ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಕೃಷಿ ಕೈಗೊಳ್ಳುವುದು ಸೂಕ್ತ
ಮೈಸೂರು

ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಕೃಷಿ ಕೈಗೊಳ್ಳುವುದು ಸೂಕ್ತ

December 24, 2019

ಮೈಸೂರು,ಡಿ.23(ಆರ್‍ಕೆಬಿ)- ಇಂದಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಹೊರತು ಪಡಿಸಿ ಕೃಷಿ ಮಾಡುವುದು ಕಷ್ಟವಿದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೃಷಿ ಕೈಗೊಳ್ಳುವುದು ಸರಿಯಾದ ಕ್ರಮ ಎಂದು ಕೃಷಿ ವಿಜ್ಞಾನಿ ಡಾ.ಅರುಣ್ ಬಳ ಮಟ್ಟಿ ಇಂದಿಲ್ಲಿ ರೈತರಿಗೆ ಸಲಹೆ ನೀಡಿದರು.

ಮೈಸೂರಿನ ಕರ್ಜನ್ ಪಾರ್ಕ್‍ನ ಡಾ.ಎಂ.ಹೆಚ್.ಮರೀಗೌಡ ಸಭಾಂಗಣ ದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಮೈಸೂರು ಜಿಲ್ಲಾ ಕೃಷಿಕ ಸಮಾಜ, ಮೈಸೂರು ಕೃಷಿ ತಂತ್ರಜ್ಞರ ಸಂಸ್ಥೆ, ಸುತ್ತೂರು ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ನಿರ್ವಹನಾ ಸಂಸ್ಥೆ (ಆತ್ಮಾ) ಜಂಟಿಯಾಗಿ ಆಯೋಜಿಸಿದ್ದ ರೈತರ ದಿನಾಚರಣೆ ಹಾಗೂ ಕೃಷಿ ಪರಿಕರಗಳ ಗುಣ ನಿಯಂತ್ರಣ ಕುರಿತ ತರಬೇತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಭೂಮಿಯ ಸಾಮಥ್ರ್ಯಕ್ಕಿಂತ ಹೆಚ್ಚು ನಿರೀಕ್ಷೆ ಮಾಡುವುದು ಸರಿಯಲ್ಲ. ಕೃಷಿ ಕರು ಆರ್ಥಿಕ, ವೈಜ್ಞಾನಿಕ ನಿರೀಕ್ಷೆಗ ಳೊಂದಿಗೆ ಬೆಳೆಗಳನ್ನು ಬೆಳೆಯುವಂತಾಗ ಬೇಕು. ಬೀಜ, ಗೊಬ್ಬರ, ಸಾರ ಎಲ್ಲವೂ ಹೊರಗಡೆಯಿಂದ ಬರಬೇಕು. ರೈತರಿಗೆ ಸರಿಯಾದ ಸಮಯದಲ್ಲಿ ಬೀಜಗಳ ಪೂರೈಕೆಯಾಗುತ್ತಿವೆಯೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಬೀಜಗಳು ಸರಿ ಯಾದ ಸಮಯಕ್ಕೆ ಬರದಿದ್ದರೆ ಅದರಿಂದ ಇಳುವರಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.

ತರಬೇತಿಗೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ, ಅತಿವೃಷ್ಠಿ, ಅನಾವೃಷ್ಟಿ, ಬೆಳೆ ನಷ್ಟ ಇನ್ನಿತರ ಸಂಕಷ್ಟಗಳನ್ನು ಎದುರಿಸುತ್ತಿರುವ ರೈತರು ಎದೆಗುಂದಬಾರದು. ಆತ್ಮಸ್ಥೈರ್ಯ ಬೆಳೆಸಿಕೊಳ್ಳ ಬೇಕು, ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಮಾತ ನಾಡಿ, ರೈತರ ದಿನಾಚರಣೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಯುವಂತಾಗಬೇಕು. ಸಂಕಷ್ಟ ದಲ್ಲಿರುವ ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು. ಎಂತಹ ಸಂದರ್ಭ ಬಂದರೂ ರೈತರು ಅದನ್ನು ಬಗೆಹರಿಸಿಕೊಳ್ಳಲು ಅಗತ್ಯ ಸಲಹೆ, ಸಹಕಾರ ಪಡೆಯಬೇಕೇ ಹೊರತು ಆತ್ಮಹತ್ಯೆ ಯಂತಹ ಕ್ರಮಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.

ಮೈಸೂರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಎಂ.ಎ.ಗೌರಮ್ಮ ಸೋಮಶೇಖರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವಕು ಮಾರ್, ಉಪ ತೋಟಗಾರಿಕಾ ನಿರ್ದೇ ಶಕ ಕೆ.ರುದ್ರೇಶ್, ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಂತೇಶಪ್ಪ, ಮಂಡ್ಯದ ರಸಗೊಬ್ಬರ ಗುಣ ನಿಯಂತ್ರಣ ಪ್ರಯೋ ಗಾಲಯದ ಉಪ ಕೃಷಿ ನಿರ್ದೇಶಕ ರಾಮಕೃಷ್ಣ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »