ಹಣಕ್ಕಾಗಿ ದೊಣ್ಣೆಯಿಂದ ಹೊಡೆದು ಮಹಿಳೆ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
ಮೈಸೂರು

ಹಣಕ್ಕಾಗಿ ದೊಣ್ಣೆಯಿಂದ ಹೊಡೆದು ಮಹಿಳೆ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

January 30, 2020

ಮೈಸೂರು, ಜ. 29(ಆರ್‍ಕೆ)- ಹಣಕ್ಕಾಗಿ ಗಲಾಟೆ ಮಾಡಿ, ದೊಣ್ಣೆಯಿಂದ ಹೊಡೆದು ಮಹಿಳೆ ಕೊಲೆ ಮಾಡಿದ್ದ ಆರೋಪಿಗೆ ಮೈಸೂರು ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದ ನಂಜುಂಡ ನಾಯಕ ಅಲಿಯಾಸ್ ಈರುಳ್ಳಿ ನಂಜುಂಡ ನಾಯಕ ಶಿಕ್ಷೆಗೊಳಗಾದ ಹತ್ಯೆ ಆರೋಪಿ. ಹೊಸಕೋಟೆ ಗ್ರಾಮದ ವಿಧವೆ ಶ್ರೀಮತಿ ರೇವಮ್ಮ ಎಂಬುವರನ್ನು 2016ರ ಮಾರ್ಚ್ 28ರಂದು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ನಂಜುಂಡ ನಾಯಕನ ವಿರುದ್ಧ ಬದನವಾಳು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಅದೇ ಗ್ರಾಮದ ವೆಂಕಟರಮಣ ನಾಯಕ ಎಂಬುವವರೊಂದಿಗೆ ರೇವಮ್ಮ ಅವರಿಗೆ ಮದುವೆಯಾಗಿತ್ತು. ಮದುವೆಯಾದ 3 ತಿಂಗಳಲ್ಲೇ ವೆಂಕಟರಮಣ ನಾಯಕ ಮೃತ ಪಟ್ಟಿದ್ದರು. ನಂತರ ತಮ್ಮ ಸಹೋದರನ ಜೊತೆ ವಾಸವಾಗಿದ್ದ ರೇವಮ್ಮ ಅವರೊಂ ದಿಗೆ ನಂಜುಂಡ ನಾಯಕ ಸಂಬಂಧವಿರಿಸಿಕೊಂಡಿದ್ದ. ಈರುಳ್ಳಿ ವ್ಯಾಪಾರ ಮಾಡುವ ಸಲುವಾಗಿ ಮೋಟಾರ್ ಸೈಕಲ್ ಖರೀದಿಸಲು ಹಣ ಕೊಡು ಎಂದು ಒತ್ತಾಯಿಸುವು ದರೊಂದಿಗೆ ಆತ, ರೇವಮ್ಮನಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ.

2016ರ ಮಾರ್ಚ್ 28ರಂದು ಸಂಜೆ 6 ಗಂಟೆ ವೇಳೆಗೆ ರೇವಮ್ಮ ಜಮೀನಿನ ಸಣ್ಣ ಬಾವಿ ಹತ್ತಿರವಿದ್ದಾಗ ಅಲ್ಲಿಗೆ ಹೋದ ನಂಜುಂಡ ನಾಯಕ, ಹಣ ಕೊಡು ಎಂದು ಗಲಾಟೆ ಮಾಡಿ, ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದ.

ಐಪಿಸಿ ಸೆಕ್ಷನ್ 302 ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದ ಬದನವಾಳು ಠಾಣೆ ಪೊಲೀಸರು, ಆರೋಪಿ ನಂಜುಂಡನಾಯಕನ ವಿರುದ್ಧ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಸ್ವತಿ ಕೌಸಂ ದರ್ ಅವರು, ವಾದ-ಪ್ರತಿವಾದ ಆಲಿಸಿದ ನಂತರ ಕೊಲೆ ಮಾಡಿರುವುದು ಸಾಕ್ಷ್ಯಾ ಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿ ನಂಜುಂಡ ನಾಯಕನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹೆಚ್.ಡಿ.ಆನಂದಕುಮಾರ್ ವಾದ ಮಂಡಿಸಿದ್ದರು

Translate »