ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನ
ಮೈಸೂರು

ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನ

January 30, 2020

ಮೈಸೂರು,ಜ.29(ಎಂಕೆ)- ಪೊಲೀಸ್ ತರಬೇತಿ ಶಾಲೆ ವತಿಯಿಂದ 4ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್‍ಸ್ಟೇಬಲ್, ರೈಲ್ವೇಸ್ ಮತ್ತು ಕೆಎಸ್‍ಐಎಸ್‍ಎಫ್‍ನ 239 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಬುಧವಾರ ನಡೆಯಿತು.

ಮೈಸೂರಿನ ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯತು ಮೈದಾನದಲ್ಲಿ ಆಯೋ ಜಿಸಿದ್ದ ನಿರ್ಗಮನ ಪಥ ಸಂಚಲನ ಕಾರ್ಯ ಕ್ರಮದಲ್ಲಿ ತರಬೇತಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ಎಸ್.ರವಿ ಪ್ರಶಿಕ್ಷಣಾರ್ಥಿ ಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಬಳಿಕ ತರಬೇತಿಯಲ್ಲಿ ವಿವಿಧ ವಿಭಾಗ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತ ರಣೆ ಮಾಡಿದರು. ಸರ್ವೋತ್ತಮ ಪ್ರಶಿಕ್ಷ ಣಾರ್ಥಿಯಾಗಿ ಬಳ್ಳಾರಿಯ ರಾಧ, ಒಳಾಂ ಗಣ ಮತ್ತು ಹೊರಾಂಗಣ ವಿಭಾಗದ ಅತ್ಯು ತ್ತಮ ಪ್ರಶಿಕ್ಷಣಾರ್ಥಿಯಾಗಿ ಶಿವಲೀಲಾ ಕೊಟೂರು ಬಹುಮಾನ ಪಡೆದುಕೊಂಡರು. ಒಳಾಂಗಣ ಪ್ರಶಸ್ತಿ ವಿಭಾಗದಲ್ಲಿ ಜಿ.ಎಲ್. ಪ್ರಬೀತಾ ಪ್ರಥಮ, ರಾಧ ದ್ವಿತೀಯ ಹಾಗೂ ಶೇಖವ್ವ ತೃತೀಯ ಬಹುಮಾನ ಪಡೆದರೆ, ಹೊರಾಂಗಣ ಪ್ರಶಸ್ತಿ ವಿಭಾಗದಲ್ಲಿ ಎಂ.ದುರ್ಗ ಪ್ರಥಮ, ವಾಣಿಶ್ರೀ ಕೊಳ್ಳಿ ಹಾಗೂ ಸೋನಾಲಿ ದ್ವಿತೀಯ, ಲಕ್ಷ್ಮೀ ಪ್ರಕಾಶ ಗಡಾದ ತೃತೀಯ ಬಹುಮಾನ ಪಡೆದರು. ಫೈರಿಂಗ್ ಪ್ರಶಸ್ತಿ ವಿಭಾಗದಲ್ಲಿ ಅಂಬಿಕಾ ಪ್ರಥಮ, ಶೋಭಾ ಸಂಗಪ್ಪ ಬಳವಾಡ ದ್ವಿತೀಯ ಮತ್ತು ಎಂ.ದುರ್ಗ ತೃತೀಯ ಬಹುಮಾನ ಪಡೆದುಕೊಂಡರು.

ಸಾಧಕ ಪ್ರಶಿಕ್ಷಣಾರ್ಥಿಗಳಿಗೆ ಬಹು ಮಾನ ವಿತರಿಸಿ ಮಾತನಾಡಿದ ತರಬೇತಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ಎಸ್.ರವಿ, 8 ತಿಂಗಳಿಂದ ಪರಿಪೂರ್ಣ ತರಬೇತಿ ಪಡೆದಿದ್ದೀರಿ. ಕರ್ತವ್ಯಕ್ಕೆ ಹಾಜ ರಾದಾಗಲೂ ಇದೇ ಶಿಸ್ತನ್ನು ಪಾಲಿಸಬೇಕು ಎಂದರು. ಪೆÇಲೀಸ್ ಇಲಾಖೆ ಕಷ್ಟದ ಇಲಾಖೆ ಎನ್ನುತ್ತಾರೆ. ತರಬೇತಿ ಸಂದರ್ಭ ದಲ್ಲಿ ಶಿಸ್ತಿನ ಹೆಸರಿನಲ್ಲಿ ನಿಮಗೆ ಮಾನಸಿಕ ಹಾಗೂ ದೈಹಿಕವಾಗಿ ಶಕ್ತಿ ತುಂಬುವ ಕೆಲಸ ವನ್ನು ಮಾಡಲಾಗಿದೆ. ಇದನ್ನು ನೀವು ಕರ್ತವ್ಯದಲ್ಲಿ ಪ್ರದರ್ಶಿಸಬೇಕು ಎಂದರು.

ಪೆÇಲೀಸ್ ಹುದ್ದೆಯಲ್ಲಿ ಜ್ಞಾನ, ಕೌಶಲ, ಮೌಲ್ಯ, ಉತ್ತಮ ಮನೋಭಾವನೆಯನ್ನು ಹೊಂದಿರಬೇಕು. ಉನ್ನತ ಮಟ್ಟದ ಮೌಲ್ಯ ಮತ್ತು ಸತ್ಯದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರ ಆಸ್ತಿ ಮತ್ತು ಜೀವ ಸಮರ್ಥವಾಗಿ ಕಾಪಾಡಬೇಕು. ಅಲ್ಲದೆ ಸಾಮಾನ್ಯ ಜ್ಞಾನದ ಅಡಿಯಲ್ಲಿ ಸಮಾಜ ದಲ್ಲಿ ಒಳ್ಳೆಯ ಕೆಲಸ ಕೈಗೊಳ್ಳುವಂತೆ ಸಲಹೆ ನೀಡಿದರು.

ಕರ್ತವ್ಯ ನಿರ್ವಹಿಸುವ ವೇಳೆ ಅನೇಕ ಸವಾಲು ಗಳು ಎದುರಾಗುತ್ತವೆ. ಅದಾವುದಕ್ಕೂ ಕುಗ್ಗದೇ ಯಾವುದೇ ಕೆಲಸಕ್ಕೆ ನಿಯೋಜಿಸಿದರು ಸಮರ್ಥ ವಾಗಿ ನಿಭಾಯಿಸಬಲ್ಲೇ ಎಂಬ ಧೈರ್ಯ ಹೊಂದಿರ ಬೇಕು. ವೈಯಕ್ತಿಕ ಜೀವನದಲ್ಲಿಯೂ ಶಿಸ್ತು ಮತ್ತು ಸಂಯಮವನ್ನು ಅಳವಡಿಸಿಕೊಂಡು ಶ್ರೇಷ್ಠ ಪೆÇಲೀಸ್ ಆಗಿ ಕರ್ನಾಟಕ ಪೆÇಲೀಸ್ ಸೇವೆಗೆ ಗೌರವ ತಂದು ಕೊಡುವಂತೆ ಸಲಹೆ ನೀಡಿದರು. ಕಾರ್ಯಕ್ರಮ ದಲ್ಲಿ ದಕ್ಷಿಣ ವಲಯ ಐಜಿಪಿ ವಿಪುಲ್‍ಕುಮಾರ್, ನಗರ ಪೆÇಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪೆÇಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ.ಧರಣಿ ದೇವಿ ಮಾಲಗತ್ತಿ, ಉಪನಿರ್ದೇಶಕ ಸುಧೀರ್‍ಕುಮಾರ್ ರೆಡ್ಡಿ, ಅಶ್ವಾರೋಹಿ ದಳದ ಕಮಾಂಡರ್ ನಾಗರಾಜ್, ಹಾಸನ ಪೆÇಲೀಸ್ ತರಬೇತಿ ಶಾಲೆಯ ಪ್ರಾಂಶು ಪಾಲ ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Translate »