ಸುತ್ತೂರು ಮಹಾ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟ 178 ಜೋಡಿಗಳು
ಮೈಸೂರು

ಸುತ್ತೂರು ಮಹಾ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟ 178 ಜೋಡಿಗಳು

January 23, 2020

ಮೈಸೂರು, ಜ.22(ಆರ್‍ಕೆಬಿ)- ಮೈಸೂರು ಜಿಲ್ಲೆಯ ಸುತ್ತೂರು ಶ್ರೀಕ್ಷೇತ್ರ ಜಾತ್ರಾ ಮಹೋ ತ್ಸವದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ 178 ಜೋಡಿ ಗಳು ನವ ಜೀವನಕ್ಕೆ ಕಾಲಿರಿಸಿದರು.

ಮಧ್ಯಾಹ್ನ 12 ಗಂಟೆ ವೇಳೆಗೆ ಶುಭ ಲಗ್ನ ದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಮ್ಮುಖ ದಲ್ಲಿ ನಾದಸ್ವರದ ಹಿಮ್ಮೇಳದ ನಡುವೆ ನೂತನ ವಧು-ವರರು ಸತಿ-ಪತಿಗಳಾಗಿ ನವ ದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದರು.

ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬಾಗಲಕೋಟೆ, ಕೊಡಗು, ಹಾಸನ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿವಾಹ ಸಂದರ್ಭದಲ್ಲಿ ವರನಿಗೆ ಪಂಚೆ, ಶರ್ಟು, ವಲ್ಲಿ ಹಾಗೂ ವಧುವಿಗೆ ಸೀರೆ, ರವಿಕೆ, ಮಾಂಗಲ್ಯ, ಕಾಲುಂಗುರಗಳನ್ನು ನೀಡಲಾಯಿತು.

ಕಪಿಲಾ ನದಿ ತೀರದ ಸುತ್ತೂರು ಶ್ರೀ ಕ್ಷೇತ್ರ ದಲ್ಲಿ ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿ ದಿನದಂದು ಆರು ದಿನಗಳ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಪ್ರಾರಂಭವಾಗು ತ್ತದೆ. ಮರು ದಿನ ತ್ರಯೋದಶಿಯಂದು ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯುವುದು ವಾಡಿಕೆ. ಅಂತೆಯೇ ಇಂದು ಸಹ 178 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಉತ್ಸಾಹ ಮತ್ತು ಸಂತೋಷ ದಿಂದ ಪಾಲ್ಗೊಂಡಿದ್ದರು.

ಈ ಪೈಕಿ ಪರಿಶಿಷ್ಟ ಜಾತಿಯ 106, ಹಿಂದುಳಿದ ವರ್ಗದ 33, ಅಂತರ ಜಾತಿಯ 18, ವೀರಶೈವ -ಲಿಂಗಾಯತ-11, ಪರಿಶಿಷ್ಟ ಪಂಗಡದ 1 ಸೇರಿ 178 ಜೋಡಿಗಳು ಭಾಗವಹಿಸಿದ್ದರು. ಈ ಪೈಕಿ ತಮಿಳುನಾ ಡಿನ 2, ಅಂಗವಿಕಲರು 5 ಹಾಗೂ ವಿಧುರ- ವಿಧವೆಯರಲ್ಲಿ 2 ಜೋಡಿಗಳಿದ್ದಾರೆ.

ಎಲ್ಲ ವಧು-ವರರು ಹೊಸ ಸೀರೆ, ರವಿಕೆ, ಹೊಸ ವಸ್ತ್ರಗಳನ್ನು ತೊಟ್ಟು, ಬಾಸಿಂಗ ಕಟ್ಟಿಕೊಂಡು ಸುಂದರವಾಗಿ ಅಲಂಕರಿಸಿ ಕೊಂಡು ಕುಳಿತಿದ್ದರು. ಶುಭ ಮುಹೂರ್ತ ಆರಂಭವಾಗುತ್ತಿದ್ದಂತೆ ಪೂಜ್ಯರು ಮತ್ತು ಅತಿ ಗಣ್ಯರು ಮಾಂಗಲ್ಯ ವಿತರಿಸಿದರು. ನವ ಜೋಡಿಗೆ ಆರ್‍ಎಸ್‍ಎಸ್ ಮಹಾ ಜಂಟಿ ಕಾರ್ಯದರ್ಶಿ ಮುಕುಂದ್ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಮಂಗಳವಾದ್ಯ ಮೊಳಗುತ್ತಿದ್ದಂತೆ ವರನಿಂದ ವಧುವಿಗೆ ತಾಳಿ ಕಟ್ಟಿದರು. ಗಣ್ಯರು ವಧುಗಳಿಗೆ ಬಾಗಿನ ಸಮರ್ಪಿಸಿದರು.

ಈ ವೇಳೆ ಬದುಕಿನ ಸುಖ-ದುಃಖಗಳನ್ನು ನಾವಿಬ್ಬರೂ ಸಮಾನವಾಗಿ ಪರಸ್ಪರ ಅರಿತು, ಪ್ರೀತಿ, ವಿಶ್ವಾಸ ಮತ್ತು ಗೌರವಾದರ ಗಳಿಂದ ಸಮ ಜೀವನ ನಡೆಸುತ್ತೇವೆ. ಪರಿ ಶುದ್ಧ ಜೀವನವೇ ನಮ್ಮ ಪರಮ ಧ್ಯೇಯ ವೆಂದು ಮನಃಪೂರ್ವಕವಾಗಿ ನಡೆ ನುಡಿ ಗಳಿಂದ ಆಚರಿಸುತ್ತೇವೆ ಎಂದು ನವ ದಂಪತಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನವ ದಂಪತಿ ಗಳಿಗೆ ನೆರೆದಿದ್ದ ಸಹಸ್ರಾರು ಜನರು ಕುಳಿ ತಲ್ಲೇ ಆಶೀರ್ವದಿಸಿದರು. ಬಳಿಕ ನೂತನ ದಂಪತಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಇದೊಂದು ಸದವಕಾಶ. ಎಲ್ಲರಿಗೂ ಸಿಗುವುದಿಲ್ಲ. ನಮ್ಮ ಅದೃಷ್ಟವೆಂದೇ ಹೇಳ ಬೇಕು. ಅನೇಕರಿಗೆ ಮದುವೆ ಮಾಡಿಕೊಳ್ಳ ಲಾಗದು. ಸುತ್ತೂರು ಮಠದಿಂದ ನಮಗೆ ಮದುವೆ ಮಾಡಿದ್ದು ಖುಷಿ ಎನಿಸುತ್ತಿದೆ. ಇಲ್ಲಿ ಸಾವಿರಾರು ಜನರ ಮಧ್ಯೆ ಮದುವೆ ಆಗಬೇಕೆಂದರೆ ನಿಜಕ್ಕೂ ನಮ್ಮ ಪುಣ್ಯ. – ದೊಡ್ಡ ಕಾನ್ಯದ ರವಿ ಮತ್ತು ಶ್ವೇತಾ, ನವ ದಂಪತಿ

ಸುತ್ತೂರು ಜಾತ್ರೆ ಸಂದರ್ಭದಲ್ಲಿ ದೊಡ್ಡ ವರ ಸಮ್ಮುಖದಲ್ಲಿ ನಮ್ಮ ಮದುವೆಯಾ ದದ್ದು ತುಂಬಾ ಖುಷಿಯಾಗಿದೆ. ನಮಗೂ ಜೀವನದಲ್ಲಿ ಉತ್ಸಾಹ ಬಂದಿದೆ. ಉತ್ತಮ ವಾಗಿ ಬಾಳು ನಡೆಸುತ್ತೇವೆ. – ಗಾರೆ ಕೆಲಸದ ರಾಜು ಮತ್ತು ಚೆನ್ನಾಜಮ್ಮ, ನವ ದಂಪತಿ

Translate »