ಗ್ರಾಮೀಣ ಜನತೆಯ ಅಗತ್ಯತೆ ಪೂರೈಸಲು ಚಿಂತಿಸಬೇಕಿದೆ
ಮೈಸೂರು

ಗ್ರಾಮೀಣ ಜನತೆಯ ಅಗತ್ಯತೆ ಪೂರೈಸಲು ಚಿಂತಿಸಬೇಕಿದೆ

December 24, 2019

ಮೈಸೂರು,ಡಿ.23(ಪಿಎಂ)- ಗ್ರಾಮೀಣ ಪ್ರದೇಶದ ಜನತೆಯ ನೈಜ ಅಗತ್ಯತೆಗಳನ್ನು ಪೂರೈಸುವ ಸಂಬಂಧ ಅಧಿಕಾರೇತರ ಹಾಗೂ ರಾಜಕೀಯೇತರ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲು ಅವ ಲೋಕಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಂಸ್ಥೆ (ಎಸ್‍ಐಆರ್‍ಡಿ) ಸಭಾಂ ಗಣದಲ್ಲಿ ವಿವಿಧ ಯೋಜನೆಗಳ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಂಸ್ಥೆಯ ಅಧಿಕಾರಿಗಳೊಂದಿಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಜನತೆಯ ನೈಜ ಅಗತ್ಯತೆ ಅರಿತು ಅದಕ್ಕೆ ಸೂಕ್ತವಾದ ಯೋಜನೆ ಗಳನ್ನು ರೂಪಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಸಮಸ್ಯೆ ಗಳ ನಿವಾರಣೆಗೆ ಹೆಚ್ಚು ಆದ್ಯತೆ ನೀಡ ಬೇಕು. ಕೇವಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ದೇಶನದಂತೆ ಸೌಲಭ್ಯಗಳನ್ನು ಕಲ್ಪಿಸಿದರಷ್ಟೇ ಸಾಲದು. ಇದರೊಂದಿಗೆ ಹಳ್ಳಿ ಜನತೆಯ ನಿಜವಾದ ಅವಶ್ಯಕತೆಗಳ ಬಗ್ಗೆ ಅಧ್ಯಯನ ನಡೆಸಿ ಅದರಂತೆ ಕಾರ್ಯಕ್ರಮ ರೂಪಿಸುವುದು ಸೂಕ್ತವೆನಿಸುತ್ತದೆ ಎಂದರು.
ಈ ನಿಟ್ಟಿನಲ್ಲಿ ಅಧಿಕಾರೇತರ ಹಾಗೂ ರಾಜಕೀಯೇತರ ಸದಸ್ಯರನ್ನು ಒಳ ಗೊಂಡ ಸಮಿತಿ ರಚಿಸಿ, ಅದರ ಮೂಲಕ ಅಧ್ಯಯನ ನಡೆಸಲು ಮುಂದಾಗುವುದು ಪರಿಣಾಮಕಾರಿಯಾಗಬಹುದು. ನೈಜ ವಾಗಿ ಅಗತ್ಯವಿರುವ ಸೌಲಭ್ಯ ಪೂರೈಸಲು ಈ ಸಮಿತಿ ಶಿಫಾರಸ್ಸು ಪರಿಗಣಿಸಿ ಸರ್ಕಾರ ಮುಂದುವರೆಯಲು ಅನುಕೂಲವಾಗು ತ್ತದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಮಾತನಾಡಿದ ಎಸ್‍ಐ ಆರ್‍ಡಿ ಉಪನಿರ್ದೇಶಕ (ತರಬೇತಿ) ಕೆ.ಎಸ್.ಮನೋಜ್‍ಕುಮಾರ್, ದೇಶದ ಯಾವುದೇ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದಿದೆ. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರೆ ಇನ್ನಷ್ಟು ಪ್ರಗತಿ ಕಾಣಲು ಸಾಧ್ಯವಿದೆ ಎಂದರು.

ಎಸ್‍ಐಆರ್‍ಡಿ ಅಧ್ಯಾಪಕ ಡಾ.ಜಿ. ಎಸ್.ಗಣೇಶ್ ಪ್ರಸಾದ್ ಮಾತನಾಡಿ, ಕರ್ನಾ ಟಕದ ಆಡಳಿತ ಮಾದರಿಯಲ್ಲಿ ಜನತೆ ಪಾತ್ರ ಕಡಿಮೆ ಇದ್ದು, ಅಧಿಕಾರಿಗಳ ಚಿಂತನೆ ಹೆಚ್ಚಿದೆ. ಜೊತೆಗೆ ನಮ್ಮಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಪ್ರಮುಖ ಪಾತ್ರ ನಿರ್ವ ಹಿಸಲಿದೆ. ಆದರೆ ತಮಿಳುನಾಡು ಹಾಗೂ ಕೇರಳದಲ್ಲಿ ಒಂದು ಜಿಲ್ಲೆಗೆ ಜಿಲ್ಲಾ ಕಲೆಕ್ಟರ್ ಆಡಳಿತದ ಎಲ್ಲಾ ಹಂತದಲ್ಲಿ ಪ್ರಧಾನ ಪಾತ್ರ ಹೊಂದಿರುತ್ತಾರೆ ಎಂದು ವಿವರಿಸಿ ದರು. ಎಸ್‍ಐಆರ್‍ಡಿ ಸಹಾಯಕ ನಿರ್ದೇ ಶಕ ಗಿರಿಧರ್, ಅಧ್ಯಾಪಕರಾದ ಟಿ.ಎಂ. ಅಬೂಬ್ಕರ್, ಸಿ.ವಿಜಯಕುಮಾರ್, ವೆಂಕ ಟೇಶ್ ಟಿ.ಪಾಟೀಲ್, ಎಸ್.ಹೆಚ್.ಪ್ರಕಾಶ್ ಮತ್ತಿತರರು ಹಾಜರಿದ್ದರು

Translate »