ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಸ್‍ಜೆಸಿಇ ನೌಕರರ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಸ್‍ಜೆಸಿಇ ನೌಕರರ ಪ್ರತಿಭಟನೆ

January 21, 2020

ಬೇಡಿಕೆ, ಬಾಕಿ ವೇತನ, ಇತರೆ ಸೌಲಭ್ಯ, ವೇತನ ಹೆಚ್ಚಳ

ಮೈಸೂರು, ಜ.20(ಎಂಟಿವೈ)- ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ನೌಕರರು ಸೋಮವಾರ ಕಾಲೇಜು(ಎಸ್‍ಜೆಸಿಇ) ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಅನುದಾನಿತ ಸಂಸ್ಥೆಯಾದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯ ರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಸಿಬ್ಬಂದಿಗೆ ಸಕಾಲಕ್ಕೆ ವೇತನ ನೀಡುತ್ತಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆಯೂ ವೇತನ ಸಮಸ್ಯೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಪ್ರತಿ ಭಟನೆ ಮಾಡಲಾಗಿತ್ತು. ಇದರಿಂದ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಸಂಸ್ಥೆಯ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ ಇದೀಗ ಮತ್ತೆ ಸಮಸ್ಯೆ ಸೃಷ್ಟಿಯಾ ಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಬೋಧಕರು ಹಾಗೂ ಬೋಧಕೇತ ರರಿಗೆ ಒಂದು ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಎಲ್ಲಾ ಸಿಬ್ಬಂದಿ ವೇತನವನ್ನೇ ನಂಬಿ ಜೀವನ ನಡೆಸುತ್ತಿ z್ದÉೀವೆ. ಡಿಸೆಂಬರ್ 5 ತಿಂಗಳಿನಿಂದ ವೇತನ ವಿಲ್ಲದೆ ಸಂಕಷ್ಟ ಎದುರಿಸುತ್ತಿz್ದÉೀವೆ. ವಿವಿಧೆಡೆಗಳಿಂದ ಆಗಮಿಸಿ ಮೈಸೂರಿನಲ್ಲಿ ನೆಲೆಸಿರುವ ನಮಗೆ ವೇತನವೇ ಜೀವನಾ ಧಾರವಾಗಿದ್ದು, ನಿಗದಿತ ಸಮಯಕ್ಕೆ ದೊರೆ ಯದಿರುವುದರಿಂದ ಪರದಾಡುವಂತಾ ಗಿದೆ. ಈ ಕುರಿತು ಕಾಲೇಜು ಆಡಳಿತ ಮಂಡ ಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಸರ್ಕಾರ ಶೇ.85ರಷ್ಟು ಅನುದಾನ ನೀಡು ತ್ತಿದ್ದು, ಉಳಿದ ಮೊತ್ತವನ್ನು ಕಾಲೇಜು ಆಡಳಿತ ಮಂಡಳಿ ಪಾವತಿಸಬೇಕು. ಆದರೆ, ಕಾಲೇಜನ್ನು ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿದಾಗಿನಿಂದ ಸರ್ಕಾರ ತನ್ನ ಪಾಲಿನ ವೇತನ ನೀಡುವಲ್ಲಿ ಸತಾಯಿಸು ತ್ತಿದೆ ಎಂದು ದೂರಿದರು. ಕಾಲ ಕಾಲಕ್ಕೆ ಪ್ರಮೋಷನ್ ನೀಡಬೇಕು. ಇಎಲ್ ಸೌಲಭ್ಯ ಕಲ್ಪಿಸಬೇಕು. ವೇತನ ಹೆಚ್ಚಿಸ ಬೇಕು ಎಂದು ಒತ್ತಾಯಿಸಿದರು.

Translate »