ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ   ನಾಳೆಯಿಂದ ಫೆ.9ರವರೆಗೆ `ಗಾಂಧಿ ಶಿಲ್ಪ ಬಜಾರ್’ 
ಮೈಸೂರು

ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ  ನಾಳೆಯಿಂದ ಫೆ.9ರವರೆಗೆ `ಗಾಂಧಿ ಶಿಲ್ಪ ಬಜಾರ್’ 

January 30, 2020

ಮೈಸೂರು, ಜ.29(ಪಿಎಂ)- ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಅಭಿ ವೃದ್ಧಿ ಆಯುಕ್ತರ ಕಚೇರಿ, ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್ ಜಂಟಿ ಆಶ್ರಯ ದಲ್ಲಿ ಜ.31ರಿಂದ ಫೆ.9ರವರೆಗೆ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟದ `ಗಾಂಧಿ ಶಿಲ್ಪ ಬಜಾರ್’ ಅನ್ನು ಅರ್ಬನ್ ಹಾತ್‍ನಲ್ಲಿ ಏರ್ಪಡಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾ ಗದ ನಿರ್ದೇಶಕ (ಯೋಜನೆಗಳು ಮತ್ತು ಅಭಿವೃದ್ಧಿ) ಡಾ.ಸಿ.ರಂಗನಾಥಯ್ಯ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪರಿಶಿಷ್ಟ ಜಾತಿಗೆ ಸೇರಿದ 60 ಕುಶಲಕರ್ಮಿಗಳು ಗಾಂಧಿ ಶಿಲ್ಪ ಬಜಾರ್ ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಪೈಕಿ ಹಲ ವರು ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ತಮ್ಮ ಉತ್ಕøಷ್ಟ ಕಲಾ ಸಾಮಗ್ರಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ ಎಂದು ಹೇಳಿದರು.

ಮರದ ಕೆತ್ತನೆ, ಶಿಲಾಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆಯ ಸಾಮಗ್ರಿಗಳು ಈ ಪ್ರದರ್ಶನದಲ್ಲಿ ಕಣ್ಮನ ಸೆಳೆಯಲಿವೆ. ಅಲ್ಲದೆ, ಟೆರ್ರಾಕೋಟ, ಪೇಪರ್ ಮೆಷಿ, ರತ್ನಗಂಬಳಿ, ಹತ್ತಿ ಜಮಖಾನ, ಆಭರಣಗಳು, ಮರದ ಅರಗಿನ ಕಲಾವಸ್ತು ಗಳು, ಕಲಾತ್ಮಕ ಚರ್ಮದ ಚಪ್ಪಲಿಗಳು, ಬಿದಿರು-ಬೆತ್ತದ ವಸ್ತುಗಳು, ಉತ್ತರ ಪ್ರದೇ ಶದ ಕಲಾತ್ಮಕ ಲೋಹದ ವಸ್ತುಗಳು ಸೇರಿ ದಂತೆ ವೈವಿಧ್ಯಮಯದಿಂದ ಕೂಡಿದ ಸಾಮಗ್ರಿ ಗಳು ಲಭ್ಯವಾಗಲಿವೆ. ಕುಶಲಕರ್ಮಿಗಳಿಂದ ನೇರವಾಗಿ ಖರೀದಿದಾರರಿಗೆ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ನೋಂದಾ ಯಿತ ಕುಶಲಕರ್ಮಿಗಳಿಗೆ ಉಚಿತವಾಗಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡ ಲಾಗುವುದು. ಜೊತೆಗೆ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯಿಂದ ಪ್ರಯಾಣ ಭತ್ಯೆ ಯನ್ನೂ ನೀಡಲಾಗುವುದು ಎಂದರು.

ಕುಶಲಕರ್ಮಿಗಳು ತಮ್ಮ ಸಾಮಗ್ರಿಗಳ ತಯಾರಿಕೆ ಕುರಿತಂತೆ ಪ್ರಾತ್ಯಕ್ಷಿಕೆ ಸಹ ನೀಡಲಿ ದ್ದಾರೆ. ಅಲ್ಲದೆ, ಇನ್ನಿತರ ಮಾರುಕಟ್ಟೆ ದರ ಕ್ಕಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರು ಸಾಮಗ್ರಿ ಗಳನ್ನು ಖರೀದಿ ಮಾಡಲು ಇದೊಂದು ಅವಕಾಶ. ಪ್ರತಿದಿನ ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದು ತಿಳಿಸಿದರು.

ಉದ್ಘಾಟನೆ: ಜ.31ರಂದು ಸಂಜೆ 4ಕ್ಕೆ ಗಾಂಧಿ ಶಿಲ್ಪ ಬಜಾರ್ ಅನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದಾರೆ. ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕರಾದ ಎಸ್.ಎ.ರಾಮ ದಾಸ್, ಎಲ್.ನಾಗೇಂದ್ರ, ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯ ದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜವಳಿ ಮಂತ್ರಾಲಯದ ಕರಕುಶಲ ಅಭಿವೃದ್ಧಿ ಕಚೇ ರಿಯ ಪ್ರಾಂತೀಯ ನಿರ್ದೇಶಕ ಎಂ.ಪ್ರಭಾ ಕರನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಜವಳಿ ಮಂತ್ರಾಲಯದ ಮೈಸೂ ರಿನ ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್.ಸುನಿಲ್‍ಕುಮಾರ್, ಜೆಎಸ್‍ಎಸ್ ಅರ್ಬನ್ ಹಾತ್‍ನ ಯೋಜನಾ ಧಿಕಾರಿ ಎಂ.ಶಿವನಂಜಸ್ವಾಮಿ, ಸಂಯೋಜ ನಾಧಿಕಾರಿ ರಾಕೇಶ್‍ರೈ ಗೋಷ್ಠಿಯಲ್ಲಿದ್ದರು.

 

Translate »