ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ
ಮೈಸೂರು

ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ

January 24, 2020

ಬೆಂಗಳೂರು, ಜ.23(ಕೆಎಂಶಿ)-ರಾಜ್ಯ ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾಗಬಹುದು. ಅದನ್ನು ಎದುರಿಸಲು ಸಜ್ಜಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ.

ಕಳೆದ ಲೋಕಸಭೆ ಹಾಗೂ ವಿಧಾನ ಸಭೆಗೆ ನಡೆದ ಉಪ ಚುನಾವಣೆಯಲ್ಲಿ ಪಕ್ಷದ ಜೊತೆಗೆ ನಾನು ಸೋತಿದ್ದೇನೆ. ಹಾಗೆಂದು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಂಘ ಟನೆ ಮಾಡಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದರು.

ಸದ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದರೆ, ರಾಜಕೀಯವಾಗಿ ಏನು ಬೇಕಾ ದರೂ ಆಗಬಹುದು. ನಾವಾಗಿಯೇ ಸರ್ಕಾರವನ್ನು ಕೆಡವುವ ಮಾತಿಲ್ಲ. ಆದರೆ ಅಧಿಕಾರಕ್ಕಾಗಿ ಅವರೇ ಕಿತ್ತಾಡಿಕೊಂಡು ಕೆಳಕ್ಕೆ ಬಿದ್ದರೆ ಚುನಾವಣೆ ಎದುರಾಗುತ್ತದೆ.

ಅರಮನೆ ಮೈದಾನದಲ್ಲಿಂದು ಗ್ರಾಮ ಮಟ್ಟ ದಿಂದ ರಾಜ್ಯಮಟ್ಟದವರೆಗೆ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಹಮ್ಮಿ ಕೊಂಡಿದ್ದ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಬರಲಿ ಎಂದು ಕಾದು ಕೂರುವುದಕ್ಕಿಂತ ಚುನಾವಣೆ ನಾಳೆ ಬಂದರೂ ಎದುರಿಸಲು ಸಜ್ಜಾಗಿರಬೇಕು ಎಂದರು.

ಸೋಲು-ಗೆಲುವು ಸಹಜ. ತಳಮಟ್ಟ ದಿಂದ ಪಕ್ಷವನ್ನು ಸಂಘ ಟಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಲಗೊಳಿಸೋಣ. ಇದಕ್ಕೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಸಿಎಎ ಮತ್ತು ಎನ್‍ಸಿಆರ್ ಅನ್ನು ತೀವ್ರವಾಗಿ ವಿರೋಧಿಸಿದರು.

ಜಾತ್ಯಾತೀತತೆ ಮೇಲೆ ವಿಶ್ವಾಸವಿರುವ ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರದಲ್ಲಿ ಆಗುತ್ತಿರುವ ಅನಾಹುತ ತಪ್ಪಿಸಲು ಮುಂದಾಗಬೇಕು ಎಂದರು. ಬಿಜೆಪಿಗೆ ಇರುವ ಸಂಖ್ಯಾ ಬಲ ದಿಂದ ಕಾಯ್ದೆಗಳನ್ನು ಜಾರಿ ಮಾಡಿದ್ದಾರೆ ರಾಜ್ಯಸಭೆಯಲ್ಲಿ ಬಿಜೆಪಿಗೆ ಪೂರ್ಣ ಶಕ್ತಿ ಇಲ್ಲ. ಆದರೆ ಅಧಿಕಾರ ದುರ್ಬಳಕೆ ಮಾಡಿ ಕೊಂಡು ವಿರುದ್ಧವಾಗಿ ಮತ ಹಾಕದೇ ಇರೋ ರೀತಿ ಮಾಡಿದ್ರು ಇದರ ದುಷ್ಪರಿ ಣಾಮ ಏನು ಅಂತ ಎಲ್ಲಾರಿಗೂ ತಿಳುವಳಿಕೆ ಆಗ್ತಿದೆ. ಮುಸ್ಲಿಂರನ್ನು 2ನೇ ದರ್ಜೆ ನಾಗರಿ ಕರನ್ನಾಗಿ ಮಾಡಲು ಹೊರಟಿದ್ದಾರೆ. ಸುಮಾರು 40 ಕೋಟಿ ಮುಸ್ಲಿಂರು ಇದ್ದಾರೆ, ಅವ್ರ ನ್ನೆಲ್ಲಾ ಎಲ್ಲಿಗೆ ಕಳಿಸುತ್ತಾರೆ ಎಂದು ಪ್ರಶ್ನಿ ಸಿದರು. ಸಿಎಎ, ಎನ್‍ಸಿಆರ್, ಎನ್‍ಪಿಆರ್ ಈ 3 ಕಾಯ್ದೆಗಳು ದೇಶಕ್ಕೆ ಬಂದಿರೋ ಅತೀ ದೊಡ್ಡ ಗಂಡಾಂತರ. ಇದರ ವಿರುದ್ಧ ಹೋರಾಡಬೇಕು. ನಮ್ಮನ್ನು ಜೈಲಿಗೆ ಹಾಕಿದ್ರೂ ಹೋಗೋಕೆ ಸಿದ್ಧರಾಗಿರಬೇಕು ಯಾವ ಹಂತದ ಹೋರಾಟಕ್ಕೂ ಸಿದ್ಧರಿರಬೇಕು ನಾವೆಲ್ಲ ಮೋದಿ, ಶಾ ನಿರ್ಧಾರಗಳ ವಿರುದ್ಧ ಹೋರಾಟ ಮಾಡಬೇಕು, ಬಿಹಾರ, ಕೇರಳ, ಒರಿಸ್ಸಾ ಸರ್ಕಾರಗಳು ಕಾಯ್ದೆ ಜಾರಿ ಮಾಡಲ್ಲ ಅಂತ ಹೇಳಿವೆ ಎಂದರು.

ಕೆಲವು ದಿನಗಳಿಂದ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಉಪ ಚುನಾವಣೆಯಲ್ಲಿ ಎಲ್ಲಾ 15 ಕಡೆ ಸೋತಿದ್ದೇವೆ. ಕಾಂಗ್ರೆಸ್ ಎರಡೂ ಕಡೆ ಮಾತ್ರ ಗೆದ್ದಿದೆ. ಜೆಡಿಎಸ್ ಪಕ್ಷವೇ ಮುಳುಗಿ ಹೋಯ್ತು ಅಂತ ಭಾವಿಸಬೇಡಿ. ದೇವೇಗೌಡ್ರೂ ಸೋತಿದ್ದಾರೆ, ಆದ್ರೆ ಪಕ್ಷವನ್ನ ಕಟ್ಟೊ ಕೆಲಸ ಕಾರ್ಯಕರ್ತರು ಮಾಡಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡುವ ಸೈನ್ಯ ಕಟ್ಟಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೃಷಿ ಸಾಲ ಮನ್ನಾ ಮಾಡಿದರು. ದುರಂತ ಅಂದರೆ, ಉಪ ಚುನಾವಣೆಯಲ್ಲಿ ಯಾರೂ ಇದನ್ನ ಮನಸ್ಸಿಗೆ ತೆಗೆದುಕೊಂಡಿಲ್ಲ. ಬೆಳಗಾವಿ ಯಲ್ಲಿ ಒಳ್ಳೇ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ವಿ ಸೋಲು ಯಾಕಾಯ್ತು ಅಂತ ನಾನು ತಿಳಿದುಕೊಂಡಿದ್ದೇನೆ ಎಂದರು.

Translate »