ರಾಜ್ಯದಲ್ಲಿ ಕಟ್ಟೆಚ್ಚರ ಘೋಷಣೆ: ಎಲ್ಲೆಡೆ ಕಣ್ಗಾವಲು
ಮೈಸೂರು

ರಾಜ್ಯದಲ್ಲಿ ಕಟ್ಟೆಚ್ಚರ ಘೋಷಣೆ: ಎಲ್ಲೆಡೆ ಕಣ್ಗಾವಲು

January 21, 2020

ಬೆಂಗಳೂರು, ಜ.20(ಕೆಎಂಶಿ)- ಕೇಂದ್ರ ಗೃಹ ಇಲಾಖೆ ಸಲಹೆ ಮೇರೆಗೆ ರಾಜ್ಯದಲ್ಲಿ ಕಟ್ಟೆಚ್ಚರ (ಹೈಅಲರ್ಟ್) ಘೋಷಣೆ ಮಾಡ ಲಾಗಿದೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿ, ಅದರಲ್ಲಿ ಸುಧಾರಿತ ಬಾಂಬ್‍ಗಳು ಪತ್ತೆಯಾದ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಈ ಘೋಷಣೆ ಮಾಡಿದೆ.

ಪೌರತ್ವ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮೊದಲ ಹೆಜ್ಜೆ ಮುಂದಿ ಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರ ವಿರೋಧಿ ಶಕ್ತಿ ಗಳು ಮತ್ತು ಉಗ್ರರು ಇಲ್ಲಿ ದೊಡ್ಡ ಪ್ರಮಾಣ ದಲ್ಲಿ ಸಂಚು ನಡೆಸಬಹುದು ಎಂದು ಕೇಂದ್ರ ಗುಪ್ತಚಾರ ಇಲಾಖೆ ಎಚ್ಚರಿಕೆ ನೀಡಿದೆ.

ಅದರಲ್ಲೂ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಕರಾವಳಿ ತೀರವನ್ನು ಅತೀ ಸೂಕ್ಷ್ಮವೆಂದು ಪರಿಗಣಿಸಬೇಕು ಹಾಗೂ ಹೆಚ್ಚು ಭದ್ರತೆ ನೀಡಬೇಕೆಂದು ಸಲಹೆ ಮಾಡಿದೆ. ರಾಜ್ಯದ ಆಡಳಿತ ಪ್ರಮುಖ ಕಚೇರಿ ಗಳು, ಅಣೆಕಟ್ಟುಗಳು, ಜನನಿಬಿಡ ಪ್ರದೇಶ, ಪ್ರವಾಸಿ ಕೇಂದ್ರ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ. ಮುನ್ನೆ ಚ್ಚರಿಕಾ ಕ್ರಮವಾಗಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡಿ ಮತ್ತು ಹೆಚ್ಚಿನ ಪಹರೆ ನಿಯೋಜಿಸಿ ಎಂದು ಸೂಚಿಸಿದೆ.

ಪೌರತ್ವ ಕಾಯ್ದೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತಗೊಂಡು ಚಳುವಳಿ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿ ದ್ದರು. ಇದರ ಸೇಡು ತೀರಿಸಿಕೊಳ್ಳಲು ಕೆಲವು ಸಂಘಟನೆಗಳು ಮುಂದಾಗಿವೆ.

ಅದರಲ್ಲೂ ಪೌರತ್ವ ಪರ ಹೋರಾಟ ನಡೆಸುವ ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರನ್ನು ಮುಗಿಸಲು ಸಂಚು ನಡೆದಿ ರುವುದಲ್ಲದೆ, ಕೆಲವೆಡೆ ಬುಡಮೇಲು ಕೃತ್ಯ ನಡೆಸುವ ಸಿದ್ಧತೆಗಳೂ ನಡೆದಿವೆ.

ಈಗಾಗಲೇ ಎಸ್‍ಡಿಎಫ್‍ನ ಕೆಲವು ಕಾರ್ಯಕರ್ತರು ಆರ್‍ಎಸ್‍ಎಸ್ ಮುಖಂ ಡರ ಹತ್ಯೆಗೆ ಸಂಚು ರೂಪಿಸಿ, ಆರ್‍ಎಸ್‍ಎಸ್ ಕಾರ್ಯಕರ್ತನೊಬ್ಬನ ಮೇಲೆ ಮಾರ ಣಾಂತಿಕ ಹಲ್ಲೆ ಕೂಡ ಮಾಡಿದ್ದು, ಅವರು ಈಗಾಗಲೇ ಸೆರೆ ಸಿಕ್ಕಿದ್ದಾರೆ. ಇದರ ಬೆನ್ನಲ್ಲೇ ಮಂಗಳೂರು ವಿಮಾನ ನಿಲ್ದಾಣವನ್ನು ಸ್ಫೋಟಿ ಸಲು ಬಾಂಬ್ ಇಡಲಾಗಿತ್ತು ಎಂಬ ಮಾಹಿ ತಿಯೂ ದೊರೆತಿದೆ. ಬಾಂಬ್ ದೊರೆತ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜ್ಯ ಗೃಹ ಇಲಾಖೆಗೆ ಎಚ್ಚರಿಕೆ ನೀಡಿ, ಕೆಲವು ನಗರ ಮತ್ತು ತಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಮಂಗಳೂರು ವಿಮಾನ ನಿಲ್ದಾಣ ಪ್ರವೇಶ ದ್ವಾರದಲ್ಲಿನ ಭದ್ರತಾ ತಪಾಸಣಾ ಗೇಟ್ ಬಳಿ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್ ಗಮನಿಸಿದ ನಿಲ್ದಾಣದ ಅಧಿಕಾರಿಗಳು ಪೊಲೀ ಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಲ್ಯಾಪ್‍ಟಾಪ್ ಬ್ಯಾಗ್‍ನಂತಿ ರುವ ವಸ್ತುವನ್ನು ಬಾಂಬ್ ನಿಷ್ಕ್ರಿಯ ದಳದ ವಾಹನದೊಳಕ್ಕೆ ಸಾಗಿಸಿ, ನಗರದ ಹೊರ ವಲಯದಲ್ಲಿ ನಿಷ್ಕ್ರಿಯಗೊಳಿಸಿದ್ದಾರೆ.

Translate »