ಮೈಸೂರಲ್ಲಿ ಆರ್ಥಿಕ ಗಣತಿಗೆ ಚಾಲನೆ
ಮೈಸೂರು

ಮೈಸೂರಲ್ಲಿ ಆರ್ಥಿಕ ಗಣತಿಗೆ ಚಾಲನೆ

January 23, 2020

ಮೈಸೂರು,ಜ.22(ಎಂಟಿವೈ)- ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನು ಷ್ಟಾನ ಮಂತ್ರಾಲಯವು ದೇಶದಾದ್ಯಂತ ನಡೆಸುತ್ತಿರುವ 7ನೇ ಆರ್ಥಿಕ ಗಣತಿಯು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಆರಂಭ ವಾಗಿದ್ದು, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಬುಧವಾರ ಆರ್ಥಿಕ ಗಣತಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು.

ಮೈಸೂರು ಮಹಾನಗರಪಾಲಿಕೆ ಕಚೇರಿ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ನಗರದಲ್ಲಿ ರುವ ಸಂಘಟಿತ ಹಾಗೂ ಅಸಂಘಟಿತ ಉದ್ದಿಮೆದಾರರ ಮಾಹಿತಿ ನಮೂದಿಸಲು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ, ಗಣತಿಗೆ ಚಾಲನೆ ನೀಡಲಾಯಿತು.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ಪ್ರತಿ 5 ವರ್ಷಗಳಿಗೊಮ್ಮೆ ಜನಗಣತಿ, ಜಾನುವಾರು ಗಣತಿಯಂತೆ ಆರ್ಥಿಕ ಗಣತಿಯನ್ನೂ ನಡೆಸಲಾಗುತ್ತಿದೆ. ಈಗಿನದು 7ನೇ ಗಣತಿಯಾಗಿದೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿರುವ ಸಣ್ಣಪುಟ್ಟ ವ್ಯಾಪಾರಿಗಳು, ಸಂಘಟಿತ ಹಾಗೂ ಅಸಂಘ ಟಿತ ಉದ್ದಿಮೆದಾರರು ಆರ್ಥಿಕ ಗಣತಿಗೆ ಒಳಪಡುತ್ತಾರೆ. ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾ ಲಯ, ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ, ಕೇಂದ್ರ ಸರ್ಕಾರದ ಇ-ಆಡಳಿತ ಅಡಿಯಲ್ಲಿ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ(ಕಾಮನ್ ಸರ್ವಿಸ್ ಸೆಂಟರ್) ಸಹಯೋಗದಲ್ಲಿ ಖಾಸಗಿ ಗಣತಿ ದಾರರ ಮೂಲಕ ಆರ್ಥಿಕ ಗಣತಿ ನಡೆ ಸಲು ಕ್ರಮ ಕೈಗೊಳ್ಳಲಾಗಿದೆ. 2014ರಲ್ಲಿ ನಡೆದ 6ನೇ ಆರ್ಥಿಕ ಗಣತಿಯಲ್ಲಿ ನಗರ/ ಪಟ್ಟಣಗಳಲ್ಲಿ 52,170 ಹಾಗೂ ಗ್ರಾಮೀಣ ಪ್ರದೇಶದಲ್ಲಿ 88,062 ಉದ್ದಿಮೆಗಳು ಸೇರಿ ದಂತೆ ಮೈಸೂರು ಜಿಲ್ಲೆಯಲ್ಲಿ 1,40,232 ಉದ್ದಿಮೆಗಳನ್ನು ಗುರುತಿಸಲಾಗಿತ್ತು. ಈ ಬಾರಿ ಮೈಸೂರಿನಲ್ಲಿ 30 ಸಾವಿರ ಸಂಘ ಟಿತ, ಅಸಂಘಟಿತ ಉದ್ದಿಮೆದಾರರು ಇರಬಹುದು ಎಂದರು.

ಗಣತಿಯಲ್ಲಿ: ರಸ್ತೆ ಬದಿ, ಬೀದಿ, ಬಯಲು ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ ವಿಲ್ಲದ ಪ್ರದೇಶಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾ ಉದ್ದಿಮೆಯ ಮಾಲೀಕನ ಮನೆ ಎಂದೇ ಪರಿಗಣಿಸಿ ಗಣತಿ ಮಾಡಲಾಗುವುದು. ಗಣತಿದಾರರು ಮನೆ, ಉದ್ದಿಮೆಗಳಿಗೆ ಭೇಟಿ ನೀಡಿದಾಗ ಮಾಲೀ ಕರು ಅಗತ್ಯವಾದ ವಿವರ ನೀಡಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭ ದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ಕೃಷ್ಣಮೂರ್ತಿ, ಸಹಾಯಕ ನಿರ್ದೇ ಶಕ ಎಂ.ಪ್ರಕಾಶ್, ಪಾಲಿಕೆ ಸಹಾಯಕ ಆಯುಕ್ತ ಶಿವಾನಂದಮೂರ್ತಿ ಇತರರಿದ್ದರು.

Translate »