ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟ ಕ್ರಿಸ್‍ಮಸ್
ಮೈಸೂರು

ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟ ಕ್ರಿಸ್‍ಮಸ್

December 24, 2019

ಮೈಸೂರು,ಡಿ.23(ಆರ್‍ಕೆಬಿ)- ಶಾಂತಿ ಮತ್ತು ಸಾಮರಸ್ಯದ ಸಂದೇಶದ ಹಬ್ಬವಾದ ಕ್ರಿಸ್‍ಮಸ್ ಇಂದು ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟಿದ್ದು, ಈ ಹಬ್ಬ ಕೇವಲ ಕ್ರೈಸ್ತ ಸಮುದಾಯ ಒಂದೇ ಆಚರಿಸುವಂತದ್ದಲ್ಲ. ಎಲ್ಲರೂ ಆಚರಿಸು ವಂಥದ್ದು ಎಂದು ಮೈಸೂರು ಬಿಷಪ್ ಡಾ.ಕೆ.ಎ.ವಿಲಿಯಂ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಫೈವ್‍ಲೈಟ್ ಬಳಿಯಿ ರುವ ಬಿಷಪ್ ಅವರ ಮನೆಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.25 ದೇವರು ಶಾಂತಿ ಸಮಾಧಾನದ ದೂತರನ್ನಾಗಿ ಯೇಸುವನ್ನು ಕಳುಹಿಸಿದ್ದು, ಯೇಸು ದೇವರ ಪುತ್ರ. 2020 ಎಲ್ಲ ರಿಗೂ ಸುಂದರ ವರ್ಷವಾಗಿದೆ. ಎಲ್ಲರಿಗೂ ಶಾಂತಿ, ಸಮಾಧಾನ ಸಿಗಲಿ, ಎಲ್ಲರ ಒಳ್ಳೆಯ ಆಶಯಗಳು ಈಡೇರಲಿ ಎಂದು ಕ್ರಿಸ್ ಮಸ್ ಹಬ್ಬದ ಶುಭಾಶಯ ತಿಳಿಸಿದರು.

ಇಂದು ಜಗತ್ತಿನಲ್ಲಿ ಹಿಂಸೆ, ಅಶಾಂತಿ ತುಂಬಿದ್ದು, ಶಾಂತಿಗಾಗಿ ಹಾಹಾಕಾರ ವೆದ್ದಿದೆ. ಪರಸ್ಪರ ಗೌರವ, ಹಕ್ಕುಗಳನ್ನು ಪರಿಗಣಿಸಿದಾಗ ನಿಜವಾದ ಸಹೋದರತೆ ಬೆಳೆಯುತ್ತದೆ. ಮಾನವೀಯ ಮೌಲ್ಯಗಳಿಗೆ ಕರೆ ನೀಡುವುದೇ ಕ್ರಿಸ್ಮಸ್ ನೀಡುವ ಸಂದೇಶ. ನಾವು ಮೊದಲು ಮಾನವರಾಗಬೇಕಿದೆ ಎಂದರು.

ನಾವೆಲ್ಲರೂ ಸ್ವಾರ್ಥವೆಂಬ ಕತ್ತಲನ್ನು ತೊರೆಯೋಣ. ಪ್ರತಿಯೊಬ್ಬ ಮಾನವನ ಲ್ಲಿಯೂ ದೇವರ ರೂಪವನ್ನು ಕಾಣೋಣ. ಈ ಕ್ರಿಸ್ತ ಜಯಂತಿಯ ಸರ್ವರಿಗೂ ಶಾಂತಿ ಸಹೋದರತೆಯ ಹೊಸ ಭರವಸೆ ನೀಡಲಿ ಎಂದು ಹಾರೈಸಿದರು.

ಸುದ್ದಿಗೋಷ್ಠಿಯಲ್ಲಿ ಫಾ.ಜೇಮ್ಸ್ ಡೊಮಿನಿಕ್, ಫಾ.ಸ್ಟ್ಯಾಲಿನ್ ಅಲ್ಮೆಡಾ, ರಾಯಪ್ಪ, ವಿಜಯಕುಮಾರ್, ಕಾರ್ಯ ದರ್ಶಿ ಅವಿನಾಶ್, ಪಿಆರ್‍ಓ ರೆ.ಫಾ.ಲೆಸ್ಲಿ ಮೊರಾಸ್ ಉಪಸ್ಥಿತರಿದ್ದರು.

Translate »