ಮಡಿಕೇರಿ,ಜ.20- ಕೊಡಗಿನ ಅಂಕಿತಾ ಸುರೇಶ್ ಅವರು ಭಾರತೀಯ ಹಿರಿಯ ಮಹಿಳಾ ಹಾಕಿ ತಂಡದ ಅಸಿಸ್ಟೆಂಟ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರು ತರಬೇತಿ ಸದಸ್ಯರಾಗಿದ್ದು, ಜನವರಿ 21ರವರೆಗೆ ನಡೆಯುತ್ತಿರುವ ಹಾಕಿ ಪಂದ್ಯಾವಳಿಯ ಹಿರಿಯ ಹಾಕಿ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಜ.22 ರಂದು ನ್ಯೂಜಿಲ್ಯಾಂಡ್‍ಗೆ ತೆರಳಲಿರುವ ಭಾರ ತೀಯ ಹಾಕಿ ತಂಡದ (ಹಿರಿಯರ ಮಹಿಳಾ ಹಾಕಿ ತಂಡ) ಅಸಿಸ್ಟೆಂಟ್ ಕೋಚ್ ಆಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ನ್ಯೂಜಿಲೆಂಟ್ ಪ್ರವಾಸ ಜ.23 ರಿಂದ ಆರಂಭ ಗೊಂಡು ಫೆಬ್ರವರಿ 6ರವರೆಗೆ ನಡೆಯುತ್ತದೆ….
ರೋಟರಿ `ಸಾಂಸ್ಕøತಿಕ ಸಂಗಮ’ದಲ್ಲಿ ಜಿಎಸ್‍ಎಸ್‍ಎಸ್‍ಗೆ ಸಮಗ್ರ ಪ್ರಶಸ್ತಿ
January 21, 2020ಮೈಸೂರು,ಜ.20(ವೈಡಿಎಸ್)-ಸರಸ್ವತಿ ಪುರಂನ ರೋಟರಿ ಪಶ್ಚಿಮ ಶಾಲೆ ಸಭಾಂ ಗಣದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗ ಳಲ್ಲಿ ಜಯ ಸಾಧಿಸಿದ ಗೀತಾ ಶಿಶುಶಿಕ್ಷಣ ಸಂಸ್ಥೆ(ಜಿಎಸ್‍ಎಸ್‍ಎಸ್)ಯ ತಂಡ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿತು. ರೋಟರಿ ಸೆಂಟ್ರಲ್ ಮೈಸೂರು, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಸಾಂಸ್ಕøತಿಕ ಸಂಗಮ’ದ ವಿವಿಧ ಸ್ಪರ್ಧೆಗಳಲ್ಲಿ 31 ಅಂಕ ಪಡೆದ ಜಿಎಸ್‍ಎಸ್‍ಎಸ್ ತಂಡ (ಪ್ರಥಮ) ಸ್ಥಾನ ಪಡೆದರೆ, 23 ಅಂಕ ಪಡೆದ ವಿಜಯ ವಿಠಲ ವಿದ್ಯಾ ಶಾಲೆ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿಜೇತರು:…
ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಸ್‍ಜೆಸಿಇ ನೌಕರರ ಪ್ರತಿಭಟನೆ
January 21, 2020ಬೇಡಿಕೆ, ಬಾಕಿ ವೇತನ, ಇತರೆ ಸೌಲಭ್ಯ, ವೇತನ ಹೆಚ್ಚಳ ಮೈಸೂರು, ಜ.20(ಎಂಟಿವೈ)- ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ನೌಕರರು ಸೋಮವಾರ ಕಾಲೇಜು(ಎಸ್‍ಜೆಸಿಇ) ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಅನುದಾನಿತ ಸಂಸ್ಥೆಯಾದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯ ರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಸಿಬ್ಬಂದಿಗೆ ಸಕಾಲಕ್ಕೆ ವೇತನ ನೀಡುತ್ತಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆಯೂ ವೇತನ ಸಮಸ್ಯೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಪ್ರತಿ ಭಟನೆ ಮಾಡಲಾಗಿತ್ತು. ಇದರಿಂದ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ…
ಹುಣಸೂರು ಉಪಚುನಾವಣೆ ಗೆಲುವು ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಗೆಲುವಿಗೆ ನಾಂದಿ
January 21, 2020ಕೃತಜ್ಞತಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ಮೈಸೂರು, ಜ.20(ಎಂಕೆ)- ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಗೆಲುವು, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ನಾಂದಿಯಾಗಲಿದೆ. ವಿಶ್ವನಾಥ್ ಪಕ್ಷಾಂತರ, ಗೆಲ್ಲಲೇಬೇಕೆಂಬ ಸಂಕಲ್ಪ, ಕಾರ್ಯಕರ್ತರ ಸಂಘಟಿತ ಪ್ರಚಾರ ಗೆಲುವಿಗೆ ಕಾರಣವಾಯಿತು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ‘ಹುಣ ಸೂರು ಉಪಚುನಾವಣೆ-2019 ಕೃತಜ್ಞತಾ ಸಭೆ’ಯಲ್ಲಿ ಮಾತನಾಡಿದ ಅವರು, ಹುಣ ಸೂರು ಕ್ಷೇತ್ರದಲ್ಲಿ…
ಮೈಸೂರು ಅರಮನೆಯಲ್ಲಿ ಭಯೋತ್ಪಾದಕರೊಂದಿಗೆ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಸೆಣಸಾಟ!
January 21, 2020ಭಯ ಬೇಡ… ಇದು ಅಣಕು ಪ್ರದರ್ಶನ ಮೈಸೂರು, ಜ.20(ಆರ್‍ಕೆ)- ಭಯೋ ತ್ಪಾದಕರು ದಾಳಿ ನಡೆಸಿದಾಗ ಬಗ್ಗು ಬಡಿಯುವ ಕಾರ್ಯಾಚರಣೆ ಅಣಕು ಪ್ರದರ್ಶನ ಇಂದು ರಾತ್ರಿ ಮೈಸೂರಿನ ಅರಮನೆಯಲ್ಲಿ ನಡೆಯಿತು. ಸಂಜೆ 6 ಗಂಟೆಗೆ ಅರಮನೆ ಮಂಡಳಿ ಕಚೇರಿಯಿಂದ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂಗೆ ಹಾಗೂ ಅರಮನೆ ಭದ್ರತಾ ಕಚೇರಿಗೆ ಭಯೋತ್ಪಾ ದಕರು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಬರುತ್ತದೆ. ತಕ್ಷಣ ಕಾರ್ಯಪ್ರವೃತ್ತರಾದ ಡಿಸಿಪಿ ಎಂ.ಮುತ್ತುರಾಜ್, ಬೆಂಗಳೂರಿನ ಗರುಡ ಕಮಾಂಡೋ ಪಡೆ ಮತ್ತು ಚೆನ್ನೈನ ಎನ್‍ಎಸ್‍ಜಿ ದಕ್ಷಿಣ…
ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿಶೇಷ ಪೂಜೆ
January 21, 2020ಚಿಕ್ಕಮಗಳೂರು, ಜ.20- ಶಾರದಾಂಬೆ ಸನ್ನಿಧಿ ಶೃಂಗೇರಿಯಲ್ಲಿ 5 ದಿನಗಳಿಂದ ವಾಸ್ತವ್ಯ ಹೂಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಮಂಗಳವಾರ ಚಂಡಿಕಾ ಯಾಗ ಪೂರ್ಣಾಹುತಿ ಕೈಂಕರ್ಯದಲ್ಲಿ ಭಾಗಿಯಾಗಲಿದೆ. ಈ ಸಂಬಂಧ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳಿಗೆ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. `ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಪೂಜೆ ಮಾಡಿಸುತ್ತಿದ್ದೇವೆ’ ಎಂದು ದೇವೇಗೌಡರು ಹೇಳಿದರೆ, ಕುಮಾರಸ್ವಾಮಿಯವರು `ಇದೆಲ್ಲಾ ಮನಃಶಾಂತಿಗಾಗಿ’ ಎಂದಿದ್ದಾರೆ. ಆದರೆ ರಾಜಮಹಾರಾಜರ ಕಾಲದಲ್ಲಿ ಕುಟುಂಬ ಹಾಗೂ ಸೈನ್ಯ ಬಲ ಹೆಚ್ಚಬೇಕೆಂಬ ಸಂಕಲ್ಪದಿಂದ ನಡೆಸುತ್ತಿದ್ದ ಈ ಯಾಗವನ್ನು ಇದೀಗ ದೇವೇಗೌಡರ…
ರಾಜ್ಯದಲ್ಲಿ ಕಟ್ಟೆಚ್ಚರ ಘೋಷಣೆ: ಎಲ್ಲೆಡೆ ಕಣ್ಗಾವಲು
January 21, 2020ಬೆಂಗಳೂರು, ಜ.20(ಕೆಎಂಶಿ)- ಕೇಂದ್ರ ಗೃಹ ಇಲಾಖೆ ಸಲಹೆ ಮೇರೆಗೆ ರಾಜ್ಯದಲ್ಲಿ ಕಟ್ಟೆಚ್ಚರ (ಹೈಅಲರ್ಟ್) ಘೋಷಣೆ ಮಾಡ ಲಾಗಿದೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿ, ಅದರಲ್ಲಿ ಸುಧಾರಿತ ಬಾಂಬ್‍ಗಳು ಪತ್ತೆಯಾದ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಈ ಘೋಷಣೆ ಮಾಡಿದೆ. ಪೌರತ್ವ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮೊದಲ ಹೆಜ್ಜೆ ಮುಂದಿ ಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರ ವಿರೋಧಿ ಶಕ್ತಿ ಗಳು ಮತ್ತು ಉಗ್ರರು ಇಲ್ಲಿ ದೊಡ್ಡ ಪ್ರಮಾಣ ದಲ್ಲಿ ಸಂಚು…
ಸಾರ್ವಜನಿಕರಿಂದ ಥಳಿತ: ವ್ಯಕ್ತಿ ಸಾವು
January 21, 2020ಮೈಸೂರು,ಜ.20(ಆರ್‍ಕೆ)- ಮೇಕೆಗಳ ಕಳವಿಗೆ ಯತ್ನಿಸುತ್ತಿದ್ದರೆಂಬ ಆರೋಪದ ಹಿನ್ನೆಲೆ ಯಲ್ಲಿ ಸಾರ್ವಜನಿಕರಿಂದ ಥಳಿತಕ್ಕೊಳಗಾದ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ಮೈಸೂರಿನ ಬೆಲವತ್ತ ಗ್ರಾಮದ ಬಳಿ ಸಂಭವಿಸಿದೆ. ಮೈಸೂರಿನ ಉದಯಗಿರಿ ನಿವಾಸಿ ಜಹೀರುದ್ದೀನ್ (25) ಸಾವನ್ನಪ್ಪಿದವರಾಗಿದ್ದು, ಗಾಯಗೊಂಡಿರುವ ಕಾರ್ತಿಕ್‍ನನ್ನು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಜಹೀರುದ್ದೀನ್ ಅವರ ಸಹೋದರ ರೆಹಮತ್ತುಲ್ಲಾ ಈ ಬಗ್ಗೆ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆ. ನನ್ನ ಅಣ್ಣ ಜಹೀರುದ್ದೀನ್ ಭಾನುವಾರ ಬೆಳಿಗ್ಗೆ 7.30 ಗಂಟೆ ವೇಳೆಗೆ ಎಂದಿನಂತೆ ಆಟೋ ತೆಗೆದುಕೊಂಡು ಮನೆಯಿಂದ ಹೊರ…
ಒಂದೇ ವೇದಿಕೆಯಲ್ಲಿ ಕೂತು ಸಿದ್ದರಾಮಯ್ಯ, ಈಶ್ವರಪ್ಪ, ವಿಶ್ವನಾಥ್ ಆತ್ಮೀಯ ಹರಟೆ
January 21, 2020ಕೆ.ಆರ್.ನಗರ,ಜ.20(ಭೇರ್ಯ ಮಹೇಶ್) – ಈ ಮೂವರು ರಾಜಕೀಯ ಧುರೀ ಣರು ರಾಜಕೀಯವಾಗಿ ಬದ್ಧ ವೈರಿಗಳು. ಆಗಾಗ ಪರಸ್ಪರ ವಾಗ್ಬಾಣಗಳ ಬಿಡುವವರು. ಒಬ್ಬರು, ಅವರು ದುರಹಂಕಾರಿ ಎಂದರೆ, ಮತ್ತೊಬ್ಬರು, ಅವರಿಗೆ ತಲೆಯೇ ಇಲ್ಲ, ತಲೆ ಇದ್ದರೂ ಮೆದುಳಿಲ್ಲ ಎನ್ನುತ್ತಿದ್ದರು. ಇನ್ನೊ ಬ್ಬರು ರಾಜಕೀಯವಾಗಿ ಅವರಿಗೆ ಪುನ ರ್ಜನ್ಮ ನೀಡಿದ್ದೇ ನಾನು ಅಂದ್ರೆ, ಅವರಿಗೇ ನೆಲೆ ಇರಲಿಲ್ಲ, ನನಗೆಲ್ಲಿಂದ ನೆಲೆ ಕಲ್ಪಿಸಲು ಸಾಧ್ಯ ಎನ್ನುತ್ತಿದ್ದರು. ಇದೆಲ್ಲಾ ಬರೀ ಸ್ಯಾಂಪಲ್. ಆದರೆ ಸದಾ ವಾಗ್ಬಾಣದ ಮೂಲಕ ಇವರ ನಡುವೆ ಎಷ್ಟು ದ್ವೇಷಾಸೂಯೆ…
ಫೆ.11ರಂದು ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ
January 21, 2020ಮೈಸೂರು, ಜ.20- ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಫೆ.11ರಂದು ಆಚರಿಸಲು ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಸವಿತಾ ಮಹರ್ಷಿ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಫೆ.11ರಂದು ಬೆಳಿಗ್ಗೆ 11 ಗಂಟೆಗೆ ಕಲಾಮಂದಿರ ದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡುವರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು ಎಂದರು. ಸಭೆಯಲ್ಲಿ ಕನ್ನಡ…










