ವಿವಿಧ ಗ್ರಾಪಂಗಳ 25 ಸ್ಥಾನಗಳಿಗೆ ಉಪ ಚುನಾವಣೆ
ಮೈಸೂರು

ವಿವಿಧ ಗ್ರಾಪಂಗಳ 25 ಸ್ಥಾನಗಳಿಗೆ ಉಪ ಚುನಾವಣೆ

January 23, 2020

ಮೈಸೂರು, ಜ.22- ಮೈಸೂರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ವಿವಿಧ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಅಧಿಸೂಚನೆ ಹೊರ ಡಿಸಲಾಗಿದ್ದು, ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

2020ರ ಜ.25 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಜನವರಿ 28 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ, ನಾಮಪತ್ರಗಳನ್ನು ಪರಿಶೀಲನೆ ಜ.29 ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದು ಕೊಳ್ಳಲು ಜ.31 ಕೊನೆಯ ದಿನವಾಗಿರುತ್ತದೆ. ಒಂದು ವೇಳೆ ಮತದಾನ ಅವಶ್ಯವಿದ್ದರೆ ಫೆ.9 ರಂದು ಮತದಾನ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರು ಮತದಾನ ಅಗತ್ಯವಿದ್ದಲ್ಲಿ ಫೆ.10 ರಂದು ನಡೆಸಲಾಗುವುದು, ಫೆ.11ರಂದು ಮತ ಎಣಿಕೆ ನಡೆಯಲಿದೆ. ಜ.25ರಿಂದ ಫೆ.11ರವರೆಗೆ ಚುನಾವಣಾ ನೀತಿ ಸಂಹಿತೆ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ.

ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳು: ಮೈಸೂರು ತಾಲೂಕಿನ ಯಡಕೊಳ, ಸಿದ್ದಲಿಂಗಪುರ, ದೂರ, ಶ್ರೀರಾಂಪುರ. ನಂಜನಗೂಡು ತಾಲೂಕಿನ ಕೂಡ್ಲಾಪುರ, ಸಿಂಧುವಳ್ಳಿ, ಹುಣಸೂರು ತಾಲೂಕಿನ ಜಾಬಗೆರೆ, ಬೋಳನಹಳ್ಳಿ, ಬನ್ನಿಕುಪ್ಪೆ, ಮರದೂರು, ಬೀಜಗನಹಳ್ಳಿ, ಕಡೇಮನುಗನ ಹಳ್ಳಿ, ನೇರಳಕುಪ್ಪೆ, ಕೆ.ಆರ್.ನಗರ ತಾಲ್ಲೂಕಿನ ಕರ್ಪೂರವಳ್ಳಿ, ಹನಸೋಗೆ, ಹೊಸಕೋಟೆ, ನರಚನಹಳ್ಳಿ, ಅಡಗೂರು, ಚಂದಗಾಲು, ಹಂಪಾಪುರ, ಹಳಿಯೂರು, ಹೆಬ್ಬಾಳು, ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ, ರಾವಂ ದೂರು ಗ್ರಾಮ ಪಂಚಾಯಿತಿಗಳಲ್ಲಿ ಉಪ ಚುನಾವಣೆ ನಡೆಯ ಲಿದೆ. ಈ ಪೈಕಿ ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ 2 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ತಲಾ 1 ಸ್ಥಾನಗಳಿಗೆ ಉಪ ಚುನಾ ವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Translate »