ಮೈಸೂರು, ಜ. 23- ಇಂದು ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಕೇವಲ ಒಂದು ಪುಸ್ತಕ ಬರೆದವರಿಗೆಲ್ಲ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಅನರ್ಹರು, ಯೋಗ್ಯರಲ್ಲದವರು, ಲಾಬಿ ಮಾಡಿ ದೊಡ್ಡ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದ್ದು, ಅರ್ಹರಿಗೆ ಪ್ರಶಸ್ತಿಗಳು ದಕ್ಕುತ್ತಿಲ್ಲ ಎಂದು ಖ್ಯಾತ ಸಾಹಿತಿ, ನೃಪತುಂಗ ಪ್ರಶಸ್ತಿ ಪುರಸ್ಕøತರಾದ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬೇಸರ ವ್ಯಕ್ತಪಡಿಸಿದರು. ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಎನ್ಕೆ ಅವರ ಎರಡು ಕಾದಂಬರಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ದೇಜಗೌ ಅವರಂತಹ ದಿಗ್ಗಜ ಸಾಹಿತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಾರದಿರುವುದು…
ಕೊಡಗಿನ ಪೊಲೀಸರಿಂದ ವಲಸೆ ಕಾರ್ಮಿಕರ ದಾಖಲಾತಿ ಪರಿಶೀಲನೆ
January 24, 2020ಮಡಿಕೇರಿ, ಜ.23(ಪ್ರಸಾದ್, ಸದಾ ನಂದ)- ಕೊಡಗಿನಲ್ಲಿ ಉಗ್ರ ಚಟುವಟಿಗೆ, ಮಂಗಳೂರು ಏರ್‍ಪೋರ್ಟ್ ಬಾಂಬ್ ಪ್ರಕರಣ ಮತ್ತು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಹೊರ ರಾಜ್ಯದ ಅಪರಿಚಿತ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಕೊಡಗು ಪೊಲೀಸರಿಗೆ ದೂರುಗಳು ಬಂದ ಹಿನ್ನಲೆಯಲ್ಲಿ ಇಂದು ಕೊಡಗು ಜಿಲ್ಲೆಯಾದ್ಯಂತ ಸಹಸ್ರ ಸಂಖ್ಯೆಯ ವಲಸೆ ಕಾರ್ಮಿಕರ ದಾಖಲೆಗಳನ್ನು ಪರಿ ಶೀಲನೆಗೆ ಒಳಪಡಿಸಲಾಯಿತು. ಹೊರ ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ತೋಟಗಳ ಮಾಲೀಕರು, ಹೊಟೇಲ್, ರೆಸಾರ್ಟ್, ಬಾರ್‍ಗಳು, ಕಟ್ಟಡ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ರಿಗೆ ಈ…
ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾಯ್ದೆ ಅಗತ್ಯ
January 23, 2020ಮೈಸೂರು, ಜ. 22(ಆರ್‍ಕೆ)- ರಾಜ್ಯ ದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ವಿಶೇಷ ಕಾಯ್ದೆ ಜಾರಿಗೊಳಿಸ ಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ವತಿಯಿಂದ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ‘ಅಮ್ಮ ನಿನಗೊಂದು ನಮನ’ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವ ರಿಗೆ ನಮನ, ಅಸಂಘಟಿತ ಮಹಿಳಾ ಕಾರ್ಮಿ ಕರ ಜಾಗೃತಿ ಶಿಬಿರ, ಆರೋಗ್ಯ-ಕೌಶಲ ಮತ್ತು ಉಚಿತ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ…
`ಫ್ರೀ ಕಾಶ್ಮೀರ್’ ಫಲಕ ಪ್ರದರ್ಶನ ದೇಶದ್ರೋಹವಲ್ಲ
January 23, 2020ಮೈಸೂರು,ಜ.22(ಎಂಟಿವೈ)- ಕಾಶ್ಮೀರದಲ್ಲಿ ಇಂದಿಗೂ ಭಯದ ವಾತಾವರಣವಿದೆ. ಅದನ್ನು ಹೋಗಲಾಡಿಸು ವಂತೆ ಯುವತಿ ನಳಿನಿ ಬಾಲ ಕುಮಾರ್ ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ್ದಾರೆ ಎಂದು ತಿಳಿದು ಬಂದಿದೆ. ಇದು ದೇಶದ್ರೋಹದ ಕೆಲಸವಲ್ಲ. ಆದರೆ ಆಕೆಯ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ನಿರ್ಣಯ ಕೈಗೊಂಡಿರುವುದು ಅಸಂವಿಧಾನಿಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ರಾಮಕೃಷ್ಣನಗರದ ತಮ್ಮ ನಿವಾಸದ ಬಳಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿಲುವಿನಿಂದಾಗಿ ಕಾಶ್ಮೀರದಲ್ಲಿ ಇಂದಿಗೂ ತುರ್ತು ಪರಿಸ್ಥಿತಿಯ ವಾತಾವರಣವಿದೆ….
ಆನ್‍ಲೈನ್ ಸಿಇಟಿ ಸದ್ಯಕ್ಕಿಲ್ಲ
January 23, 2020ಬೆಂಗಳೂರು, ಜ.22- ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಆನ್‍ಲೈನ್ ಮೂಲಕ ನಡೆಸುವ ಮಾದರಿಯಲ್ಲೇ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿತ್ತಾದರೂ ಸರಕಾರದಿಂದ ಅನುಮತಿ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಆನ್‍ಲೈನ್ ಸಿಇಟಿ ಇರುವುದಿಲ್ಲ ಎನ್ನಲಾಗಿದೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ವಿಜ್ಞಾನ, ಬಿ-ಫಾರ್ಮಾ, ಡಿ- ಫಾರ್ಮಾ ಸಹಿತ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರತಿ ವರ್ಷ ಸಾಮಾನ್ಯ…
ಹೊಣೆಗಾರಿಕೆ ಅರಿತು ಕಡಿಮೆ ಖರ್ಚಿನಲ್ಲಿ ಸರಳ ಬದುಕು ಬಾಳಿ…
January 23, 2020ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ ನೂತನ ವಧು-ವರರಿಗೆ ಆಶೀರ್ವಾದ ಮೈಸೂರು, ಜ.22(ಆರ್‍ಕೆಬಿ)- ಮದುವೆ ಎಂದರೆ ಹೆಣ್ಣಿಗೆ ಗಂಡು ತಾಳಿ ಕಟ್ಟುವುದು, ಗಂಡಿಗೆ ಹೆಣ್ಣು ಮಾಲೆ ಹಾಕುವುದಷ್ಟೇ ಅಲ್ಲ. ಜವಾಬ್ದಾರಿ ವಹಿಸಿಕೊಳ್ಳುವುದೇ ಮದುವೆ. ಪತಿಗೆ ಮಾತ್ರ ಜವಾಬ್ದಾರಿ ಅಲ್ಲ. ಪತಿ-ಪತ್ನಿ ಇಬ್ಬರಿಗೂ ಜವಾಬ್ದಾರಿ ಇದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಿ.ವೀರೇಂದ್ರ ಹೆಗಡೆ ತಿಳಿಸಿದರು. ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆ ಯಲ್ಲಿ ಸಾಮೂಹಿಕ ವಿವಾಹ ಕಾರ್ಯ ಕ್ರಮಕ್ಕೆ…
ಸುಸ್ತಿ ಸಾಲ ವಸೂಲಾತಿ ಸ್ಥಗಿತಕ್ಕೆ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಸೂಚನೆ
January 23, 2020ಬೆಂಗಳೂರು, ಜ.22(ಕೆಎಂಶಿ)-ಸುಸ್ತಿ ಕೃಷಿ ಸಾಲ ವಸೂ ಲಾತಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಇಂದಿಲ್ಲಿ ಸಹಕಾರಿ ಬ್ಯಾಂಕುಗಳಿಗೆ ಆದೇಶ ಮಾಡಿದೆ. ಈ ಹಿಂದೆ ಸರ್ಕಾರ ಹೊರಡಿಸಿದ್ದ ಆದೇಶದನ್ವಯ ಸುಸ್ತಿ ಸಾಲ ಕ್ಕಾಗಿ ಸಾಲ ಪಡೆದ ರೈತರಿಂದ ವಸೂಲಾತಿಗೆ ಅಧಿಕಾರಿಗಳು ಇನ್ನಿಲ್ಲದ ಹಿಂಸೆ ನೀಡುತ್ತಿದ್ದರು. ಪಾವತಿಸದ ರೈತರಿಂದ ಟ್ರ್ಯಾಕ್ಟರ್ ಸೇರಿ ದಂತೆ ಕೃಷಿ ಪರಿಕರ ಇಲ್ಲವೇ ಇನ್ನಿತರ ಪರಿ ಕರಗಳನ್ನು ವಶಪಡಿಸಿಕೊಂಡಿರುವ ಘಟನೆಗಳು ರಾಜ್ಯಾ ದ್ಯಂತ ನಡೆದಿವೆ. ಸಾಲ ವಸೂಲಾತಿ ಸರ್ಕಾರದ ನಿರ್ಧಾರಕ್ಕೆ ರೈತರಿಂದ ಮತ್ತು ಪ್ರತಿಪಕ್ಷದ ನಾಯಕರಿಂದ…
ಮೈಸೂರು ಜಿಲ್ಲಾಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ
January 23, 2020ಮೈಸೂರು, ಜ.22(ಎಂಕೆ)- ಕಾಂಗ್ರೆಸ್ ಸರ್ಕಾ ರದ ಆಡಳಿತಾವಧಿಯಲ್ಲಿ ನಿರ್ಮಿಸಿರುವ ಜಿಲ್ಲಾಸ್ಪತ್ರೆಗೆ ಈಗಿನ ಬಿಜೆಪಿ ಸರ್ಕಾರ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸದೆ ಉದ್ಘಾಟನೆಗೆ ಮುಂದಾಗಿರುವುದು ಸರಿಯಲ್ಲ. ಮೂಲಭೂತ ಸೌಕರ್ಯ ಕಲ್ಪಿಸುವವ ರೆಗೂ ಉದ್ಘಾಟನಾ ಕಾರ್ಯಕ್ರಮ ಮುಂದೂಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೆಆರ್‍ಎಸ್ ರಸ್ತೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2016-17ನೇ ಸಾಲಿನ ಆಯವ್ಯಯದಲ್ಲಿ 64 ಕೋಟಿ ರೂ. ವೆಚ್ಚದಲ್ಲಿ 5 ಅಂತಸ್ತಿನ ಜಿಲ್ಲಾಸ್ಪತ್ರೆ ಕಟ್ಟಡವನ್ನು ಕಟ್ಟಿಸಿದ್ದು. ಅಲ್ಲದೆ…
ಅತ್ಯಾಚಾರಿಗಳ ಗಲ್ಲು ಶಿಕ್ಷೆ ಜಾರಿಗೆ ಕಾಲಮಿತಿ ವಿಧಿಸಿ: `ಸುಪ್ರೀಂ’ಗೆ ಕೇಂದ್ರ ಮನವಿ
January 23, 2020ನವದೆಹಲಿ, ಜ.22- ನಿರ್ಭಯಾ ಪ್ರಕರಣ ಹಿನ್ನೆಲೆಯಲ್ಲಿ, ಅತ್ಯಾಚಾರಿಗಳ ಮರಣದಂಡನೆ ಜಾರಿಗೆ ಕಾಲಮಿತಿ ವಿಧಿಸುವಂತೆ ಹಾಗೂ 2014ರ ಜನವರಿಯ ತೀರ್ಪಿನಲ್ಲಿ ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದೆ. ಅತ್ಯಾಚಾರ ಪ್ರಕರಣ ಸಂಬಂಧ ಮರು ಪರಿಶೀಲನಾ ಮತ್ತು ಕ್ಷಮಾದಾನ ಅರ್ಜಿಗಳ ಸಲ್ಲಿಕೆ ಕುರಿತು ಮಾರ್ಗಸೂಚಿಗಳನ್ನು ರಚಿಸುವಂತೆ ಸರ್ಕಾರ ಮನವಿ ಮಾಡಿದೆ. ಮೇಲ್ಮನವಿಗಳನ್ನು ತಿರಸ್ಕರಿಸಿದ ನಂತರ ಮರಣದಂಡನೆ ಶಿಕ್ಷೆಗೊಳಗಾಗುವ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಮಯದ ಮಿತಿಯನ್ನು ನಿಗದಿಪಡಿಸಬೇಕು ಎಂದು ಗೃಹ ಸಚಿವಾಲಯ ಕೋರಿದೆ. ಡೆತ್ ವಾರಂಟ್ ಜಾರಿಗೊಳಿಸಿದ 7…
ಹೆಚ್‍ಟಿ, ಇಹೆಚ್‍ಟಿ ಕೈಗಾರಿಕಾ ಗ್ರಾಹಕರಿಗೆ ವಿಶೇಷ ಪ್ರೋತ್ಸಾಹ
January 23, 2020ಮೈಸೂರು, ಜ. 22(ಆರ್‍ಕೆ)- ಕರ್ನಾ ಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‍ಸಿ) ಜಾರಿಗೆ ತಂದಿರುವ ವಿಶೇಷ ಪ್ರೋತ್ಸಾಹ ಯೋಜನೆ(Special Incentive Scheme to EHT/HT Industrial Consumers)ಗೆ ಕೈಗಾರಿಕೋದ್ಯಮಿ ಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್(ಸೆಸ್ಕ್)ನಿಂದ ಮೈಸೂ ರಿನ ವಿಜಯನಗರ 1ನೇ ಹಂತದಲ್ಲಿರುವ ನಿಗಮದ ಕಾರ್ಪೊರೇಟ್ ಕಚೇರಿ ಸಭಾಂ ಗಣದಲ್ಲಿ ಇಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜ ನಗರ, ಕೊಡಗು, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಂಘಗಳ…










