‘ಕಾಕನಕೋಟೆ’ ಯಾಗಿ ಮಾರ್ಪಟ್ಟ ದಮ್ಮನಕಟ್ಟೆ ಸಫಾರಿ ಕೇಂದ್ರ
ಮೈಸೂರು

‘ಕಾಕನಕೋಟೆ’ ಯಾಗಿ ಮಾರ್ಪಟ್ಟ ದಮ್ಮನಕಟ್ಟೆ ಸಫಾರಿ ಕೇಂದ್ರ

January 28, 2020

ಮೈಸೂರು: ನಾಗರಹೊಳೆ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಟ್ಟ ಅಂತರಸಂತೆ ವಲಯದ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ `ಕಾಕನಕೋಟೆ’ ಸಫಾರಿ ಕೇಂದ್ರವೆಂದು ಮರುನಾಮಕರಣ ಮಾಡಲಾಗಿದೆ.

ನಾಗರಹೊಳೆ ಅಭಯಾರಣ್ಯ ಈ ಹಿಂದೆ ಕಾಕನಕೋಟೆ ಕಾಡು ಎಂದೇ ಪ್ರಸಿದ್ಧಿ ಪಡೆ ದಿತ್ತು. ರಾಜೀವ್‍ಗಾಂಧಿ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಎಂದು ನಾಮಕರಣ ವಾದ ನಂತರ, ನಾಗರಹೊಳೆ ಅಭಯಾ ರಣ್ಯ ಜನರ ಮನಸ್ಸಿಂದ `ಕಾಕನಕೋಟೆ ಕಾಡು’ ಎಂಬ ಪದ ಕಣ್ಮರೆಯಾಗಿತ್ತು. ಇತ್ತೀ ಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳ ಹಿರಿಯರನ್ನು ಹೊರತುಪಡಿಸಿದರೆ, ಯುವ ಪೀಳಿಗೆಗೆ ಕಾಕನಕೋಟೆ ಕಾಡು ಯಾವು ದೆಂದು ತಿಳಿದೇ ಇಲ್ಲ. ಈ ಹಿನ್ನೆಲೆ ಯಲ್ಲಿ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಕಾಕನ ಕೋಟೆ ಸಫಾರಿ ಎಂದು ಮರು ನಾಮ ಕರಣ ಮಾಡಲಾಗಿದೆ.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ವಲಯ ದಲ್ಲಿರುವ ದಮ್ಮನಕಟ್ಟೆ ಸಫಾರಿ ಕೇಂದ್ರ ಆವ ರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅನಿಲ್‍ಚಿಕ್ಕಮಾದು ಸಫಾರಿಯ ಹೊಸ ಕೌಂಟರ್ ಉದ್ಘಾಟಿಸಿದರು. ಬಳಿಕ ಮಾತ ನಾಡಿದ ಅವರು, ಕಾಕನಕೋಟೆ ಹೆಸರಿಟ್ಟಿ ರುವುದು ಶ್ಲಾಘನೀಯ. ಈ ಭಾಗದಲ್ಲಿ ಸಫಾರಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸು ವುದು ಅಗತ್ಯವಿತ್ತು. ಹೊಸದಾಗಿ ಸಿದ್ಧ ಗೊಳಿಸಿರುವ ಕೌಂಟರ್ ಪ್ರವಾಸಿಗರಿಗೆ ಸಹಕಾರಿ ಎಂದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇ ಶದ ನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ಯುವ ಹಾಗೂ ಮುಂದಿನ ಪೀಳಿಗೆಗೆ ಕಾಕನಕೋಟೆ ಎಂಬುದನ್ನು ನೆನ ಪಿಸುವುದರೊಂದಿಗೆ ಅರಣ್ಯ ಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾಡಿನ ಹೆಸರಾಗಿರುವ `ಕಾಕನಕೋಟೆ’ ಸಫಾರಿ ಕೇಂದ್ರ ಎಂದು ಮಾರ್ಪಡಿಸಲಾಗಿದೆ. ಅಲ್ಲದೆ ಇಲ್ಲಿಂದ ಸಫಾರಿಗೆ ಹೋಗಲು ಬರುವವ ರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶೇ.50 ರಷ್ಟು ಟಿಕೆಟ್ ಅನ್ನು ಆನ್‍ಲೈನ್ ಮೂಲಕ ನೀಡುವ ವ್ಯವಸ್ಥೆ ಮಾಡಲಾಗಿದೆ. ಶೀಘ್ರದ ಲ್ಲಿಯೇ ಆನ್‍ಲೈನ್ ಟಿಕೆಟ್ ವ್ಯವಸ್ಥೆ ಅನು ಷ್ಠಾನಕ್ಕೆ ಬರಲಿದೆ. ಪ್ರವಾಸಿಗರ ವೀಕ್ಷಣೆಗೆ ವಸ್ತುಸಂಗ್ರಹಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸಿಎಫ್ ಕೇಶವೇ ಗೌಡ, ಹುಣಸೂರು ಎಸಿಎಫ್ ಪ್ರಸನ್ನ ಕುಮಾರ್, ನಾಗರಹೊಳೆ ವೈಲ್ಡ್‍ಲೈಫ್ ವಾರ್ಡನ್ ಕೃತಿಕಾ ಆಲನಹಳ್ಳಿ, ಆರ್‍ಎಫ್‍ಓ ವಿನಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »