ಮೈಸೂರು,ಡಿ.24(ಆರ್‍ಕೆ)-ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡಗಳಾದ ಮೈಸೂರಿನ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಕೆಡವಿ ಅದೇ ಮಾದರಿಯಲ್ಲೇ ಹೊಸದಾಗಿ ನಿರ್ಮಿಸಬೇಕೋ ಅಥವಾ ರಿಪೇರಿ ಮಾಡಿ ಯಥಾಸ್ಥಿತಿ ಸಂರಕ್ಷಿಸಿಕೊಳ್ಳಬೇಕೋ ಎಂಬುದರ ಬಗ್ಗೆ 2020ರ ಜನವರಿ 3 ರೊಳಗೆ ಸ್ಪಷ್ಟಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಇಂದಿಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಎರಡೂ ಕಟ್ಟಡಗಳನ್ನು ಹಾಗೆಯೇ ಬಿಟ್ಟಿರುವುದರಿಂದ ನಗರದ ಹೃದಯ ಭಾಗದಲ್ಲಿ ಅವಲಕ್ಷಣವಾಗಿ ಕಾಣುತ್ತದೆ. ಅವುಗಳ ಬಗ್ಗೆ ಶೀಘ್ರ ನಿರ್ಧಾರ ಕೈಗೊಂಡು ಕ್ರಮ ವಹಿಸಬೇಕಾಗಿದೆ ಎಂದು…
ಹತ್ತು ದಿನಗಳ `ನಂದಿನಿ ಸಿಹಿ ಉತ್ಸವ’ಕ್ಕೆ ಚಾಲನೆ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ
December 25, 2019ಮೈಸೂರು, ಡಿ.24(ಆರ್‍ಕೆಬಿ)- ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ 10 ದಿನಗಳ ಸಿಹಿ ಉತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು. ಮೈಸೂರಿನ ಕೆಆರ್‍ಎಸ್ ರಸ್ತೆಯ ಇಎಸ್‍ಐ ಆಸ್ಪತ್ರೆ ಮುಂಭಾಗದ ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇ ಶಕರಾದ ಡಾ.ಎಂ.ಎಸ್.ವಿಜಯಕುಮಾರ್ ಮೈಸೂರು ಹಾಲು ಒಕ್ಕೂಟ ಹೊಸದಾಗಿ ಆವಿಷ್ಕರಿಸಿರುವ `ನಂದಿನಿ ಚಕ್ಕಿ ಲಾಡು’ ಬಿಡುಗಡೆ ಮಾಡುವ ಮೂಲಕ ಸಿಹಿ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೂರು ವರ್ಷದಿಂದ ಒಕ್ಕೂಟದ ವತಿಯಿಂದ `ಸಿಹಿ ಉತ್ಸವ’ ಏರ್ಪಡಿಸುತ್ತಾ ಬರ…
ಆದಿ ಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವ ಯೋಗಿಗಳ 1069ನೇ ಜಯಂತಿ ಮಹೋತ್ಸವದ ಸರಳ ರೀತಿ ಆಚರಣೆಗೆ ಸುತ್ತೂರಲ್ಲಿ ಸಚಿವ ವಿ.ಸೋಮಣ್ಣ ಚಾಲನೆ
December 25, 2019ಮೈಸೂರು,ಡಿ.24(ಆರ್‍ಕೆಬಿ)-ಆದಿ ಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವ ಯೋಗಿಗಳ 1069ನೇ ಜಯಂತಿ ಮಹೋತ್ಸವದ ಸರಳ ಆಚರಣೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳವಾರ ಸುತ್ತೂರಿ ನಲ್ಲಿ ಚಾಲನೆ ನೀಡಿದರು. ಸುತ್ತೂರು ಶ್ರೀಕ್ಷೇತ್ರದ ಆವರಣದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಬಳಿಕ ಆದಿ ಜಗದ್ಗುರು ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ನೂತನ ವರ್ಷದ ಕ್ಯಾಲೆಂಡರ್ ಅನ್ನೂ ಬಿಡುಗಡೆ ಮಾಡಿದರು….
ಸಚಿವ ವಿ.ಸೋಮಣ್ಣರಿಂದ ಹೆಚ್.ವಿಶ್ವನಾಥ್ ಭೇಟಿ
December 25, 2019ಮೈಸೂರು, ಡಿ.24(ಆರ್‍ಕೆಬಿ)- ವಸತಿ ಸಚಿವರೂ ಆಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳ ವಾರ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಹುಣಸೂರು ಉಪ ಚುನಾವಣೆಯಲ್ಲಿ ಸೋಲು ಕಂಡಿರುವ ಅಡಗೂರು ಹೆಚ್. ವಿಶ್ವನಾಥ್ ಅವರ ಕುವೆಂಪುನಗರದ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದ ಸಚಿವ ಸೋಮಣ್ಣ, ಅವರೊಂದಿಗೆ ಉಪ ಚುನಾ ವಣೆ ಹಾಗೂ ಇತ್ತೀಚಿನ ವಿದ್ಯಮಾನಗಳ ಕುರಿತು ಕೆಲ ಹೊತ್ತು ಮಾತುಕತೆ ನಡೆಸಿ, ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅವರ ಆರೋಗ್ಯ…
ಮೈಸೂರಲ್ಲಿ ವ್ಯಾಪಕವಾಗುತ್ತಿದೆ ನಾಯಿಗಳ ಅಪಹರಣ, ಅಕ್ರಮ ಮಾರಾಟ
December 24, 2019ಮೈಸೂರು,ಡಿ.23-ಮೈಸೂರಲ್ಲಿ ಬಹು ಬೆಲೆ ಬಾಳುವ ಐಷಾರಾಮಿ ನಾಯಿಗಳ ಅಪಹರಣ ಹೆಚ್ಚಾಗುತ್ತಿದ್ದು, ನಮ್ಮ ನಾಯಿ ಕಳೆದಿದೆ, ಎಲ್ಲೂ ಕಾಣ್ತಿಲ್ಲ, ಎಲ್ಲಿ ಹೋಯ್ತೊ? ಎಂಬ ಪ್ರಶ್ನೆಗಳನ್ನು ಮಾಲೀಕರು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಕೇಳುತ್ತಿದ್ದಾರೆ. ಆದರೆ ಅದಕ್ಕೆ ಮಾಲೀ ಕರಿಗೆ ಸರಿಯಾದ, ಸಮಂಜಸವಾದ ಉತ್ತರ ದೊರಕುತ್ತಿಲ್ಲ. ಅಕ್ರಮ ಸಂತಾನೋತ್ಪತ್ತಿಗಾಗಿ ತಮ್ಮ ನಾಯಿಗಳನ್ನು ಕಳವು ಮಾಡಿರಬಹುದು ಎಂದು ಮಾಲೀಕರು ಆತಂಕಗೊಂಡಿದ್ದಾರೆ. ಇಂತಹ ಕೃತ್ಯಗಳು ಮೈಸೂರು, ಕೊಡಗು, ಬೆಂಗಳೂರು ಮತ್ತು ಊಟಿಗಳಲ್ಲಿ ಹೆಚ್ಚಾಗುತ್ತಿವೆ. ಅಕ್ರಮ ಸಂತಾನೋತ್ಪತ್ತಿಗಾಗಿ ಪೆಡಿಗ್ರೀ ನಾಯಿ ಗಳಿಗೆ ಬೇಡಿಕೆ ಹೆಚ್ಚಾಗಿದೆ….
ಸೌಕರ್ಯ ನೀಡಿದರೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಫಲಿತಾಂಶ ಕುಸಿತ
December 24, 2019ಮೈಸೂರು,ಡಿ.23(ಎಂಟಿವೈ)- ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದರೂ ಫಲಿತಾಂಶದ ಪ್ರಮಾಣ ಕುಸಿಯುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯ ಬಳಸಿಕೊಂಡು ಉತ್ತಮ ಫಲಿ ತಾಂಶ ನೀಡಬೇಕು. ಇದಕ್ಕೆ ಬೋಧಕ ವರ್ಗದ ಶ್ರಮ ಅಗತ್ಯ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಒಂಟಿಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿ ಉದ್ಘಾಟನೆ ಹಾಗೂ ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಬೇಕಾದ ಸೌಲಭ್ಯ ಒದಗಿಸಲು ಸರ್ಕಾರ ವಿವಿಧ ಯೋಜನೆ ಗಳನ್ನು…
ಕೊಡಗು ಮಾಡೆಲ್ ಸ್ಕೂಲ್‍ನಲ್ಲಿ ವಿಜ್ಞಾನ, ಕಲಾ ಪ್ರದರ್ಶನ
December 24, 2019ಮೈಸೂರು, ಡಿ.23- ಮೈಸೂರಿನ ವಿದ್ಯಾ ಶಂಕರ ಬಡಾವಣೆಯಲ್ಲಿರುವ ಕೊಡಗು ಮಾಡೆಲ್ ಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ಮತ್ತು ಕಲಾ ಪ್ರದರ್ಶನವನ್ನು ಏರ್ಪಡಿ ಸಲಾಗಿತ್ತು. ಆಲನಹಳ್ಳಿಯ ಕ್ಲಸ್ಟರ್ ಮುಖ್ಯಸ್ಥ ಮಹದೇವಸ್ವಾಮಿ ದೀಪ ಬೆಳಗಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕೊಡಗು ವಿದ್ಯಾಸಂಸ್ಥೆಯ ಶೈಕ್ಷಣಿಕ ಕಾರ್ಯಕಾರಿ ಮಂಡಳಿಯ ಸದಸ್ಯೆ ಶ್ರೀಮತಿ ನೈನಾ ಅಚ್ಚಪ್ಪ, ಶ್ರೀಮತಿ ರ್ಯಾಲಿ ಗಣಪತಿ ಮತ್ತು ವಿನು ಪೂವಯ್ಯ, ಶ್ರೀ ಕಾವೇರಿ ಕೊಡವ ಅಸೋಸಿಯೇಷನ್‍ನ ಕಾರ್ಯಕಾರಿ ಮಂಡಳಿಯ ಸದಸ್ಯರು ಈ ವೇಳೆ ಹಾಜರಿದ್ದು, ಕಲೆ ಮತ್ತು ಕ್ರೀಡಾ ಕೊಠಡಿಗಳನ್ನು…
ಪ್ಯಾರಾ ಮೆಡಿಕಲ್ ಸೇವೆ ವೈದ್ಯರ ಸೇವೆಗೆ ಸಮ
December 24, 2019ಮೈಸೂರು,ಡಿ.23- ಪ್ಯಾರಾ ಮೆಡಿಕಲ್ ವೈದ್ಯಕೀಯ ಸೇವೆ ವೈದ್ಯರಿಗೆ ಸರಿಸಮ ವಾದ ಸೇವೆಯಾಗಿದ್ದು, ವೈದ್ಯರ ಚಿಕಿತ್ಸೆ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಸಲಹೆಯನ್ನು ಅವಲಂಬಿಸಿರುವುದರಿಂದ ಇವರುಗಳ ಸೇವೆ ಬಹು ಉತ್ಕøಷ್ಟ ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಇಂದಿಲ್ಲಿ ಅಭಿಪ್ರಾಯಪಟ್ಟರು. ನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ದಾಸ್ತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಸೋಮವಾರ ಏರ್ಪ ಡಿಸಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ಯಾರಾ…
ಮೈಸೂರಲ್ಲಿ ಜೆಡಿಎಸ್ ಕಾರ್ಯಕರ್ತರ ಧರಣಿ
December 24, 2019ಮೈಸೂರು,ಡಿ.23(ಆರ್‍ಕೆ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಮಾಜಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮೈಸೂರಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸೂಕ್ಷ್ಮ ವಿಚಾರಗಳ ಸಂಬಂಧ ದೇಶದಾದ್ಯಂತ ಹೊಸ ಕಾಯ್ದೆ ರೂಪಿಸುವಾಗ ಅಥವಾ ಇರುವ ಕಾಯ್ದೆಯನ್ನು ತಿದ್ದುಪಡಿ ಮಾಡುವಾಗ ಮೊದಲು ಜನರಿಗೆ ಅದರ ಅನುಕೂಲ-ಅನಾನುಕೂಲ ಉಂಟಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸಿ ನಾಗರಿಕರ ವಿಶ್ವಾಸ…
ಮತ್ತೊಂದು ಬ್ಯಾಂಕ್ ಮುಷ್ಕರಕ್ಕೆ ಸಿದ್ಧರಾಗಿ!
December 24, 2019ನವದೆಹಲಿ: ಪ್ರಮುಖ ಬೆಳ ವಣಿಗೆ ಯಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಒಕ್ಕೂಟಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿವೆ. ಹೊಸ ವರ್ಷಾರಂಭದಲ್ಲೇ ಬ್ಯಾಂಕ್ ಗ್ರಾಹಕರಿಗೆ ಮುಷ್ಕರದ ಬಿಸಿ ಮುಟ್ಟಲಿದ್ದು, 2020ರ ಜ.8ರಂದು ಕೇಂದ್ರ ಕಾರ್ಮಿಕ ಸಂಘಗಳು ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಮತ್ತು ಉದ್ಯೋಗ ಭದ್ರತೆ, ಉದ್ಯೋಗ ಸೃಷ್ಟಿ, ಕಾರ್ಮಿಕರ ಮೇಲೆ ಪ್ರತಿ ಕೂಲ ತಿದ್ದುಪಡಿ ಕಾನೂನುಗಳು ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟು 10 ಕೇಂದ್ರ…










