ಸುಸ್ತಿ ಸಾಲ ವಸೂಲಾತಿ ಸ್ಥಗಿತಕ್ಕೆ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಸೂಚನೆ
ಮೈಸೂರು

ಸುಸ್ತಿ ಸಾಲ ವಸೂಲಾತಿ ಸ್ಥಗಿತಕ್ಕೆ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಸೂಚನೆ

January 23, 2020

ಬೆಂಗಳೂರು, ಜ.22(ಕೆಎಂಶಿ)-ಸುಸ್ತಿ ಕೃಷಿ ಸಾಲ ವಸೂ ಲಾತಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಇಂದಿಲ್ಲಿ ಸಹಕಾರಿ ಬ್ಯಾಂಕುಗಳಿಗೆ ಆದೇಶ ಮಾಡಿದೆ. ಈ ಹಿಂದೆ ಸರ್ಕಾರ ಹೊರಡಿಸಿದ್ದ ಆದೇಶದನ್ವಯ ಸುಸ್ತಿ ಸಾಲ ಕ್ಕಾಗಿ ಸಾಲ ಪಡೆದ ರೈತರಿಂದ ವಸೂಲಾತಿಗೆ ಅಧಿಕಾರಿಗಳು ಇನ್ನಿಲ್ಲದ ಹಿಂಸೆ ನೀಡುತ್ತಿದ್ದರು. ಪಾವತಿಸದ ರೈತರಿಂದ ಟ್ರ್ಯಾಕ್ಟರ್ ಸೇರಿ ದಂತೆ ಕೃಷಿ ಪರಿಕರ ಇಲ್ಲವೇ ಇನ್ನಿತರ ಪರಿ ಕರಗಳನ್ನು ವಶಪಡಿಸಿಕೊಂಡಿರುವ ಘಟನೆಗಳು ರಾಜ್ಯಾ ದ್ಯಂತ ನಡೆದಿವೆ. ಸಾಲ ವಸೂಲಾತಿ ಸರ್ಕಾರದ ನಿರ್ಧಾರಕ್ಕೆ ರೈತರಿಂದ ಮತ್ತು ಪ್ರತಿಪಕ್ಷದ ನಾಯಕರಿಂದ ತೀವ್ರ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡು ಸಹಕಾರಿ ಇಲಾಖೆ ಮೂಲಕ ಇಂದು ಸುತ್ತೋಲೆ ಹೊರಡಿಸಿ ಆದೇಶ ಮಾಡಿದೆ.

ಕಳೆದ ಡಿಸೆಂಬರ್ 27ರಂದು ಸುಸ್ತಿ ಕೃಷಿ ಸಾಲ ವಸೂ ಲಾತಿ ಮಾಡುವಂತೆ ಇದೇ ಇಲಾಖೆ ಸಂಬಂಧಪಟ್ಟ ಪತ್ತಿನ ಸಹಕಾರ ಬ್ಯಾಂಕುಗಳಿಗೆ ಆದೇಶ ಹೊರಡಿಸಿತ್ತು. ವಸೂ ಲಾತಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ 2 ಆದೇಶ ಗಳನ್ನು ಹಿಂದಕ್ಕೆ ಪಡೆದು, ಇಂದು ಹೊಸ ಆದೇಶ ಹೊರ ಡಿಸಿ, ರೈತರಿಗೆ ತುಸು ನೆಮ್ಮದಿ ತಂದಿದೆ. ರಾಜ್ಯದಲ್ಲಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ, ಇಂತಹ ಸನ್ನಿವೇಶದಲ್ಲಿ ನಾವು ಕೃಷಿ ಮೇಲೆ ಪಡೆದ, ಸಾಲ ತೀರಿಸುವುದಾದರೂ ಹೇಗೆ ಎಂದು ರೈತರು ಕಂಗಾಲಾಗಿದ್ದರು.

Translate »