ಕೆರೆ ಪುನರುಜ್ಜೀವನಗೊಳಿಸುವುದು ಜನಹಿತ ಕಾರ್ಯ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಕಾಗಿನೆಲೆ ಶ್ರೀ ಶಿವಾನಂದಪುರಿ ಸ್ವಾಮೀಜಿ ಶ್ಲಾಘನೆ
ಮೈಸೂರು

ಕೆರೆ ಪುನರುಜ್ಜೀವನಗೊಳಿಸುವುದು ಜನಹಿತ ಕಾರ್ಯ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಕಾಗಿನೆಲೆ ಶ್ರೀ ಶಿವಾನಂದಪುರಿ ಸ್ವಾಮೀಜಿ ಶ್ಲಾಘನೆ

December 24, 2019

ಮೈಸೂರು,ಡಿ.23(ಆರ್‍ಕೆಬಿ)- `ನಮ್ಮೂರು-ನಮ್ಮ ಕೆರೆ’ ಹೆಸರಿನಲ್ಲಿ ಕೆರೆ ಗಳನ್ನು ಪುನರುಜ್ಜೀವನಗೊಳಿಸುವ ಮಹತ್ವದ ಕಾರ್ಯದ ಜೊತೆಗೆ ಊರಿನ ಜನರಿಗೆ ಕೆರೆಯ ಮಹತ್ವವನ್ನು ತಿಳಿಸಿಕೊಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೈಗೊಂಡಿರುವ ಕಾರ್ಯ ವನ್ನು ಕಾಗಿನೆಲೆ ಕನಕ ಗುರುಪೀಠ ಮಹಾ ಸಂಸ್ಥಾನ ಮಠದ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿ ಶ್ಲಾಘಿಸಿದರು.

ಮೈಸೂರಿನ ಹಿನಕಲ್ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ನನ್ನೇಶ್ವರ ದೇವಸ್ಥಾನದ ದೇವರ ಕೆರೆ ಅಭಿವೃದ್ಧಿ ಪಡಿಸಿ, ಕೆರೆ ಹಸ್ತಾಂತರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿ ದರು. ಕೆರೆಗಳನ್ನು ಅಭಿವೃದ್ಧಿ ಪಡಿಸುವುದ ರಿಂದ ಈ ಭಾಗದ ಜಲಪೂರಣವಾಗಿ ಈ ಭಾಗದ ಜನರಿಗೆ ನೀರಿನ ಬಳಕೆಗೆ ಅನುಕೂಲವಾಗಲಿದೆ. ಇಂತಹ ಕಾರ್ಯ ಕೈಗೊಂಡಿರುವ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕಾಳಜಿ ಅರ್ಥಪೂರ್ಣವಾದದ್ದು ಎಂದರು.

ಮಾಜಿ ಸಚಿವ ಸಿ.ಹೆಚ್.ವಿಜಯ ಶಂಕರ್ ಮಾತನಾಡಿ, ಸಣ್ಣ ನೀರಾವರಿ ಇಲಾಖೆ ಮಾಡಬೇಕಾದ ಕಾರ್ಯವನ್ನು ಧರ್ಮಸ್ಥಳ ಯೋಜನೆ ಮಾಡಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಇಂದು ಜಲ ಸಂರಕ್ಷಣೆ ಎಲ್ಲರ ಕರ್ತವ್ಯ. ನೀರಿನ ಸಂರಕ್ಷಣೆಯಿಂದ ಮುಂದಿನ ಪೀಳಿಗೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಜನರಲ್ಲಿ ವಿಶ್ವಾಸ ಮೂಡಿ ಸುವ ಕಾರ್ಯವನ್ನು ಧರ್ಮಸ್ಥಳ ಯೋಜನೆ ಸಂಸ್ಥೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತ ನಾಡಿ, ಆರ್ಥಿಕ ಮತ್ತು ಸಾಮಾಜಿಕವಾಗಿ ಗ್ರಾಮೀಣ ಜನರನ್ನು ಸಬಲ ರನ್ನಾಗಿ ಸುವುದರ ಜೊತೆಗೆ ನಾಡಿನ ಹತ್ತಾರು ಕೆರೆಗಳನ್ನು ಅಭಿವೃದ್ಧಿಪಡಿಸಿ, ನೀರಿನ ಸಂರಕ್ಷಣೆ ಕಾರ್ಯ ಕೈಗೊಂಡಿರುವುದು ಉತ್ತಮ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಹೆಚ್.ಪಿ.ರಾಕೇಶ್ ಪಾಪಣ್ಣ, ಹಿರಿಯ ಮುಖಂಡ ಬಸವೇಗೌಡ, ಜಿಪಂ ಮಾಜಿ ಸದಸ್ಯೆ ನಳಿನಿ ಅರಸ್, ತಾಪಂ ಸದಸ್ಯೆ ಚೈತ್ರಾ ಚಂದ್ರಶೇಖರ್, ಗುರುಸ್ವಾಮಿ, ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಭೈರನಾಯಕ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕರಿಯಪ್ಪ, ಹೊನ್ನಪ್ಪ, ಸಂಸ್ಥೆಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಇನ್ನಿತರರು ಉಪಸ್ಥಿತರಿದ್ದರು.

Translate »