ಬೆಂಗಳೂರು,ಜ.31- ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ನೇಮಕ ಹೊರಬೀಳುತ್ತಿದ್ದಂತೆ ಪ್ರವೀಣ್ ಸೂದ್ ಅವರು ಡಿಜಿ-ಐಜಿ ಆಗಿ ಅಧಿಕಾರ ಸ್ವೀಕರಿಸಿದರು. ನಿರ್ಗ ಮಿತ ಡಿಜಿ-ಐಜಿ ನೀಲಮಣಿ ಎನ್ ರಾಜು ಅವರು ಅಧಿಕಾರ ಹಸ್ತಾಂತರಿಸಿದರು. ಇಂದು ನೀಲಮಣಿ ಎನ್ ರಾಜು ನಿವೃತ್ತಿಯಾಗಿದ್ದು, ಬೆಳಿಗ್ಗೆ ಅವರಿಗೆ ಬೀಳ್ಕೊಡುಗೆ ನೀಡಲಾಗಿತ್ತು. ಡಿಜಿ ಸ್ಥಾನಕ್ಕೆ ಎ.ಎಂ. ಪ್ರಸಾದ್ ಹಾಗೂ ಪ್ರವೀಣ್ ಸೂದ್ ನಡುವೆ…
ಮಾಧ್ಯಮಗಳ ಆರೋಗ್ಯ ಬಹುಬೇಗ ಸುಧಾರಿಸಲಿ, ಇಲ್ಲವೇ ಪರ್ಯಾಯ ಪತ್ರಿಕೋದ್ಯಮವೇ ಉದಯಿಸಲಿ
February 1, 2020ಮೈಸೂರು, ಜ.31(ಪಿಎಂ)- ಡಾ.ಅಂಬೇ ಡ್ಕರ್ ಅಂದು ಪತ್ರಿಕಾರಂಗ ಯಾವುದನ್ನು ಮಾಡಬಾರದು ಎಂದು ಹೇಳಿದ್ದರೋ ಪ್ರಸ್ತುತ ಅದನ್ನೇ ಬಹುಪಾಲು ಮಾಧ್ಯಮ ಗಳು ಮಾಡುತ್ತಿವೆ. ಮಾಧ್ಯಮಗಳ ಆರೋಗ್ಯ ಬಹುಬೇಗ ಸುಧಾರಿಸಲಿ ಇಲ್ಲವೇ ಇದಕ್ಕೆ ಪರ್ಯಾಯ ಪತ್ರಿಕೋದ್ಯಮವೇ ಉದಯಿ ಸಲಿ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತ ರಣಾ ಕೇಂದ್ರದ ವತಿಯಿಂದ `ಮೂಕ್ ನಾಯಕ್ ಪತ್ರಿಕೆ: 100 ವರ್ಷ’ ಕುರಿತಂತೆ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ…
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡರಿಗೆ ಹುಟ್ಟುಹಬ್ಬದ ಸಂಭ್ರಮ
February 1, 2020ಮೈಸೂರು, ಜ.31- ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅವರು ಧಾರ್ಮಿಕ ಹಾಗೂ ಸಾಮಾಜಿಕ ಕೈಂಕರ್ಯ ಗಳ ಮೂಲಕ ತಮ್ಮ 33ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಕೊಂಡರು. ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಸಲ್ಲಿಸಿದ ಬಳಿಕ ಬೆಟ್ಟದಲ್ಲೇ ಸ್ಥಳೀ ಯರು ಆಯೋ ಜಿಸಿದ್ದ ಸಂಭ್ರಮಾಚರಣೆ ಯಲ್ಲಿ ಭಾಗಿಯಾದರು. ಬಳಿಕ ಸಮೀಪದ ಸರ್ಕಾರಿ ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಯ ದರ್ಶನ ಪಡೆದರು. ಎಂಸಿಡಿಸಿಸಿ ಬ್ಯಾಂಕ್‍ನಲ್ಲಿ ಸಿಬ್ಬಂದಿ ವತಿಯಿಂದ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡರ…
ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ನಾಳೆಯಿಂದ ಫೆ.9ರವರೆಗೆ `ಗಾಂಧಿ ಶಿಲ್ಪ ಬಜಾರ್’
January 30, 2020ಮೈಸೂರು, ಜ.29(ಪಿಎಂ)- ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಅಭಿ ವೃದ್ಧಿ ಆಯುಕ್ತರ ಕಚೇರಿ, ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್ ಜಂಟಿ ಆಶ್ರಯ ದಲ್ಲಿ ಜ.31ರಿಂದ ಫೆ.9ರವರೆಗೆ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟದ `ಗಾಂಧಿ ಶಿಲ್ಪ ಬಜಾರ್’ ಅನ್ನು ಅರ್ಬನ್ ಹಾತ್‍ನಲ್ಲಿ ಏರ್ಪಡಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾ ಗದ ನಿರ್ದೇಶಕ (ಯೋಜನೆಗಳು ಮತ್ತು ಅಭಿವೃದ್ಧಿ) ಡಾ.ಸಿ.ರಂಗನಾಥಯ್ಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪರಿಶಿಷ್ಟ…
ಫೆ.9ರಂದು `ಸ್ವರಾನುಭೂತಿ’ ಸಂಗೀತ ಕಾರ್ಯಕ್ರಮ
January 30, 2020ಮೈಸೂರು, ಜ.29(ಪಿಎಂ)- ಮಾರಣಾಂತಿಕ ಕಾಯಿಲೆಯಿಂದ ನರಳುವವರ ಆರೈಕೆಗಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (ಎಸ್‍ವಿವೈಎಂ) `ಉಪಶಮನ ಆರೈಕೆ ಯೋಜನೆ’ ನಡೆಸು ತ್ತಿದೆ. ಈ ಯೋಜನೆಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಗಾಯಕಿ ದಿವ್ಯಾ ರಾಘವನ್ ಉಪಸ್ಥಿತಿಯಲ್ಲಿ ಫೆ.9ರಂದು `ಸ್ವರಾನುಭೂತಿ’ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಯೋಜನೆ ನಿರ್ದೇಶಕ ರಾಮಕೃಷ್ಣ ಮುದ್ರೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಶಮನ ಆರೈಕೆ ಬಗ್ಗೆ ಸಮುದಾಯದಲ್ಲಿ…
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಾಣ ಮತ್ತೆ ಚಾಲ್ತಿಗೆ
January 30, 2020ದೇಶದ 6 ಹೈಸ್ಪೀಡ್ ರೈಲ್ವೆ ಕಾರಿಡಾರ್, ಸೆಮಿ, ಮೀಸಲು ಸರಕು ಕಾರಿಡಾರ್ ಪ್ರಸ್ತಾಪ ಮುಂದಿನ 2 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ ನವದೆಹಲಿ: ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗ ಸೇರಿ ಇತರ 6 ಹೈಸ್ಪೀಡ್ ರೈಲ್ವೆ ಕಾರಿಡಾರ್, ಸೆಮಿ ಹಾಗೂ 4 ಮೀಸಲು ಸರಕು ಕಾರಿಡಾರ್‍ಗಳನ್ನು ಗುರುತಿಸಲಾ ಗಿದೆ. ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್ ಮಾತನಾಡಿ, ರೈಲ್ವೆಯು 6 ಹೈಸ್ಪೀಡ್ ಮತ್ತು ಸೆಮಿ ಸ್ಪೀಡ್ ರೈಲು ಕಾರಿಡಾರ್‍ಗಳನ್ನು ಗುರುತಿಸಲಾಗಿದೆ. ಎಲ್ಲ ಕಾರಿಡಾರ್‍ಗಳ ಸಮಗ್ರ ಯೋಜನಾ ವರದಿಯು ಒಂದೆರಡು ವರ್ಷಗಳಲ್ಲಿ ಸಿದ್ಧವಾಗಲಿದೆ…
ಖಾಸಗಿ ಬ್ಯಾಂಕ್ ಮಾಜಿ ಅಧಿಕಾರಿ ನಿಗೂಢ ಸಾವು
January 30, 2020ಮೈಸೂರು, ಜ.29(ಆರ್‍ಕೆ)-ಖಾಸಗಿ ಬ್ಯಾಂಕಿನ ಮಾಜಿ ಅಧಿಕಾರಿಯೋರ್ವರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಪತ್ನಿ ಮತ್ತು ಆಕೆಯ ಸಹೋದರನನ್ನು ವಶಕ್ಕೆ ಪಡೆ ದಿರುವ ಮೈಸೂರಿನ ವಿಜಯನಗರ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮುಡಿಗುಂಡಂ ನಿವಾಸಿ ನಾಗೇಂದ್ರ ಮೂರ್ತಿ ಎಂಬುವರ ಪುತ್ರ ಸುಬ್ರಹ್ಮಣ್ಯ(35) ನಿಗೂಢ ವಾಗಿ ಸಾವನ್ನಪ್ಪಿದವರಾಗಿದ್ದು, ಇವರು ಈ ಹಿಂದೆ ಬೆಂಗಳೂರಿನ ಬಹುರಾಷ್ಟ್ರೀಯ ಖಾಸಗಿ ಬ್ಯಾಂಕ್‍ವೊಂದರ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಪೀಡಿತರಾಗಿದ್ದ ಸುಬ್ರಹ್ಮಣ್ಯ ತಮ್ಮ ಪತ್ನಿಗೆ ಸೇರಿದ 87 ಲಕ್ಷ ರೂ. ಗಳನ್ನು…
ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನ
January 30, 2020ಮೈಸೂರು,ಜ.29(ಎಂಕೆ)- ಪೊಲೀಸ್ ತರಬೇತಿ ಶಾಲೆ ವತಿಯಿಂದ 4ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್‍ಸ್ಟೇಬಲ್, ರೈಲ್ವೇಸ್ ಮತ್ತು ಕೆಎಸ್‍ಐಎಸ್‍ಎಫ್‍ನ 239 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಬುಧವಾರ ನಡೆಯಿತು. ಮೈಸೂರಿನ ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯತು ಮೈದಾನದಲ್ಲಿ ಆಯೋ ಜಿಸಿದ್ದ ನಿರ್ಗಮನ ಪಥ ಸಂಚಲನ ಕಾರ್ಯ ಕ್ರಮದಲ್ಲಿ ತರಬೇತಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ಎಸ್.ರವಿ ಪ್ರಶಿಕ್ಷಣಾರ್ಥಿ ಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ತರಬೇತಿಯಲ್ಲಿ ವಿವಿಧ ವಿಭಾಗ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತ ರಣೆ ಮಾಡಿದರು. ಸರ್ವೋತ್ತಮ…
ರತನ್ ಟಾಟಾ ಕಾಲಿಗೆ ನಮಸ್ಕರಿಸಿದ ನಾರಾಯಣಮೂರ್ತಿ
January 30, 2020ಮುಂಬೈ, ಜ.29- 72 ವರ್ಷದ ಇನ್ಫೋಸಿಸ್ ಸಹ- ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು 82 ವರ್ಷದ ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಾಲಿಗೆ ನಮಸ್ಕರಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದ್ದು, ನಾರಾಯಣಮೂರ್ತಿ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬೈನಲ್ಲಿ ಮಂಗಳವಾರ ನಡೆದ ಟೈಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್….
`ಮಹಿಳಾ ಸಾಂಸ್ಕøತಿಕ ಉತ್ಸವ’ದಲ್ಲಿ ಕಲಾ ಪ್ರೌಢಿಮೆ ಮೆರೆದ ಮಹಿಳಾ ಮಣಿಯರು
January 30, 2020ಮೈಸೂರು ಕಲಾಮಂದಿರ ಅಂಗಳದಲ್ಲಿ ಮಹಿಳೆಯರ ಕೌಶಲ್ಯ ಪ್ರದರ್ಶನ ಮೈಸೂರು, ಜ.29(ಆರ್‍ಕೆಬಿ)- ಮೈಸೂರಿನ ಕಲಾ ಮಂದಿರ ಬುಧವಾರ ವಿವಿಧ ಮಹಿಳಾ ಕಲಾವಿದ ರಿಂದ ತುಂಬಿ ಹೋಗಿತ್ತು. ಮಹಿಳಾ ಸಾಂಸ್ಕøತಿಕ ಉತ್ಸವದಲ್ಲಿ ಮಹಿಳೆಯರು ತಮ್ಮಲ್ಲಿರುವ ವಿವಿಧ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸಿದರು. ಡೊಳ್ಳು ಕುಣಿತ, ಪಟ ಕುಣಿತ, ಸುಗ್ಗಿ ಕುಣಿತ, ಛದ್ಮವೇಷ, ಚಿತ್ರಕಲೆ, ಕಪ್ಪೆಚಿಪ್ಪು ಕಲೆ, ಸೋರೆ ಕಾಯಿ ಕಲೆ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನದ ಜೊತೆಗೆ ರಂಗೋಲಿ ಸ್ಪರ್ಧೆ, ಸುಗಮ ಸಂಗೀತ, ಜಾನಪದ ಗೀತಗಾಯನ, ಜಾನಪದ ನೃತ್ಯ, ನಾಟಕ, ವಿಚಾರ ಸಂಕಿರಣ,…










