ಫೆ.9ರಂದು `ಸ್ವರಾನುಭೂತಿ’ ಸಂಗೀತ ಕಾರ್ಯಕ್ರಮ
ಮೈಸೂರು

ಫೆ.9ರಂದು `ಸ್ವರಾನುಭೂತಿ’ ಸಂಗೀತ ಕಾರ್ಯಕ್ರಮ

January 30, 2020

ಮೈಸೂರು, ಜ.29(ಪಿಎಂ)- ಮಾರಣಾಂತಿಕ ಕಾಯಿಲೆಯಿಂದ ನರಳುವವರ ಆರೈಕೆಗಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (ಎಸ್‍ವಿವೈಎಂ) `ಉಪಶಮನ ಆರೈಕೆ ಯೋಜನೆ’ ನಡೆಸು ತ್ತಿದೆ. ಈ ಯೋಜನೆಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಗಾಯಕಿ ದಿವ್ಯಾ ರಾಘವನ್ ಉಪಸ್ಥಿತಿಯಲ್ಲಿ ಫೆ.9ರಂದು `ಸ್ವರಾನುಭೂತಿ’ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಯೋಜನೆ ನಿರ್ದೇಶಕ ರಾಮಕೃಷ್ಣ ಮುದ್ರೆ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಶಮನ ಆರೈಕೆ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು 2015ರಿಂದ ಎಸ್‍ವಿ ವೈಎಂ `ಸ್ವರಾನುಭೂತಿ’ ಕಾರ್ಯಕ್ರಮ ಆಯೋಜಿಸುತ್ತಿದೆ. ಹೆಚ್ಚು ರೋಗಿಗಳಿಗೆ ಸೇವೆ ಲಭ್ಯವಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮದ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸ ಲಾಗುತ್ತದೆ. ಮೈಸೂರು ಹಾಗೂ ಸುತ್ತಮುತ್ತ ಎಸ್‍ವಿವೈಎಂನಿಂದ ಉಪಶಮನ ಆರೈಕೆ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಅಂದು ಸಂಜೆ 5.30ರಿಂದ ರಾತ್ರಿ 9ರವರೆಗೆ ಸಂಗೀತ ಕಾರ್ಯ ಕ್ರಮ ನಡೆಯಲಿದೆ. 2011ರಲ್ಲಿ ಉಪಶಮನ ಆರೈಕೆ ಯೋಜನೆ ಪ್ರಾರಂಭಿಸಲಾಯಿತು. ಇದರಡಿಯಲ್ಲಿ ಈವರೆಗೆ 2 ಸಾವಿರ ಮಂದಿಗೆ ಸೇವೆ ಲಭ್ಯವಾಗಿದೆ. ಪ್ರಸ್ತುತ 400 ಮಂದಿಗೆ ಈ ಸೇವೆ ಒದಗಿಸಲಾಗುತ್ತಿದೆ. ಕ್ಯಾನ್ಸರ್, ಹೆಚ್‍ಐವಿ ಏಡ್ಸ್ ಮೊದ ಲಾದ ಮಾರಣಾಂತಿಕ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ನೀಡುವ ಮಹತ್ವ ಸೇವೆ ಇದಾಗಿದೆ ಎಂದು ತಿಳಿಸಿದರು.

ಸ್ವರಾನುಭೂತಿ ಸಂಗೀತ ಕಾರ್ಯಕ್ರಮಕ್ಕೆ 1800 ಮಂದಿ ಆಗಮಿ ಸುವ ನಿರೀಕ್ಷೆ ಇದ್ದು, ಉದಾರತೆಯಿಂದ ನೀಡುವ ಹಣವನ್ನು ಸ್ವೀಕರಿಸಿ ರಶೀದಿ ನೀಡಲಾಗುವುದು. ಅಲ್ಲದೆ, ಪ್ರವೇಶಕ್ಕಾಗಿ ಟಿಕೆಟ್ ವ್ಯವಸ್ಥೆ ಇದ್ದು, ಇದರ ಮೂಲಕವೂ ಹಣ ಕ್ರೋಢೀಕರಿಸಲಾಗು ವುದು. 5 ಸಾವಿರ ದರದ ಟಿಕೆಟ್‍ಗೆ ಇಬ್ಬರಿಗೆ ಪ್ರವೇಶವಿದೆ. 3 ಸಾವಿರ ರೂ., 2 ಸಾವಿರ ರೂ. ಹಾಗೂ 1 ಸಾವಿರ ರೂ. ದರದ ಟಿಕೆಟ್ ಗಳಿಗೆ ಒಬ್ಬರಿಗೆ ಪ್ರವೇಶ. ವಿವರಗಳಿಗೆ `http://swaraa nubhuthi.svym.org’ ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಜೊತೆಗೆ ಮೊ.ಸಂ. 9886379529 ಅನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು. ಎಸ್‍ವಿವೈಎಂ ಸಿಇಓ ಡಾ.ಜಿ.ಎಸ್. ಕುಮಾರ್, ಉಪ ಸಿಇಓ ಡಾ.ಪ್ರವೀಣ್, ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಡಾ.ವಿಭಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »