ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಶಿಬಿರ
ಮೈಸೂರು

ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಶಿಬಿರ

January 22, 2020

ಮುಂಬರುವ ಶೈಕ್ಷಣಿಕ ಸಾಲಿನಿಂದ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್ ಆರಂಭ  ಇಲಾಖೆ ಉಪನಿರ್ದೇಶಕ ಡಾ.ಪಾಂಡುರಂಗ ಮಾಹಿತಿ
ಮೈಸೂರು, ಜ.21(ಪಿಎಂ)- ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2019ರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದ ಅವಿಭಾಜ್ಯ ಅಂಗ ವೆಂದು ಉಲ್ಲೇಖಿಸಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಿಂದ ಮೈಸೂರು ಜಿಲ್ಲೆಯ ಎಲ್ಲಾ ಹಿರಿಯ ಪ್ರಾಥ ಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ತೆರೆಯಲು ಸಿದ್ಧತೆ ಗಳು ನಡೆದಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಪಾಂಡುರಂಗ ತಿಳಿಸಿದರು.

ಮೈಸೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಶ್ರೀ ಜಯಚಾಮರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಕಚೇರಿಯಲ್ಲಿ ಸಂಘ ಟನೆ ಕುರಿತು ಮಾಹಿತಿ ನೀಡುವ ಸಲು ವಾಗಿ ಮೈಸೂರು ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ಹಮ್ಮಿ ಕೊಂಡಿದ್ದ ಒಂದು ದಿನದ ಶಿಬಿರ ಉದ್ಘಾ ಟಿಸಿ ಅವರು ಮಾತನಾಡಿದರು.

ಮುಂಬರುವ ಶೈಕ್ಷಣಿಕ ಸಾಲಿನಿಂದ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ ಹಿರಿಯ ಪ್ರಾಥ ಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣಾ ಕಾರಿಗಳು ಇಲ್ಲಿ ನೀಡುವ ಮಾಹಿತಿಯನ್ನು ಪಡೆದುಕೊಂಡು ತಮ್ಮ ಅಧಿಕಾರ ವ್ಯಾಪ್ತಿ ಯಲ್ಲಿ ಘಟಕ ತೆರೆಯುವ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳ ಬೇಕು ಎಂದು ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಕಾರ್ಯದರ್ಶಿ ಗಂಗಪ್ಪಗೌಡ ಮಾತನಾಡಿ, ಈ ಹಿಂದೆ ವಿದ್ಯಾರ್ಥಿ ತನಗಾಗಿ ಫಲಿ ತಾಂಶ ಪಡೆಯುತ್ತಿದ್ದ. ಆದರೆ ಈಗ ಪೋಷ ಕರು ಹಾಗೂ ಅಧಿಕಾರಿಗಳಿಗಾಗಿ ಅಂಕ ಆಧಾರಿತ ಫಲಿತಾಂಶ ಪಡೆಯುವಂತಾ ಗಿದೆ. ಹೀಗೆ ಅಂಕ ಗಳಿಸಿ ಉತ್ತಮ ಫಲಿ ತಾಂಶ ಪಡೆಯುವುದೇ ಶಿಕ್ಷಣ ಎನ್ನುವಂತಾ ಗಿದೆ. ಮಕ್ಕಳು, ಪೋಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಈ ರೀತಿಯ ಮನೋಭಾವ ಹೋಗಬೇಕು ಎಂದರು.

ನೈತಿಕತೆ, ಶಿಸ್ತು ಕಲಿಯುವುದು ಶಿಕ್ಷಣ. ಶಿಕ್ಷಣ ಗುಣಾತ್ಮಕ ಶಕ್ತಿ ಹೆಚ್ಚಿಸಿ ಸಕಾರಾತ್ಮಕ ಮನೋಭಾವ ಬೆಳೆಸುವಂತಿರಬೇಕು. ಶಿಕ್ಷಣ ವನ್ನು ಅಂಕ ಆಧಾರಿತ ಫಲಿತಾಂಶ ಹಾಗೂ ಶ್ರೀಮಂತಿಕೆಯನ್ನು ಹಣದ ಆಧಾರದಲ್ಲಿ ಅಳೆಯಬಾರದು. ನಿಜವಾಗಿ ಹೇಳಬೇಕಾ ದರೆ ಹಣ ಇದ್ದರೆ ಮಾತ್ರ ಶ್ರೀಮಂತ ಎನ್ನುವ ಮಾನದಂಡ ಸೂಕ್ತವಲ್ಲ. ಶ್ರೀಮಂತಿಕೆ ಎಂದರೆ ಒಬ್ಬ ವ್ಯಕ್ತಿಯಲ್ಲಿ ಹಣದ ಜೊತೆಗೆ ಆರೋಗ್ಯ ಇರಬೇಕು. ನೆರೆಹೊರೆ ಸಂಬಂಧ ಉತ್ತಮ ವಾಗಿರಬೇಕು. ಸಮಾಜದಲ್ಲಿ ಪ್ರಾಮಾಣಿಕತೆ ಹಾಗೂ ಘನತೆಯಿಂದ ಬದುಕುವುದೇ ನಿಜವಾದ ಶ್ರೀಮಂತಿಕೆ ಎಂದು ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದ ಮತ್ತೊಂದು ಮುಖ. ಆದರೆ ಇದನ್ನು ಶಿಕ್ಷಣ ವ್ಯವಸ್ಥೆ ಯಲ್ಲಿ ಮುನ್ನೆಲೆಗೆ ತರುವ ಪ್ರಯತ್ನ ಪರಿ ಣಾಮಕಾರಿಯಾಗಿ ನಡೆದಿಲ್ಲ. ಆದರೆ 2019ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದ ಅವಿಭಾಜ್ಯ ಅಂಗ ಎಂದು ಪರಿಗಣಿಸಲಾಗಿದೆ ಎಂದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಕೆ.ಬಸವರಾಜು, ಜಿಲ್ಲಾ ಮುಖ್ಯ ಆಯುಕ್ತ ಪಿ.ವಿಶ್ವನಾಥ್ ಮತ್ತಿತರರು ಹಾಜರಿದ್ದರು.

Translate »