ಮೈಸೂರು,ಡಿ.23(ಆರ್‍ಕೆಬಿ)- `ನಮ್ಮೂರು-ನಮ್ಮ ಕೆರೆ’ ಹೆಸರಿನಲ್ಲಿ ಕೆರೆ ಗಳನ್ನು ಪುನರುಜ್ಜೀವನಗೊಳಿಸುವ ಮಹತ್ವದ ಕಾರ್ಯದ ಜೊತೆಗೆ ಊರಿನ ಜನರಿಗೆ ಕೆರೆಯ ಮಹತ್ವವನ್ನು ತಿಳಿಸಿಕೊಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೈಗೊಂಡಿರುವ ಕಾರ್ಯ ವನ್ನು ಕಾಗಿನೆಲೆ ಕನಕ ಗುರುಪೀಠ ಮಹಾ ಸಂಸ್ಥಾನ ಮಠದ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿ ಶ್ಲಾಘಿಸಿದರು. ಮೈಸೂರಿನ ಹಿನಕಲ್ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ನನ್ನೇಶ್ವರ ದೇವಸ್ಥಾನದ ದೇವರ ಕೆರೆ ಅಭಿವೃದ್ಧಿ ಪಡಿಸಿ, ಕೆರೆ ಹಸ್ತಾಂತರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿ ದರು. ಕೆರೆಗಳನ್ನು…
ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟ ಕ್ರಿಸ್‍ಮಸ್
December 24, 2019ಮೈಸೂರು,ಡಿ.23(ಆರ್‍ಕೆಬಿ)- ಶಾಂತಿ ಮತ್ತು ಸಾಮರಸ್ಯದ ಸಂದೇಶದ ಹಬ್ಬವಾದ ಕ್ರಿಸ್‍ಮಸ್ ಇಂದು ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟಿದ್ದು, ಈ ಹಬ್ಬ ಕೇವಲ ಕ್ರೈಸ್ತ ಸಮುದಾಯ ಒಂದೇ ಆಚರಿಸುವಂತದ್ದಲ್ಲ. ಎಲ್ಲರೂ ಆಚರಿಸು ವಂಥದ್ದು ಎಂದು ಮೈಸೂರು ಬಿಷಪ್ ಡಾ.ಕೆ.ಎ.ವಿಲಿಯಂ ಇಂದಿಲ್ಲಿ ತಿಳಿಸಿದರು. ಮೈಸೂರಿನ ಫೈವ್‍ಲೈಟ್ ಬಳಿಯಿ ರುವ ಬಿಷಪ್ ಅವರ ಮನೆಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.25 ದೇವರು ಶಾಂತಿ ಸಮಾಧಾನದ ದೂತರನ್ನಾಗಿ ಯೇಸುವನ್ನು ಕಳುಹಿಸಿದ್ದು, ಯೇಸು ದೇವರ ಪುತ್ರ. 2020 ಎಲ್ಲ ರಿಗೂ ಸುಂದರ ವರ್ಷವಾಗಿದೆ. ಎಲ್ಲರಿಗೂ ಶಾಂತಿ,…
ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಕೃಷಿ ಕೈಗೊಳ್ಳುವುದು ಸೂಕ್ತ
December 24, 2019ಮೈಸೂರು,ಡಿ.23(ಆರ್‍ಕೆಬಿ)- ಇಂದಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಹೊರತು ಪಡಿಸಿ ಕೃಷಿ ಮಾಡುವುದು ಕಷ್ಟವಿದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೃಷಿ ಕೈಗೊಳ್ಳುವುದು ಸರಿಯಾದ ಕ್ರಮ ಎಂದು ಕೃಷಿ ವಿಜ್ಞಾನಿ ಡಾ.ಅರುಣ್ ಬಳ ಮಟ್ಟಿ ಇಂದಿಲ್ಲಿ ರೈತರಿಗೆ ಸಲಹೆ ನೀಡಿದರು. ಮೈಸೂರಿನ ಕರ್ಜನ್ ಪಾರ್ಕ್‍ನ ಡಾ.ಎಂ.ಹೆಚ್.ಮರೀಗೌಡ ಸಭಾಂಗಣ ದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಮೈಸೂರು ಜಿಲ್ಲಾ ಕೃಷಿಕ ಸಮಾಜ, ಮೈಸೂರು ಕೃಷಿ ತಂತ್ರಜ್ಞರ ಸಂಸ್ಥೆ, ಸುತ್ತೂರು ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ನಿರ್ವಹನಾ ಸಂಸ್ಥೆ (ಆತ್ಮಾ) ಜಂಟಿಯಾಗಿ…
ವೀರಶೈವ ಅನಾಥಾಲಯದ ಶತಮಾನೋತ್ಸವ ಸಮಾರಂಭ
December 24, 2019ಮೈಸೂರು,ಡಿ.23(ಪಿಎಂ)- ಕರಿಯಣ್ಣರ ಪುತ್ರಿ ವೀರಮ್ಮನವರು ವೀರಶೈವ ಸಮಾ ಜದ ಬಡ ವಿದ್ಯಾರ್ಥಿಗಳು ಊಟ-ವಸತಿ ಹಾಗೂ ಶಿಕ್ಷಣಕ್ಕಾಗಿ ಅಲೆದಾಡುತ್ತಿದ್ದ ಪರಿ ಸ್ಥಿತಿ ಮನಗಂಡು 20ನೇ ಶತಮಾನದಲ್ಲಿ ಸ್ಥಾಪಿಸಿದ ಮೈಸೂರಿನ ವೀರಶೈವ ಅನಾ ಥಾಲಯ ಇಂದು ಸಾವಿರಾರು ಮಂದಿಗೆ ವಿದ್ಯೆ ನೀಡಿ ಜೀವನ ರೂಪಿಸಿಕೊಳ್ಳಲು ನೆರವಾಗಿದೆ ಎಂದು ನಿವೃತ್ತ ಡಿಜಿಪಿ ಎಲ್.ರೇವಣಸಿದ್ದಯ್ಯ ಸ್ಮರಿಸಿದರು. ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ವೀರಶೈವ ಅನಾಥಾಲಯ ಟ್ರಸ್ಟ್ ವತಿಯಿಂದ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ…
ಮೈಸೂರಿನ ಆರ್.ಕೆ.ನಾರಾಯಣರ ‘ಮಾಲ್ಗುಡಿ’ ಮನೆಗೆ ಸಾಹಿತ್ಯ ಪ್ರಿಯರ ಪಯಣ ಆರಂಭದಿಂದ ಈವರೆಗೆ 20,000 ಆರ್‍ಕೆಎನ್ ಅಭಿಮಾನಿಗಳ ಭೇಟಿ
December 24, 2019ಮೈಸೂರು,ಡಿ.23-ಭಾರತದ ಅತ್ಯಂತ ಜನಪ್ರಿಯ ಆಂಗ್ಲ ಲೇಖಕ, ಕಾದಂಬರಿಕಾರರಾದ ಆರ್.ಕೆ.ನಾರಾ ಯಣ್ (ಆರ್‍ಕೆಎನ್) ಅವರ ಮೈಸೂರು ನಿವಾಸಕ್ಕೆ ಸಾಹಿತ್ಯ ಯಾತ್ರಿಗಳ ದಂಡೇ ಭೇಟಿ ನೀಡುತ್ತಿದೆ. 2016ರ ಜುಲೈ 24ರಿಂದೀಚೆಗೆ ಈವರೆಗೆ ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿರುವ ಆರ್.ಕೆ. ನಾರಾಯಣ್ ಅವರ ಮನೆಗೆ ಒಟ್ಟು 20,000 ಮಂದಿ ಅಭಿಮಾನಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿ ಗಳು ಭೇಟಿ ನೀಡಿ ಆರ್.ಕೆ.ನಾರಾಯಣ್ ಸ್ಮಾರಕ ಮ್ಯೂಸಿಯಂ ಅನ್ನು ವೀಕ್ಷಿಸಿರುವುದು ದಾಖಲಾಗಿದೆ. ಇಂಗ್ಲಿಷ್ ಅಧ್ಯಾಪಕರು, ಸಂಶೋಧಕರು, ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಪ್ರವಾಸಿಗರೂ ಸಹ ಇಲ್ಲಿಗೆ…
ಕಠಿಣ ಪರಿಶ್ರಮ, ಶ್ರದ್ಧೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯ ಪರೀಕ್ಷಾರ್ಥಿಗಳಿಗೆ ಶಾಸಕ ರಾಮದಾಸ್ ಕಿವಿಮಾತು
December 24, 2019ಮೈಸೂರು,ಡಿ.23(ಎಂಟಿವೈ)-ವಿವಿಧ ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ಎದುರಿಸಲು ಬಯಸುವ ಅಭ್ಯರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಸತತ ಪ್ರಯತ್ನಿಸುವ ಮನೋಭಾವದಿಂದ ಅಧ್ಯ ಯನದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿ ಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಏನನ್ನು ಕಲಿಯಲು ಬಯಸು ತ್ತೀವೋ, ಅದನ್ನು ಸರಿಯಾದ ದಿಕ್ಕಿನಲ್ಲಿ…
ಗ್ರಾಮೀಣ ಜನತೆಯ ಅಗತ್ಯತೆ ಪೂರೈಸಲು ಚಿಂತಿಸಬೇಕಿದೆ
December 24, 2019ಮೈಸೂರು,ಡಿ.23(ಪಿಎಂ)- ಗ್ರಾಮೀಣ ಪ್ರದೇಶದ ಜನತೆಯ ನೈಜ ಅಗತ್ಯತೆಗಳನ್ನು ಪೂರೈಸುವ ಸಂಬಂಧ ಅಧಿಕಾರೇತರ ಹಾಗೂ ರಾಜಕೀಯೇತರ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲು ಅವ ಲೋಕಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಂಸ್ಥೆ (ಎಸ್‍ಐಆರ್‍ಡಿ) ಸಭಾಂ ಗಣದಲ್ಲಿ ವಿವಿಧ ಯೋಜನೆಗಳ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಂಸ್ಥೆಯ ಅಧಿಕಾರಿಗಳೊಂದಿಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಜನತೆಯ ನೈಜ ಅಗತ್ಯತೆ…
ರೈತರ ದಿನಾಚರಣೆ ಅಂಗವಾಗಿ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ
December 24, 2019ಮೈಸೂರು, ಡಿ.23(ಆರ್‍ಕೆಬಿ)- ರೈತರ ದಿನಾಚರಣೆ ಅಂಗವಾಗಿ ಮೈಸೂರಿನ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾ ನವನದಲ್ಲಿ ರೈತರು ಮೌನಾಚರಣೆ ಮೂಲಕ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿ ದರು. ಕಬ್ಬು ಬೆಳೆಗಾರರ ಸಂಘದ ಆಶ್ರಯ ದಲ್ಲಿ ಸಭೆ ಸೇರಿದ ಮೈಸೂರು, ಚಾಮ ರಾಜನಗರ ಜಿಲ್ಲೆಯ ರೈತರು, ಹುತಾತ್ಮ ಅನ್ನದಾತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ನಡೆದ ಸಾಲಮನ್ನಾ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸರ್ಕಾರ ಪ್ರತಿ ವರ್ಷ…
ನೆರೆ ರಾಷ್ಟ್ರಗಳ ಹಿಂದೂಗಳಿಗೆ ಆಸರೆಯಾಗಲು ಅಂದೇ ಗಾಂಧಿ ಹೇಳಿದ್ದರು
December 24, 2019`ಸಿಎಎ’, `ಎನ್‍ಆರ್‍ಸಿ’ ಸಮರ್ಥಿಸಿಕೊಂಡ ಗೋ.ಮಧುಸೂದನ್ ಮೈಸೂರು, ಡಿ.23(ಪಿಎಂ)- ನೆರೆ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಭಾರತಕ್ಕೆ ಬಂದರೆ ಅವರಿಗೆ ಆಸರೆಯಾಗಲು ಭಾರತ ಸರ್ಕಾರ ಪ್ರಥಮ ಆದ್ಯತೆ ಕೊಡಬೇಕು ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದಾರೆ ಎಂದು ಹೇಳುವ ಮೂಲಕ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಕೇಂದ್ರ ಸರ್ಕಾರದ `ಸಿಎಎ’ ಹಾಗೂ `ಎನ್‍ಆರ್‍ಸಿ’ಯನ್ನು ಸಮರ್ಥಿಸಿಕೊಂಡರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಇಬ್ಭಾಗ ವಾಗಿದ್ದು ಧರ್ಮದ ಆಧಾರದ ಮೇಲೆಯೇ. ಎಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದರೋ ಅಂತಹ…
ಹಾಸನ ರಾಮನಾಥಪುರ-ಪಿರಿಯಾಪಟ್ಟಣ ರಸ್ತೆ ಬಳಕೆ: ಶುಲ್ಕ ವಸೂಲಿ
December 24, 2019ಮೈಸೂರು, ಡಿ.23- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ರಾಜ್ಯ ಹೆದ್ದಾರಿ-21ರ ಹಾಸನ ರಾಮನಾಥಪುರ-ಪಿರಿಯಾಪಟ್ಟಣ ರಸ್ತೆಯಲ್ಲಿ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಕೆ.ಆರ್.ಸಿ.ಎಲ್ ಅನುಮತಿ ನೀಡಿದೆ. ಹಾಸನ ತಾಲೂಕು, ಕಟ್ಟಾಯ ಹೋಬಳಿ ಬ್ಯಾಡರಹಳ್ಳಿ, ಅರಕಲಗೂಡು, ದೊಡ್ಡಮಗ್ಗೆ, ನಿಲುವಾಗಿಲು, ಪಿರಿಯಾ ಪಟ್ಟಣ ತಾಲ್ಲೂಕು, ಬೆಟ್ಟದಪುರ ಹೋಬಳಿ ಕೂರ್ಗಲ್ ಗ್ರಾಮದ ಬಳಿ ನಿರ್ಮಿಸಿರುವ ಟೋಲ್ ಕೇಂದ್ರಗಳಲ್ಲಿ ಬಳಕೆದಾರರು ಶುಲ್ಕ ಸಂಗ್ರಹಿಸಲು ವಿಜಯ ರಾಮೇಗೌಡ ಅವರಿಗೆ ಗುತ್ತಿಗೆ ನೀಡಿದ್ದು, ಡಿ.27ರಿಂದ ಈ ರಸ್ತೆಯ ಭಾಗದಲ್ಲಿ ಸಂಚರಿಸುವ ವಿವಿಧ ವಾಹನಗಳಿಂದ ನಿಗದಿತ ದರಗಳ…










