`ಗೂಂಡಾ’ ಪದ ಬಳಕೆ: ಸಿದ್ದರಾಮಯ್ಯ ವಿರುದ್ಧ ವಕೀಲರ ಪ್ರತಿಭಟನೆ
ಮೈಸೂರು

`ಗೂಂಡಾ’ ಪದ ಬಳಕೆ: ಸಿದ್ದರಾಮಯ್ಯ ವಿರುದ್ಧ ವಕೀಲರ ಪ್ರತಿಭಟನೆ

January 24, 2020

ಮೈಸೂರು,ಜ.23(ಎಂಟಿವೈ)-ವಕೀಲರ ಸಭೆಯಲ್ಲಿ ಕೆಲವರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಹಿಂಪ ಡೆದು, ಕ್ಷಮೆಯಾಚಿಸುವಂತೆ ಆಗ್ರಹಿಸಿ ಮೈಸೂ ರಿನ ವಕೀಲರು ಗುರುವಾರ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಗುರುವಾರ ಬೆಳಿಗ್ಗೆ ವಿಶೇಷ ಸಭೆ ನಡೆ ಸಿದ ವಕೀಲರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಕೆಲವು ವಕೀ ಲರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಈ ಹೇಳಿಕೆ ವಕೀ ಲರನ್ನು ಅಪಮಾನಿಸಿದಂತಾಗಿದೆ. ಈ ಕುರಿತು ಖಂಡನಾ ನಿರ್ಣಯ ಕೈಗೊಳ್ಳ ಬೇಕೆಂದು ಹಲವರು ಒತ್ತಾಯಿಸಿದರು. ಅಂತಿಮವಾಗಿ ಸರ್ವಾನುಮತದಿಂದ ಕಲಾಪ ಬಹಿಷ್ಕರಿಸಲು ಹಾಗೂ ಸಭೆಯಲ್ಲಿ ನಡೆದ ಬೆಳವಣಿಗೆಯನ್ನು ಬಹಿರಂಗ ಮಾಡಿದ್ದಾ ರೆಂದು ವಕೀಲರೂ ಆದ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಅವರನ್ನು ಸಂಘದಿಂದ ಅಮಾ ನತು ಮಾಡಲು ನಿರ್ಧರಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ ಕುಮಾರ್ ನೇತೃತ್ವದಲ್ಲಿ ವಕೀಲರು ನ್ಯಾಯಾ ಲಯದ ಮುಂಭಾಗವಿರುವ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿ, ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿದರಲ್ಲದೆ, ಹೇಳಿಕೆಯನ್ನು ಹಿಂಪಡೆ ಯುವಂತೆ ಒತ್ತಾಯಿಸಿದರು.

ತುರ್ತು ಸುದ್ದಿಗೋಷ್ಠಿ: ಬಳಿಕ ವಕೀಲರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್ ಸುದ್ದಿಗೋಷ್ಠಿ ನಡೆಸಿ `ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ಬಾಲಕುಮಾರ್ ಪರ ವಕಾಲತು ವಹಿಸದಂತೆ ಮೈಸೂರು ವಕೀ ಲರ ಸಂಘ ನಿರ್ಣಯ ಕೈಗೊಂಡಿತ್ತು. ಹಿಂದಿನಿಂದಲೂ ದೇಶದ್ರೋಹ ಕೃತ್ಯ, ಚಟು ವಟಿಕೆಯಲ್ಲಿ ಪಾಲ್ಗೊಂಡವರ ಪರ ವಕಾ ಲತು ವಹಿಸದಂತೆ ಸಂಘದಲ್ಲಿ ನಿರ್ಣಯ ಕೈಗೊಳ್ಳುತ್ತಾ ಬಂದಿದೆ. ಆದರೆ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಕಾಲತು ವಹಿಸಲು ಅನುಮತಿ ನೀಡುವಂತೆ ಕೆಲ ವರು ಒತ್ತಾಯಿಸಿದರೆ, ಬಹುತೇಕರು ದೇಶ ದ್ರೋಹದ ಪ್ರಕರಣವಾಗಿರುವ ಹಿನ್ನೆಲೆ ಯಲ್ಲಿ ಸಂಘ ಕೈಗೊಂಡಿರುವ ನಿರ್ಣಯ ಸೂಕ್ತ ಎಂದು ಅಭಿಪ್ರಾಯಪಟ್ಟರು. ಸಭೆ ಎಂದ ಮೇಲೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗುವುದು ಸಹಜ. ಆದರೆ ಆ ಸಭೆ ಯಲ್ಲಿ ಯಾರ ಮೇಲೂ ಹಲ್ಲೆ ನಡೆದಿಲ್ಲ. ಹಲ್ಲೆ ನಡೆಸುವುದಕ್ಕೂ ಸಂಘ ಬಿಡುವು ದಿಲ್ಲ ಎಂದು ಸ್ಪಷ್ಟಪಡಿಸಿದರು.

ಬುಧವಾರ ಮೈಸೂರಿನಲ್ಲಿ ಪತ್ರಕರ್ತ ರೊಂದಿಗೆ ಸಿದ್ದರಾಮಯ್ಯ ಅವರು ಮಾತ ನಾಡುವ ವೇಳೆ ವಕೀಲರ ಸಂಘದ ಸಭೆ ಯಲ್ಲಿ `ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತು ವಹಿಸಲು ಅವಕಾಶ ನೀಡುವಂತೆ ಕೇಳಿದ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಅವರ ಮೇಲೆ ಹಲ್ಲೆ ಮಾಡಲು ಕೆಲವರು ಯತ್ನಿಸಿದ್ದಾರೆ. ಇದು ಗೂಂಡಾ ವರ್ತನೆಯಾಗಿದೆ. ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಈ ಹಿಂದೆ ವಕೀಲರೂ ಆಗಿದ್ದರು. ವಕೀಲರ ಸಂಘದ ಸದಸ್ಯರೂ ಆಗಿದ್ದು, ಸಂಘದ ಎಲ್ಲಾ ಚಟು ವಟಿಕೆಗಳನ್ನು ತಿಳಿದುಕೊಂಡಿದ್ದಾರೆ. ಆದರೆ, ಸತ್ಯಾಸತ್ಯತೆ ಅರಿಯದೇ ಯಾರೋ ಹೇಳಿದ ಮಾತನ್ನು ಕೇಳಿ ವಕೀಲರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿರುವುದನ್ನು ವಕೀಲರ ಸಂಘ ಅವರಿಂದ ನಿರೀಕ್ಷಿಸಿರ ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಬಗ್ಗೆ ಹಾಗೂ ವಕೀಲರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ನಾವು ಸಹಿಸುವುದಿಲ್ಲ. ತನ್ನದೇ ಆದ ಬೈಲಾ ರೂಪಿಸಿಕೊಂಡು ಸಂಘ ಹಾಗೂ ಸದಸ್ಯರ ಹಿತಾಸಕ್ತಿ ಕಾಪಾಡುತ್ತಾ ವಕೀಲರ ಸಂಘ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಘದ ಸದಸ್ಯರಲ್ಲದವರು ವಕೀಲರ ಸಂಘದ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಹಿನ್ನೆಲೆ ಯಲ್ಲಿ ಸಿದ್ದರಾಮಯ್ಯ ಕೂಡಲೇ ತಮ್ಮ ಹೇಳಿಕೆ ಹಿಂಪಡೆದು, ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸು ತ್ತೇವೆ ಎಂದು ಎಚ್ಚರಿಕೆ ನೀಡಿದರು. ಮುಖ್ಯ ಮಂತ್ರಿ ಆದ ಸಂದರ್ಭದಲ್ಲಿ ಮೈಸೂರು ವಕೀಲರ ಸಂಘದ ಸದಸ್ಯತ್ವವನ್ನು ಸರೆಂ ಡರ್ ಮಾಡಿದ್ದಾರೆ. ಇದೀಗ ಸಿದ್ದರಾಮಯ್ಯ ನಮ್ಮ ಸಂಘದ ಸದಸ್ಯರಲ್ಲ. ಸದಸ್ಯತ್ವ ನವೀ ಕರಣಕ್ಕೆ ಅರ್ಜಿ ಸಲ್ಲಿಸಿದರೆ ಸಂಘ ಪರಿಶೀ ಲಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿ ದರು. ಗೋಷ್ಠಿಯಲ್ಲಿ ಹಿರಿಯ ವಕೀಲ ಚಂದ್ರಮೌಳಿ, ವಕೀಲರ ಸಂಘದ ಪದಾಧಿ ಕಾರಿಗಳಾದ ಶಿವಣ್ಣ, ಶಿವಣ್ಣೇಗೌಡ ಹಾಗೂ ಇನ್ನಿತರರು ಇದ್ದರು.

Translate »