‘ಬಿತ್ತನೆ ಬೀಜಗಳ ಮಸೂದೆ-2019’ರ ಕುರಿತು ಜ.30ರಂದು ವಿಚಾರ ಸಂಕಿರಣ
ಮೈಸೂರು

‘ಬಿತ್ತನೆ ಬೀಜಗಳ ಮಸೂದೆ-2019’ರ ಕುರಿತು ಜ.30ರಂದು ವಿಚಾರ ಸಂಕಿರಣ

January 28, 2020

ಮೈಸೂರು: ಕೇಂದ್ರ ಸರ್ಕಾರ ಕಾಯ್ದೆಯಾಗಿ ಜಾರಿಗೊಳಿಸಲು ಉದ್ದೇ ಶಿಸಿರುವ `ಬಿತ್ತನೆ ಬೀಜಗಳ ಮಸೂದೆ- 2019’ರ ಸಾಧಕ -ಬಾಧಕ ಕುರಿತಂತೆ ಜ.30 ರಂದು ರಾಜ್ಯ ರೈತ ಸಂಘ ಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಮೈಸೂ ರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದ ಸಭಾಂ ಗಣದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಬಿತ್ತನೆ ಬೀಜ ಗಳ ಉತ್ಪಾದನೆ, ಖರೀದಿ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಬೀಜ ಕಾಯ್ದೆಯನ್ನು ತಿದ್ದುಪಡಿ ಮಾಡಿ ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಸೂದೆಯಲ್ಲಿ ರೈತರಿಗಾಗುವ ಅನಾನುಕೂಲಗಳ ಬಗ್ಗೆ ಬೆಳಕು ಚೆಲ್ಲಲು ಈ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದರು.

ಬಿತ್ತನೆ ಬೀಜಗಳ ಬೆಲೆ ನಿಯಂತ್ರಣಕ್ಕೆ ಅವಕಾಶ ನೀಡಲಾಗು ತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಸೂದೆಯಲ್ಲಿ ಈ ಅಂಶ ಇಲ್ಲವಾಗಿದೆ. ಇದರ ಪ್ರಕಾರ ಕಂಪನಿಗಳೇ ದರ ನಿಗದಿ ಮಾಡಲು ಅವಕಾಶವಾಗಲಿದೆ. ಇದರಿಂದ ಸಹಜವಾಗಿಯೇ ಬಿತ್ತನೆ ಬೀಜ ದುಬಾರಿಯಾಗಿ ಪರಿಣಮಿಸಲಿದೆ. ಅಲ್ಲದೆ, ಬಿತ್ತನೆ ಬೀಜ ಕಂಪನಿಗಳು ಭರವಸೆ ನೀಡಿದಷ್ಟು ಇಳುವರಿ ಬರದಿದ್ದರೆ, ಇಲ್ಲವೇ ಯಾವುದೇ ರೀತಿ ಸಮಸ್ಯೆಯಾದರೂ ಅದಕ್ಕೆ ಕಂಪನಿ ಹೊಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಆದರೆ ನೂತನ ಮಸೂದೆಯಲ್ಲಿ ಇದಕ್ಕೆ ಅವಕಾಶ ಮಾಡಿಲ್ಲ ಎಂದರು.

ರೈತರು ಪಾರಂಪರಗತವಾಗಿ ಬಿತ್ತನೆ ಬೀಜಗಳನ್ನು ಬೇರೊಬ್ಬ ರೈತರಿಂದ ಖರೀದಿಸಿ ಬಿತ್ತನೆ ಮಾಡುತ್ತಿದ್ದರು. ಆದರೆ ಇದಕ್ಕೆ ಅವಕಾಶ ನಿರಾಕರಿಸಲಾಗಿದ್ದು, ಸಣ್ಣ ಸಣ್ಣ ರೈತರೂ ಬಿತ್ತನೆ ಬೀಜ ಕ್ಕಾಗಿ ಬಹುರಾಷ್ಟ್ರೀಯ ಕಂಪನಿಗಳ ಮೊರೆ ಹೋಗಬೇಕಾಗುತ್ತದೆ. ಹೀಗೆ ಹತ್ತು ಹಲವು ಅನಾನುಕೂಲಗಳು ಮಸೂದೆಯಲ್ಲಿ ಇದ್ದು, ಈ ಎಲ್ಲವನ್ನೂ ವಿಚಾರ ಸಂಕಿರಣದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಪದ್ಮಭೂಷಣ ಡಾ.ಎಂ.ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರಪ್ರಸಾದ್, ಧಾರ ವಾಡ ಕೃಷಿ ವಿವಿ ಕುಲಪತಿ ಡಾ.ಮಹದೇವ ವಿ.ಚೆಟ್ಟಿ, ರಾಯ ಚೂರು ಕೃಷಿ ವಿವಿ ಡಾ.ಕೆ.ಎನ್.ಕಟ್ಟಿಮನಿ, ಬಾಗಲಕೋಟೆ ತೋಟ ಗಾರಿಕೆ ವಿವಿ ಕುಲಪತಿ ಡಾ.ಕೆ.ಎಂ.ಇಂದ್ರೇಶ್ ಮತ್ತಿತರರು ಪಾಲ್ಗೊ ಳ್ಳಲಿದ್ದಾರೆ ಎಂದರು. ವಿಶ್ರಾಂತ ಕುಲಪತಿ ಎಸ್.ಬಿ.ದಂಡಿನ್, ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಕಾರ್ಯದರ್ಶಿ ಬರಡನಪುರ ನಾಗರಾಜ್ ಗೋಷ್ಠಿಯಲ್ಲಿದ್ದರು.

Translate »