನರು, ಜಾನಪದ ಕಲಾವಿದರಿಗೆ ಗೌರವ ನೀಡುವುದಿಲ್ಲ. ನಮ್ಮಲ್ಲಿ ಸ್ವಚ್ಛತೆ ಇಲ್ಲ ದಿರುವುದೇ ಅದಕ್ಕೆ ಕಾರಣ. ಹಾಗಾಗಿ ಸ್ವಚ್ಛತೆ ಕಾಯ್ದುಕೊಳ್ಳಿ. ಜಾನಪದ ಕಲಾ ವಿದರ ಉಡುಪು ಒಂದೇ ತೆರನಾಗಿರಲಿ. ತಪ್ಪದೇ ಶೇವಿಂಗ್ ಮಾಡಿ. ಚರ್ಮವಾದ್ಯ ಗಳನ್ನೇ ನುಡಿಸಿ ಎಂದರು.
ಚರ್ಮವಾದ್ಯ ಬಳಕೆ: ನಾನು ಜಾನಪದ ಅಕಾಡೆಮಿ ಅಧ್ಯಕ್ಷ ಪದವಿ ವಹಿಸಿಕೊಂಡ ನಂತರ ಎಲ್ಲಾ ವೇದಿಕೆ ಕಾರ್ಯ ಕ್ರಮ ಗಳಲ್ಲೂ ಚರ್ಮವಾದÀ್ಯಗಳನ್ನೇ ಬಳಸಬೇ ಕೆಂದು ಸೂಚನೆ ನೀಡಿದ್ದೇನೆ. ಆದೇಶ ಜಾರಿ ಗಾಗಿ 2 ತಿಂಗಳ ಗಡುವು ನೀಡಿದ್ದೇನೆ. ಶಾಲಾ -ಕಾಲೇಜುಗಳಲ್ಲಿ ಚರ್ಮವಾದ್ಯ ಶಿಬಿರ ಗಳನ್ನು ಆಯೋಜಿಸುತ್ತಿದ್ದೇನೆ ಎಂದರು.
ಜಾನಪದ ಕಲೆಗಳನ್ನು ಉಳಿಸಲು ಫೆ.24 ರಿಂದ 26ರವರೆಗೆ ಉಡುಪಿಯಲ್ಲಿ ತರಬೇತಿ ಶಿಬಿರ ಹಮ್ಮಿಕೊಂಡಿದ್ದೇನೆ. ಜತೆಗೆ ಮಾಸಾ ಶನಕ್ಕೆ ಅರ್ಜಿ ಸಲ್ಲಿಸಿದ್ದ ಕಲಾವಿದರ ಸಂದ ರ್ಶನವನ್ನೂ ಪೂರ್ಣಗೊಳಿಸಿದ್ದೇನೆ ಎಂದರು.
ಉಡುಪಿ ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್‍ನ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ, ಮನುಷ್ಯ ನಿಗೆ ಬದುಕಲು ಯಾವುದಾದರೊಂದು ಕಲೆ ಅಗತ್ಯ. ಕಲೆಯನ್ನು ಮಾರಾಟ ಮಾಡದೇ ಕಲೆಯೊಟ್ಟಿಗೆ ನಮ್ಮ ಬದುಕು ಸಾಗಿಸಬೇಕು ಎಂದರು.
ಕನಸು ನನಸಾಗಿಸುವ ಹಠ: ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಎಲ್ಲರಂತೆ ನನಗೂ ಕನಸು ಗಳು ಬೀಳುತ್ತವೆ. ಅವನ್ನು ನನಸಾಗಿಸುವ ಹಠವೂ ಇದೆ. ಪಂಥಗಳ ಜಗಳ ಇದ್ದದ್ದೇ. ಪಂಥ ಮೀರಿ ಪಥಗಳತ್ತ ಹೆಜ್ಜೆ ಹಾಕ ಬೇಕು ಎಂಬ ಪರಿಕಲ್ಪನೆಯಿಂದ ಯಾವುದೇ ಟೀಕೆ ಟಿಪ್ಪಣಿಗಳಿದ್ದರೂ ತಲೆಕೆಡಿಸಿಕೊಳ್ಳದೆ ಬಹುರೂಪಿ ನಾಟಕೋತ್ಸವ ಆಯೋಜಿಸ ಲಾಗಿದೆ. ಯುವಕರಿಗೆ ಗಾಂಧಿ ತತ್ವ, ವಿಚಾರಧಾರೆ ತಲುಪಿಸುವುದೇ ಉದ್ದೇಶ ವಾಗಿದೆ ಎಂದರು.
ಜಾನಪದ ತಾಯಿ ಬೇರು. ತಾಯಿ ಬೇರು ಗಟ್ಟಿಯಾಗಿದ್ದರೆ ಎಲ್ಲಾ ಬೇರು ಗಳೂ ಗಟ್ಟಿಯಾಗಿರುತ್ತವೆ. ಜಾನಪದರು ಗಟ್ಟಿಯಾಗಿದ್ದರೆ ರಂಗಭೂಮಿಯ ಎಲ್ಲಾ ಕಲಾವಿದರೂ ಗಟ್ಟಿಯಾಗಿರುತ್ತಾರೆ ಎಂದ ಅವರು, ನಮ್ಮಲ್ಲಿ ಅನೇಕ ಸಿದ್ಧಾಂತ ಗಳಿರಬಹುದು. ಆದರೆ, ಮನುಷ್ಯನ ಪ್ರೀತಿ ಎಲ್ಲದಕ್ಕಿಂತ ದೊಡ್ಡದು. ನಾನು ನಿಮ್ಮೆಲ್ಲ ರನ್ನೂ ಪ್ರೀತಿಸಲು ಕೊಡಗಿನಿಂದ ಬಂದಿ ದ್ದೇನೆ. ಈ ರಂಗಾಯಣ ನನ್ನದಲ್ಲ ನಿಮ್ಮದು. ಎಲ್ಲರೂ ಒಟ್ಟಾಗಿ ರಂಗಭೂಮಿ ಕಟ್ಟೋಣ ಎಂದು ಮನವಿ ಮಾಡಿದರು.
ರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ, ಜನಪದೋತ್ಸವ ಸಂಚಾಲಕಿ ಗೀತಾ ಮೋಂಟಡ್ಕ, ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ ಸಂಚಾಲಕ ಹುಲುಗಪ್ಪ ಕಟ್ಟಿಮನಿ ಉಪಸ್ಥಿತರಿದ್ದರು. ನಂತರ ಬಳ್ಳಾರಿಯ ಪಿ. ಯಲ್ಲಮ್ಮ ಮತ್ತು ತಂಡದಿಂದ ಜೋಗತಿ ನೃತ್ಯ, ಚಾಮರಾಜನಗರದ ರಾಜ ಶೇಖರ ಮೂರ್ತಿ ಮತ್ತು ತಂಡದವರು ಗೊರವರ ನೃತ್ಯ ಪ್ರದರ್ಶಿಸಿ, ಸಭಿಕರನ್ನು ರಂಜಿಸಿದರು.
ನಾಟಕೋತ್ಸವ
ಈ ಬಾರಿ `ಬಹುರೂಪಿ’ಯಲ್ಲಿ ಭೂಮಿಗೀತ, ವನರಂಗ, ಕಲಾಮಂದಿರ ಹಾಗೂ ಕಿರುರಂಗಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಕನ್ನಡದ 10, ವಿವಿಧ ಭಾಷೆಗಳ 11, 2 ಯಕ್ಷಗಾನ, ಬಯಲಾಟ, ತೊಗಲುಗೊಂಬೆ ಪ್ರದರ್ಶನ ಸೇರಿದಂತೆ 25 ರಂಗಕೃತಿಗಳ ಪ್ರದರ್ಶನವಾಗಲಿದೆ. ಇನ್ನೊಂದೆಡೆ, ಜನಪದೋತ್ಸವ ಮತ್ತು ಗಾಂಧಿ ಕುರಿತ ವಿಚಾರಗೋಷ್ಠಿಗಳೂ ನಡೆಯಲಿವೆ. ಒಟ್ಟಿನಲ್ಲಿ ಮುಂದಿನ 6 ದಿನಗಳು ಕಲಾ ಮಂದಿರದ ಅಂಗಳದಲ್ಲಿ ಕಲೆ-ಸಂಸ್ಕøತಿ-ಚಿಂತನೆಗಳ ಕಾಮನಬಿಲ್ಲು ಗೋಚರಿಸಲಿದೆ.
ಭೂಮಿಗೀತ ಪ್ರತಿ ಸಂಜೆ 6ಕ್ಕೆ: ಫೆ.14ರಂದು `ಸದಾನ್‍ಬಗಿ ಇಶೈ(ಹಂಟರ್ ಸಾಂಗ್) (ಮಣಿಪುರಿ)’(ಸಂಜೆ 7.30ಕ್ಕೆ), ಫೆ.15ರಂದು `ಮಹದೇವಭಾಯಿ (ಇಂಗ್ಲಿಷ್/ಹಿಂದಿ)’, ಫೆ.16ರಂದು `ಸಂಗೀತ್‍ಬಾರೀ (ಮರಾಠಿ)’, ಫೆ.17ರಂದು `ಗಾಂಧಿ ವರ್ಸಸ್ ಗಾಂಧಿ (ಕನ್ನಡ)’, ಫೆ.18ರಂದು `ಪರಿತ್ರಾಣ್ (ಗುಜರಾತಿ)’, ಫೆ.19ರಂದು `ಅಕ್ಷಯಾಂಬರ (ಕನ್ನಡ)’.
ವನರಂಗ ಪ್ರತಿಸಂಜೆ 7ಕ್ಕೆ: ಫೆ.14ರಂದು `ವೀರರಾಣಿ ಕಿತ್ತೂರು ಚೆನ್ನಮ್ಮ (ಬಯ ಲಾಟ)’(ರಾತ್ರಿ 8ಕ್ಕೆ), ಫೆ.15ರಂದು `ಝಲ್ಕರಿ (ಹಿಂದಿ)’, ಫೆ.16ರಂದು `ಮಂಟೇ ಸ್ವಾಮಿ ಕಥಾಪ್ರಸಂಗ (ಕನ್ನಡ)’, ಫೆ.17ರಂದು `ದೇವಯಾನಿ (ಕನ್ನಡ)’, ಫೆ.18ರಂದು `ಕೆಂಡೋನಿಯನ್ಸ್ (ಕನ್ನಡ)’, ಫೆ.19ರಂದು `ಕಾಮ್ಯಕಲಾ ಪ್ರತಿಮಾ (ಕನ್ನಡ)’.
ಕಿರುರಂಗ ಮಂದಿರ ಪ್ರತಿಸಂಜೆ 6ಕ್ಕೆ: ಫೆ.14ರಂದು `ಬೆಂದಕಾಳು ಆನ್ ಟೋಸ್ಟ್ (ಕನ್ನಡ)’(ಸಂಜೆ 7.30ಕ್ಕೆ), ಫೆ.15ರಂದು `ಭಗವದಜ್ಜುಕೀಯಮ್ (ಹಿಂದಿ)’, ಫೆ.16ರಂದು `ಈಡಿಪಸ್ (ಬೆಂಗಾಲಿ), ಫೆ.17ರಂದು `ದ ಬ್ಲಾಕ್‍ಬೋರ್ಡ್ ಲ್ಯಾಂಡ್ (ಹಿಂದಿ/ಇಂಗ್ಲಿಷ್)’, ಫೆ.18ರಂದು `ಮಿಸ್ ಜೂಲಿ (ಕನ್ನಡ)’, ಫೆ.19ರಂದು `ಸ್ವಭಾಬ್‍ಜತ (ಅಸ್ಸಾಮಿ)’.
ಕಲಾಮಂದಿರ ಪ್ರತಿ ಸಂಜೆ 7.30ಕ್ಕೆ: ಫೆ.13ರಂದು ವೀರ ಅಭಿಮನ್ಯು (ಕನ್ನಡ/ಪೌರಾಣಿಕ ಯಕ್ಷಗಾನ ಪ್ರಸಂಗ)’ ಜರುಗಿದೆ. ಫೆ.15ರಂದು `ಮುಖ್ಯಮಂತ್ರಿ’ (ಕನ್ನಡ)’, ಫೆ.16ರಂದು `ಜಿಂದಗಿ ಔರ್ ಜೋಂಕ್ (ಹಿಂದಿ)’, ಫೆ.17ರಂದು `ಸುಭದ್ರಾ ಕಲ್ಯಾಣ (ಕನ್ನಡ)’, ಫೆ.18ರಂದು `ಶಾಕುಂತಲಂ (ಮಲಯಾಳಂ)’, ಫೆ.19ರಂದು `ಮಹಾತ್ಮ (ಕನ್ನಡ)’. ಟಿಕೆಟ್ ದರ 100 ರೂ. ನಿಗದಿಪಡಿಸಲಾಗಿದೆ.
ಚಲನಚಿತ್ರೋತ್ಸವ
ಶ್ರೀರಂಗ ಮಂದಿರ: ಫೆ.15ರಂದು ಬೆಳಿಗ್ಗೆ 10.30ಕ್ಕೆ `ಗಾಂಧಿ: ದಿ ಮೇಕಿಂಗ್ ಆಫ್ ಮಹಾತ್ಮ (ಇಂಗ್ಲಿಷ್)’, ಮಧ್ಯಾಹ್ನ 12ಕ್ಕೆ `ದಿ ರೈಸ್ ಅಂಡ್ ಫಾಲ್ ಆಫ್ ದಿ ವಾಲ್ (ಇಂಗ್ಲಿಷ್)’, ಮಧ್ಯಾಹ್ನ 2ಕ್ಕೆ `ಗಾಂಧಿ (ಇಂಗ್ಲಿಷ್)’, ಫೆ.16ರಂದು ಬೆಳಿಗ್ಗೆ 10.30ಕ್ಕೆ `ಗಾಂಧಿ: ದಿ ರೈಸ್ ಟು ಫೇಮ್ (ಇಂಗ್ಲಿಷ್)’ ಮಧ್ಯಾಹ್ನ 12ಕ್ಕೆ `ಕಿಂಗ್ ಇನ್ ದಿ ವೈಲ್ಡರ್‍ನೆಸ್ (ಇಂಗ್ಲಿಷ್)’, ಮಧ್ಯಾಹ್ನ 2ಕ್ಕೆ `ಲಗೆ ರಹೋ ಮುನ್ನಾ ಭಾಯ್ (ಹಿಂದಿ)’, ಫೆ.17ರಂದು ಬೆಳಿಗ್ಗೆ 10.30ಕ್ಕೆ `ಗಾಂಧಿ: ದಿ ರೋಡ್ ಟು ಫ್ರೀಡಂ (ಇಂಗ್ಲಿಷ್)’ ಹಾಗೂ `ಆರ್ಗಾನಿಕ್ ಸೇಜ್ ಆಫ್ ಇಂಡಿಯಾ-ಸರಳ ವಿರಳ (ಕನ್ನಡ)’ ಮಧ್ಯಾಹ್ನ 12ಕ್ಕೆ `ಮಂಡೇಲಾ ಅಂಡ್ ಡಿ ಕ್ಲರ್ಕ್ (ಇಂಗ್ಲಿಷ್)’, ಮಧ್ಯಾಹ್ನ 2ಕ್ಕೆ `ಗಾಂಧಿ ಮೈ ಫಾದರ್ (ಹಿಂದಿ)’, ಫೆ.18ರಂದು ಬೆಳಿಗ್ಗೆ 10.30ಕ್ಕೆ `ಮಹಾತ್ಮ-ದಿ ಲೈಫ್ ಆಫ್ ಗಾಂಧಿ (ಇಂಗ್ಲಿಷ್)’, ಮಧ್ಯಾಹ್ನ 12ಕ್ಕೆ `ಲಿಂಕನ್ (ಇಂಗ್ಲಿಷ್)’, ಮಧ್ಯಾಹ್ನ 2ಕ್ಕೆ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (ಕನ್ನಡ)’, ಫೆ.19ರಂದು ಬೆಳಿಗ್ಗೆ 10.30ಕ್ಕೆ `ಎ ಫೋರ್ಸ್ ಮೋರ್ ಪವರ್‍ಫುಲ್; ಎ ಸೆಂಚುರಿ ಆಫ್ ನಾನ್‍ವಯಲೆಂಟ್ ಕಾನ್‍ಫ್ಲಿಕ್ಟ್-1 (ಇಂಗ್ಲಿಷ್)’, ಮಧ್ಯಾಹ್ನ 12ಕ್ಕೆ `ಎ ಫೋರ್ಸ್ ಮೋರ್ ಪವರ್‍ಫುಲ್; ಎ ಸೆಂಚುರಿ ಆಫ್ ನಾನ್‍ವಯ ಲೆಂಟ್ ಕಾನ್‍ಫ್ಲಿಕ್ಟ್-2 (ಇಂಗ್ಲಿಷ್)’, ಮಧ್ಯಾಹ್ನ 2ಕ್ಕೆ `ಸತ್ಯ ಹರಿಶ್ಚಂದ್ರ’. ಎಲ್ಲಾ ಚಲನಚಿತ್ರಗಳಿಗೂ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.