ಕಡಕೊಳ, ಜ.22-ಮೈಸೂರು ತಾಲೂಕಿನ ಕಡಕೊಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮತ್ತೆ 7 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕಳೆದ ಐದಾರು ದಿನಗಳಿಂದ ಈವರೆಗೆ ಅಸ್ವಸ್ಥಗೊಂಡವರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ. ಅಧಿಕಾರಿಗಳ ದಂಡೇ ಗ್ರಾಮಕ್ಕೆ ಆಗಮಿಸಿ, ಪರಿಸ್ಥಿತಿ ಹತೋಟಿಗೆ ಕ್ರಮ ಕೈಗೊಂಡಿದೆ. ಗ್ರಾಮದ ಜನತಾ ಕಾಲೋನಿಯಲ್ಲಿ ಕಲುಷಿತ ನೀರು ಸೇವನೆಯಿಂದ ಐದಾರು ದಿನಗಳಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ 120 ಮಂದಿ ಚೇತರಿಸಿಕೊಳ್ಳುವಷ್ಟರಲ್ಲೇ ಬುಧವಾರ ಮತ್ತೆ 7 ಮಂದಿಗೆ ವಾಂತಿ-ಭೇದಿ ಕಾಣಿಸಿ ಕೊಂಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ….
ಮೈಸೂರಲ್ಲಿ ಆರ್ಥಿಕ ಗಣತಿಗೆ ಚಾಲನೆ
January 23, 2020ಮೈಸೂರು,ಜ.22(ಎಂಟಿವೈ)- ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನು ಷ್ಟಾನ ಮಂತ್ರಾಲಯವು ದೇಶದಾದ್ಯಂತ ನಡೆಸುತ್ತಿರುವ 7ನೇ ಆರ್ಥಿಕ ಗಣತಿಯು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಆರಂಭ ವಾಗಿದ್ದು, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಬುಧವಾರ ಆರ್ಥಿಕ ಗಣತಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು. ಮೈಸೂರು ಮಹಾನಗರಪಾಲಿಕೆ ಕಚೇರಿ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ನಗರದಲ್ಲಿ ರುವ ಸಂಘಟಿತ ಹಾಗೂ ಅಸಂಘಟಿತ ಉದ್ದಿಮೆದಾರರ ಮಾಹಿತಿ ನಮೂದಿಸಲು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ, ಗಣತಿಗೆ ಚಾಲನೆ ನೀಡಲಾಯಿತು. ಪಾಲಿಕೆ ಆಯುಕ್ತ…
ಸಲಗ ದಾಳಿ: ವ್ಯಕ್ತಿಗೆ ಗಾಯ
January 23, 2020ಹನಗೂಡು, ಜ.22- ಒಂಟಿ ಸಲಗ ದಾಳಿಗೆ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ನಾಗರಹೊಳೆಯ ಮತ್ತಿಗೋಡು ಅರಣ್ಯ ವಲಯದ ನೇರಳಕುಪ್ಪೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಶಂಕರ್(50) ಗಾಯಗೊಂಡವರು. ಇಂದು ಬೆಳಿಗ್ಗೆ ಬಾಲಕೃಷ್ಣ ಎಂಬುವರು ತೋಟದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಶಂಕರ್ ಕುಳಿತಿದ್ದರು. ಈ ವೇಳೆÀ ಏಕಾಏಕಿ ಬಂದ ಸಲಗ ಕಾರಿನ ಮೇಲೆ ದಾಳಿ ನಡೆಸಿದೆ. ಇದರಿಂದ ಕಾರಿನಲ್ಲಿದ್ದ ಶಂಕರ್ ಅವರ ಬಲಗಾಲಿಗೆ ತೀವ್ರ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾರಿಯಾಗಿ ದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶಂಕರ್‍ರನ್ನು ಮೈಸೂರಿನ ಖಾಸಗಿ…
ಸೇವಾ ಕಾರ್ಯದ ಮೂಲಕ ಸಮಾಜ ಸೇವಕ ಸುಜಿತ್‍ಕುಮಾರ್ ಹುಟ್ಟುಹಬ್ಬ ಸರಳ ಆಚರಣೆ
January 23, 2020ಮೈಸೂರು,ಜ.22-ನಗರದ ಮೈಸೂರು ಸ್ನೇಹಜೀವಿ ಬಳಗ ಹಾಗೂ ಮಂಡಿ ಲಷ್ಕರ್ ಮೊಹಲ್ಲಾ ಗೆಳೆಯರ ಬಳಗದ ವತಿಯಿಂದ ಸಮಾಜ ಸೇವಕ ಹೆಚ್.ಎಸ್. ಸುಜಿತ್‍ಕುಮಾರ್ ಹುಟ್ಟುಹಬ್ಬವನ್ನು ವಿವಿಧ ಸೇವಾ ಕಾರ್ಯಗಳ ಮೂಲಕ ಇಂದು (ಜ.22) ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇನ್ಫೋಸಿಸ್‍ನ ಪ್ರಾಜೆಕ್ಟ್ ಅಧಿ ಕಾರಿ ಅಮರ್, ನಿಸ್ವಾರ್ಥ ಸೇವೆಯೇ ಮನುಷ್ಯನಿಗೆ ನಿಜವಾದ ಆತ್ಮತೃಪ್ತಿ. ಸೇವೆ ಮಾಡಬೇಕಾದರೆ ಯಾವುದೇ ರೀತಿಯಾ ದಂತಹ ಮುಜುಗರವಿರಬಾರದು. ಮನ ಸಾರೆ ಮಾಡಿದಾಗ ಸಂತೋಷದೊಂದಿಗೆ ನೆಮ್ಮದಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಕೂಡ ಸಮಾಜ…
ವಿವಿಧ ಗ್ರಾಪಂಗಳ 25 ಸ್ಥಾನಗಳಿಗೆ ಉಪ ಚುನಾವಣೆ
January 23, 2020ಮೈಸೂರು, ಜ.22- ಮೈಸೂರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ವಿವಿಧ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಅಧಿಸೂಚನೆ ಹೊರ ಡಿಸಲಾಗಿದ್ದು, ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. 2020ರ ಜ.25 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಜನವರಿ 28 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ, ನಾಮಪತ್ರಗಳನ್ನು ಪರಿಶೀಲನೆ ಜ.29 ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದು ಕೊಳ್ಳಲು ಜ.31 ಕೊನೆಯ ದಿನವಾಗಿರುತ್ತದೆ. ಒಂದು ವೇಳೆ ಮತದಾನ ಅವಶ್ಯವಿದ್ದರೆ ಫೆ.9…
ಅಳಿವಿನಂಚಿನಲ್ಲಿರುವ ಎರಡು ಕಾಡುಪಾಪ ರಕ್ಷಣೆ; ಮೂವರ ಬಂಧನ
January 23, 2020ಮೈಸೂರು,ಜ.22(ಎಂಟಿವೈ)- ಮೈಸೂ ರಿನ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಅಳಿವಿನಂಚಿನಲ್ಲಿರುವ ಕಾಡುಪಾಪ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವ ರನ್ನು ಬಂಧಿಸಿ, ಎರಡು ಜೀವಂತ ಕಾಡುಪಾಪ ಪ್ರಾಣಿಯನ್ನು ರಕ್ಷಿಸಿದ್ದಾರೆ. ಟಿ.ನರಸೀಪುರದಿಂದ ತಾಯೂರಿಗೆ ಹೋಗುವ ರಸ್ತೆಯಲ್ಲಿ ಮೂವರು ಕಾಡು ಪಾಪ ಮಾರಾಟ ಮಾಡಲು ಯತ್ನಿಸು ತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ದಾಳಿ ನಡೆಸಿದಾಗ ಎರಡು ಜೀವಂತ ಕಾಡು ಪಾಪಗಳು ಇದ್ದುದು ಕಂಡು ಬಂದಿದೆ. ಕೂಡಲೇ ಆರೋಪಿಗಳಾದ ನಂಜನ ಗೂಡು ತಾಲೂಕಿನ ಹೆಮ್ಮರಗಾಲ…
ಸಮಾಜದ ಅನಿಷ್ಟ ಆಚರಣೆಗಳ ವಿರುದ್ಧ ಅಂಬಿಗರ ಚೌಡಯ್ಯ ನಿಷ್ಠುರವಾದಿಯಾಗಿದ್ದರು: ಮೈಸೂರಲ್ಲಿ ಅಂಬಿಗರ ಚೌಡಯ್ಯರ ಜಯಂತಿ
January 22, 2020ಮೈಸೂರು, ಜ.21(ಪಿಎಂ)- ಅಸಮಾ ನತೆ, ಅಸ್ಪøಶ್ಯತೆ, ಮೌಢ್ಯ ಹಾಗೂ ಕಂದಾ ಚಾರ ಖಂಡಿಸಿ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ ಶರಣರ ಪೈಕಿ ಅಂಬಿಗರ ಚೌಡಯ್ಯ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು. ಅವರು ಸಮಾಜ ಅನಿಷ್ಟಗಳನ್ನು ನಿಷ್ಠುರವಾಗಿ ಕಠಿಣ ಶಬ್ದಗಳಲ್ಲಿ ಟೀಕಿಸಿದ್ದಾರೆ ಎಂದು ಚಿಂತಕ ಬಿ.ಕುಮಾರಸ್ವಾಮಿ ತಿಳಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡ ಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂ ತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯರ ಜಯಂತಿಯಲ್ಲಿ…
ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಶಿಬಿರ
January 22, 2020ಮುಂಬರುವ ಶೈಕ್ಷಣಿಕ ಸಾಲಿನಿಂದ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್ ಆರಂಭ ಇಲಾಖೆ ಉಪನಿರ್ದೇಶಕ ಡಾ.ಪಾಂಡುರಂಗ ಮಾಹಿತಿ ಮೈಸೂರು, ಜ.21(ಪಿಎಂ)- ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2019ರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದ ಅವಿಭಾಜ್ಯ ಅಂಗ ವೆಂದು ಉಲ್ಲೇಖಿಸಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಿಂದ ಮೈಸೂರು ಜಿಲ್ಲೆಯ ಎಲ್ಲಾ ಹಿರಿಯ ಪ್ರಾಥ ಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ತೆರೆಯಲು ಸಿದ್ಧತೆ ಗಳು ನಡೆದಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಪಾಂಡುರಂಗ ತಿಳಿಸಿದರು. ಮೈಸೂರಿನ ಭಾರತ್…
ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆ ವಿನ್ಯಾಸಕ್ಕೆ ಮಾರುಹೋದ ಡಿಸಿಎಂ ಗೋವಿಂದ ಕಾರ್ಜೋಳ
January 22, 2020ಮೈಸೂರು,ಜ.21(ಎಸ್‍ಪಿಎನ್)-ಮೈಸೂರಿನ ಜಯದೇವ ಆಸ್ಪತ್ರೆಯನ್ನು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗೂ ಕಡಿಮೆ ಇಲ್ಲ ದಂತೆ ನಿರ್ವಹಣೆ ಮಾಡಿರು ವುದು ಸಂತೋಷದ ಸಂಗತಿ ಎಂದು ಉಪ ಮುಖ್ಯ ಮಂತ್ರಿ ಗೋವಿಂದ ಎಂ. ಕಾರ್ಜೋಳ ಅಭಿಪ್ರಾಯ ಪಟ್ಟರು. ಮೈಸೂರು ಕೆಆರ್‍ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗಗಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದರು. ಮೈಸೂರಿನಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ವಿನ್ಯಾಸ ತುಂಬಾ ಚೆನ್ನಾಗಿ ಮೂಡಿಬಂದಿದೆ. ಖ್ಯಾತ ಹೃದಯ ತಜ್ಞ ಡಾ.ಮಂಜುನಾಥ್ ಸಾರಥ್ಯದಲ್ಲಿ ಈ ಆಸ್ಪತ್ರೆ ನಿರ್ವಹಣೆಯಾಗಿರುವುದು…
ಕಲುಷಿತ ನೀರು ಸೇವಿಸಿ: ಅಸ್ವಸ್ಥರ ಸಂಖ್ಯೆ 120ಕ್ಕೆ ಏರಿಕೆ ಕಡಕೊಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ
January 22, 2020ಕಡಕೊಳ, ಜ.20-ಮೈಸೂರು ತಾಲೂ ಕಿನ ಕಡಕೊಳ ಗ್ರಾಮದ ಜನತಾ ಕಾಲೋನಿ ಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥ ಗೊಂಡವರ ಸಂಖ್ಯೆ 120ಕ್ಕೆ ಏರಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳ ವಾರ ಗ್ರಾಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರಿಗೆ ವಾಂತಿ-ಭೇದಿ ಕಾಣಿಸಿಕೊಂಡಿರುವ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಗ್ರಾಮಸ್ಥರು, ಮುಡಾ…










