ಮೈಸೂರು, ಜ.29-ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಹೋಟೆಲ್ ಕಂಟ್ರಿ ಇನ್‍ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನಗರದ ಖ್ಯಾತ ವೈದ್ಯರು, ಹೃದ್ರೋಗ ತಜ್ಞರು ಹಾಗೂ ಫ್ರೀಮಾಸನ್ಸ್ ಲಾಡ್ಜ್ ಮೈಸೂರು ನಂ.34ರ ಸದಸ್ಯರೂ ಆದ ಡಾ.ಸಿ.ಡಿ.ಶ್ರೀನಿವಾಸಮೂರ್ತಿ ಅವರಿಗೆ ಗ್ರ್ಯಾಂಡ್ ಮಾಸ್ಟರ್ ಆಫ್ ದಿ ಗ್ರ್ಯಾಂಡ್ ಲಾಡ್ಜ್ ಆಫ್ ಇಂಡಿಯಾದ ಓಎಸ್‍ಎಂ ಹಾಗೂ `ಮೋಸ್ಟ್ ವರ್ಷಿಪ್‍ಫುಲ್ ಬ್ರದರ್’ ಆದ ರಾಜೀವ್ ರಾಮಕೃಷ್ಣ ಖಾಂಡೇಲ್‍ವಾಲ ಅವರು `50 ವರ್ಷಗಳ ದೀರ್ಘಾವಧಿಯ ಸೇವಾ ಪ್ರಶಸ್ತಿ’ (50 years Long Term Service Jewel) ಪ್ರದಾನ…
ಏಕಲವ್ಯನಗರದ ನರ್ಮ್ ಮನೆಗಳ ಮಂಜೂರಾತಿಗೆ ಆಗ್ರಹಿಸಿ ಮುಂದುವರೆದ ಪ್ರತಿಭಟನೆ ಸ್ಥಳದಲ್ಲೇ ಅಡುಗೆ, ಭೋಜನ
January 30, 2020ಮೈಸೂರು, ಜ.29(ಪಿಎಂ)- ಏಕಲವ್ಯ ನಗರದ ನರ್ಮ್ ಮನೆಗಳ ಮಂಜೂರಾ ತಿಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾ ವಧಿ ಅಹೋರಾತ್ರಿ ಪ್ರತಿಭಟನೆ ಬುಧವಾ ರವೂ ಮುಂದುವರೆಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮುಂದುವರೆಸಿದ್ದು, ಇಂದು ಮಧ್ಯಾಹ್ನ ಸ್ಥಳದಲ್ಲೇ ಅಡುಗೆ ಸಿದ್ಧಪಡಿಸಿ ಊಟ ಮಾಡುವ ಮೂಲಕ ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು. ಏಕಲವ್ಯನಗರದ 1040 ನರ್ಮ್ ಮನೆ ಗಳ ಆಯ್ಕೆ ಪಟ್ಟಿಯಿಂದ ಅರ್ಹರಾದ ನಮ್ಮನ್ನು ಆಯ್ಕೆ ಮಾಡದೇ ಕೈಬಿಡಲಾ ಗಿದೆ. ಖಾಲಿ ಉಳಿದಿದ್ದ ಮನೆಗಳಲ್ಲಿ ನಾವು ವಾಸಕ್ಕೆ ಸೇರಿಕೊಂಡಿದ್ದು, ಹಾಲಿ…
ಮಹಿಳೆಯರೂ ಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸಬಹುದು: ಸುಪ್ರೀಂಕೋರ್ಟ್‍ನಲ್ಲಿ ಮುಸ್ಲಿಂ ಕಾನೂನು ಮಂಡಳಿ ಪ್ರಮಾಣಪತ್ರ ಸಲ್ಲಿಕೆ
January 30, 2020ನವದೆಹಲಿ: ಮುಸ್ಲಿಂ ಮಹಿಳೆಯರು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಬಹುದು. ಮತ್ತು ಇದಕ್ಕೆ ವಿರುದ್ಧವಾಗಿರುವ ಫತ್ವಾಸ್‍ಅನ್ನು ನಿರ್ಲಕ್ಷಿಸಿ ಎಂದು ಅಖಿಲ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‍ಬಿ) ಬುಧವಾರ ಸುಪ್ರೀಂಕೋರ್ಟ್‍ಗೆ ಹೇಳಿದೆ. ಈ ವಿಚಾರವಾಗಿ ಸುಪ್ರೀಂಕೋರ್ಟ್‍ನಲ್ಲಿ ಅಫಿಡವಿಟ್ ಸಲ್ಲಿಸಿರುವ ಮುಸ್ಲಿಂ ಕಾನೂನು ಮಂಡಳಿ, ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಕ್ಕೆ ಅವಕಾಶ ಮುಕ್ತವಾಗಿದೆ. ಅವರು ಹಾಗೆ ಮಾಡುವುದು ಕಡ್ಡಾಯವೇನಲ್ಲ. ಮಹಿಳೆಯರು ಮಸೀದಿ ಬದಲಿಗೆ ಮನೆಯಲ್ಲೂ ಪ್ರಾರ್ಥನೆ ಸಲ್ಲಿಸಲು ಆಯ್ಕೆ ಕೂಡ ಇದೆ. ಮಹಿಳೆಯರಿಗೂ ಮಸೀದಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್…
ಹಣಕ್ಕಾಗಿ ದೊಣ್ಣೆಯಿಂದ ಹೊಡೆದು ಮಹಿಳೆ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
January 30, 2020ಮೈಸೂರು, ಜ. 29(ಆರ್‍ಕೆ)- ಹಣಕ್ಕಾಗಿ ಗಲಾಟೆ ಮಾಡಿ, ದೊಣ್ಣೆಯಿಂದ ಹೊಡೆದು ಮಹಿಳೆ ಕೊಲೆ ಮಾಡಿದ್ದ ಆರೋಪಿಗೆ ಮೈಸೂರು ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ. ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದ ನಂಜುಂಡ ನಾಯಕ ಅಲಿಯಾಸ್ ಈರುಳ್ಳಿ ನಂಜುಂಡ ನಾಯಕ ಶಿಕ್ಷೆಗೊಳಗಾದ ಹತ್ಯೆ ಆರೋಪಿ. ಹೊಸಕೋಟೆ ಗ್ರಾಮದ ವಿಧವೆ ಶ್ರೀಮತಿ ರೇವಮ್ಮ ಎಂಬುವರನ್ನು 2016ರ ಮಾರ್ಚ್ 28ರಂದು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ನಂಜುಂಡ ನಾಯಕನ ವಿರುದ್ಧ ಬದನವಾಳು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದೇ…
ಎರಡೇ ಗಂಟೆಯಲ್ಲಿ ಸಾವಿರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ!
January 30, 2020ಎನ್‍ಆರ್ ಸಂಚಾರಿ ಪೊಲೀಸರಿಂದ 1.64 ಲಕ್ಷ ದಂಡ ವಸೂಲಿ ಮೈಸೂರು, ಜ.29(ಆರ್‍ಕೆ)-ಮಿಂಚಿನ ಕಾರ್ಯಾಚರಣೆ ನಡೆಸಿದ ಎನ್‍ಆರ್ ಸಂಚಾರ ಠಾಣೆ ಪೊಲೀಸರು, ಕೇವಲ ಎರಡೇ ಗಂಟೆಯಲ್ಲಿ ಸಾವಿರ ಸಂಚಾರ ನಿಯಮ ಉಲ್ಲಂ ಘನೆ ಪ್ರಕರಣ ದಾಖಲಿಸಿ, 1,64,800 ರೂ. ದಂಡ ವಸೂಲಿ ಮಾಡಿದ್ದಾರೆ. ಮೈಸೂರಿನ ಮಂಡಿ ಮೊಹಲ್ಲಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ನಿರ್ದೇಶನದಂತೆ ಎನ್‍ಆರ್ ಸಂಚಾರ ಠಾಣೆ ಇನ್ಸ್‍ಪೆಕ್ಟರ್…
ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಇಂದು ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಜಾಥಾ
January 30, 2020ಸಾರ್ವಜನಿಕರ ಹಿತದೃಷ್ಟಿಯಿಂದ ವಾರದ ರಜೆ ಇರುವವರು, ಕರ್ತವ್ಯ ಮುಗಿಸಿದವರು, ಕುಟುಂಬದವರು ಭಾಗಿ ಮೈಸೂರು, ಜ.29(ಪಿಎಂ)- ರಾಜ್ಯ ಸರ್ಕಾರಿ ನೌಕರರ ವೇತನಕ್ಕೆ ಹೋಲಿಸಿದರೆ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವೇತನ ಶೇ.30ರಷ್ಟು ಕಡಿಮೆ ಇದೆ. ಹೀಗಾಗಿ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿ ಜ.30ರಂದು ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಗ್ರಾಮಾಂತರ ಕೆಎಸ್‍ಆರ್‍ಟಿಸಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವೈ.ಇ.ಮಂಜುನಾಥ್ ತಿಳಿಸಿದರು….
‘ಬಿತ್ತನೆ ಬೀಜಗಳ ಮಸೂದೆ-2019’ರ ಕುರಿತು ಜ.30ರಂದು ವಿಚಾರ ಸಂಕಿರಣ
January 28, 2020ಮೈಸೂರು: ಕೇಂದ್ರ ಸರ್ಕಾರ ಕಾಯ್ದೆಯಾಗಿ ಜಾರಿಗೊಳಿಸಲು ಉದ್ದೇ ಶಿಸಿರುವ `ಬಿತ್ತನೆ ಬೀಜಗಳ ಮಸೂದೆ- 2019’ರ ಸಾಧಕ -ಬಾಧಕ ಕುರಿತಂತೆ ಜ.30 ರಂದು ರಾಜ್ಯ ರೈತ ಸಂಘ ಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಮೈಸೂ ರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದ…
ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆಗೀಡಾಗಿದ್ದ ವಾಲೆ ಮಹೇಶ ಸಾವು
January 28, 2020ಆತನ ಕೋರಿಕೆಯಂತೆ ಪುತ್ರಿಗೆ ಪಾರ್ಥಿವ ಶರೀರ ದರ್ಶನ ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ, ಆಕೆಗೆ ಹೆಣ್ಣು ಮಗು ಜನನಕ್ಕೆ ಕಾರಣನಾಗಿ ಪೋಕ್ಸೋ ಪ್ರಕರಣದಡಿ ಜೀವಾ ವಧಿ ಶಿಕ್ಷೆಗೊಳಗಾಗಿದ್ದ ಮೈಸೂರಿನ ವಾಲೆ ಮಹೇಶ (36) ಸೋಮವಾರ ಮುಂಜಾನೆ ಅಸುನೀಗಿದ್ದಾನೆ. 2017ರ ಡಿಸೆಂಬರ್ 21ರಂದು ಮೈಸೂರು ನ್ಯಾಯಾಲಯವು ಆರೋಪಿ ಮಹೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲುವಾಸ ಅನುಭವಿಸುತ್ತಿದ್ದ ಆತ ಕರುಳು ಬೇನೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಗೆಂದು ಪೆರೋಲ್ ಮೇಲೆ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ. ಫೆಬ್ರವರಿ ಮೊದಲ ವಾರ ಮತ್ತೆ ಜೈಲಿಗೆ…
ಭವಿಷ್ಯದಲ್ಲಿ ಮೈಸೂರು ರೈಲು ನಿಲ್ದಾಣ ವಿಸ್ತರಣೆಗಾಗಿ ಪಕ್ಕದ ಕಾಂಗ್ರೆಸ್ ಭವನದ ಜಾಗಕ್ಕೆ ರೈಲ್ವೆ ಬೇಡಿಕೆ
January 24, 2020* ಹಿಂದಿನ ಡಿಆರ್‍ಎಂ ರಾಜಕುಮಾರ್ ಲಾಲ್‍ರಿಂದ ರೈಲ್ವೆ ಮಂಡಳಿಗೆ ಪತ್ರ * ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಕಳವಳ; ವಿರೋಧ ಮೈಸೂರು, ಜ.23(ಆರ್‍ಕೆ)- ಭವಿಷ್ಯ ದಲ್ಲಿ ರೈಲ್ವೆ ನಿಲ್ದಾಣ ವಿಸ್ತರಿಸಿ ಪ್ರಯಾಣಿ ಕರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ಕೊಡುವ ದೃಷ್ಟಿಯಿಂದ ಮೈಸೂರಿನ ಹೃದಯ ಭಾಗದಲ್ಲಿರುವ ಇಂದಿರಾ ಗಾಂಧಿ ಕಾಂಗ್ರೆಸ್ ಭವನವಿರುವ ಜಾಗಕ್ಕಾಗಿ ರೈಲ್ವೆ ಇಲಾಖೆ ಬೇಡಿಕೆ ಸಲ್ಲಿಸಿದೆ. ನೈಋತ್ಯ ರೈಲ್ವೆ ವಿಭಾಗದ ಈ ಹಿಂದಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜ ಕುಮಾರ್ ಲಾಲ್, ಮೈಸೂರು ರೈಲು ನಿಲ್ದಾ…
`ಗೂಂಡಾ’ ಪದ ಬಳಕೆ: ಸಿದ್ದರಾಮಯ್ಯ ವಿರುದ್ಧ ವಕೀಲರ ಪ್ರತಿಭಟನೆ
January 24, 2020ಮೈಸೂರು,ಜ.23(ಎಂಟಿವೈ)-ವಕೀಲರ ಸಭೆಯಲ್ಲಿ ಕೆಲವರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಹಿಂಪ ಡೆದು, ಕ್ಷಮೆಯಾಚಿಸುವಂತೆ ಆಗ್ರಹಿಸಿ ಮೈಸೂ ರಿನ ವಕೀಲರು ಗುರುವಾರ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಗುರುವಾರ ಬೆಳಿಗ್ಗೆ ವಿಶೇಷ ಸಭೆ ನಡೆ ಸಿದ ವಕೀಲರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಕೆಲವು ವಕೀ ಲರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಈ ಹೇಳಿಕೆ ವಕೀ ಲರನ್ನು ಅಪಮಾನಿಸಿದಂತಾಗಿದೆ. ಈ ಕುರಿತು ಖಂಡನಾ ನಿರ್ಣಯ…










