ಕಠಿಣ ಪರಿಶ್ರಮ, ಶ್ರದ್ಧೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯ  ಪರೀಕ್ಷಾರ್ಥಿಗಳಿಗೆ ಶಾಸಕ ರಾಮದಾಸ್ ಕಿವಿಮಾತು
ಮೈಸೂರು

ಕಠಿಣ ಪರಿಶ್ರಮ, ಶ್ರದ್ಧೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯ ಪರೀಕ್ಷಾರ್ಥಿಗಳಿಗೆ ಶಾಸಕ ರಾಮದಾಸ್ ಕಿವಿಮಾತು

December 24, 2019

ಮೈಸೂರು,ಡಿ.23(ಎಂಟಿವೈ)-ವಿವಿಧ ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ಎದುರಿಸಲು ಬಯಸುವ ಅಭ್ಯರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಸತತ ಪ್ರಯತ್ನಿಸುವ ಮನೋಭಾವದಿಂದ ಅಧ್ಯ ಯನದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿ ಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಏನನ್ನು ಕಲಿಯಲು ಬಯಸು ತ್ತೀವೋ, ಅದನ್ನು ಸರಿಯಾದ ದಿಕ್ಕಿನಲ್ಲಿ ಮನನ ಮಾಡಿಕೊಂಡು ಅಧ್ಯಯನ ಮಾಡುವುದು ಅಗತ್ಯ. ಓದಿದ ವಿಚಾರಗಳ ಸಂವಹನಗೊಳಿಸಿಕೊಳ್ಳು ವುದು ಬಹುಮುಖ್ಯ. ಪ್ರಸ್ತುತ ಸಂದರ್ಭದಲ್ಲಿ ವಿಶ್ವದ ಅನೇಕ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿ ಅಸ್ಥಿರವಾ ಗಿದೆ. ಆದರೆ  ಭಾರತದ ಅರ್ಥ ವ್ಯವಸ್ಥೆ ಸದೃಢವಾ ಗಿದೆ. ಇದಕ್ಕೆ  ದೇಶದ ಜನತೆ ಮಾಡುತ್ತಿರುವ ಉಳಿ ತಾಯವೇ ಕಾರಣ. ನಮ್ಮ ಜನರಲ್ಲಿರುವ ಉಳಿ ತಾಯ ಮನೋಭಾವದಿಂದಾಗಿ ನಮ್ಮ ಆರ್ಥಿಕ ವ್ಯವಸ್ಥೆ ಗಟ್ಟಿಯಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೋಗ ಬಯಸುವವರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಉಳಿತಾಯ ಖಾತೆ ತೆರೆಸಿ, ಜನರಲ್ಲಿ ಉಳಿತಾಯ ಮನೋಭಾವ ಉಂಟು ಮಾಡಬೇಕು ಎಂದು ಸಲಹೆ ನೀಡಿದರು.

ನಮ್ಮ ದೇಶದಲ್ಲಿ ಅಸಂಘಟಿತ ಮೈಕ್ರೋ ಬ್ಯಾಂಕಿಂಗ್ ವ್ಯವಸ್ಥೆ ವಿಶಾಲವಾಗಿ ಹಬ್ಬಿದೆ. ಸಣ್ಣ ಪ್ರಮಾಣದ ಸಾಲ ಸೌಲಭÀ್ಯಗಳ ಮೂಲಕ ಜನರಲ್ಲಿ ಹಣ ಉಳಿತಾಯ ಮಾಡುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲೂ ಸ್ತ್ರೀ ಶಕ್ತಿ,  ಮಹಿಳಾ ಸಹಕಾರ ಸಂಘ ಉಳಿತಾಯ ಯೋಜನೆ ಯನ್ನು ಪ್ರೋತ್ಸಾಹಿಸುತ್ತಿವೆ ಎಂದು ಶ್ಲಾಘಿಸಿದರು.

ವಿದ್ಯಾರ್ಥಿದೆಸೆಯಲ್ಲಿರುವ ವೇಳೆ ಹೆಚ್ಚು ಸಮಯ ಅಧ್ಯಯನ, ಕಲಿಕೆಗೆ ಮೀಸಲಿಡಬೇಕು. ಬೇರೆ ಆಲೋಚನೆಗಳನ್ನು ಬಿಟ್ಟು ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲವಾದರೆ ಪಟ್ಟ ಶ್ರಮ ಮತ್ತು ಪ್ರಯತ್ನ ವ್ಯರ್ಥವಾಗುತ್ತದೆ. ಮುಕ್ತ ವಿವಿ ಆವರಣದಲ್ಲಿ ಗ್ರಂಥಾಲಯ ಸೌಲಭ್ಯ ವಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಪಠ್ಯಕ್ಕೆ ಮೀರಿದ ಜ್ಞಾನವನ್ನು ನಾವು ಬೆಳೆಸಿ ಕೊಂಡರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಸಾಧÀ್ಯ ಎಂದರು.

ಇದೇ ವೇಳೆ ಮುಕ್ತ ವಿವಿ ಕುಲಪತಿ ಪೆÇ್ರ.ಎಸ್. ವಿದ್ಯಾಶಂಕರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಸೋಲು ಸಹಜ. ಇದಕ್ಕೆ ಯಾರೂ ನಿರಾಶ ರಾಗದೇ ಮತ್ತೆ ಮತ್ತೆ ಪ್ರಯತ್ನಿಸಬೇಕು. ಇಂದು ಯುವ ಸಮೂಹವನ್ನು ಮೊಬೈಲ್ ವಿಚಲಿತ (ಡಿಸ್ಟರ್ಬ್)ಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್‍ನ ಅಗತ್ಯ ಎಷ್ಟು ಎಂಬ ಬಗ್ಗೆ ತಿಳಿದು ಕೊಳ್ಳುವುದರೊಂದಿಗೆ  ಅಗತ್ಯ ಬಿದ್ದಾಗ ಮಾತ್ರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಕ್ತ ವಿವಿ ಕುಲಸಚಿವ ಪೆÇ್ರ.ಬಿ.ರಮೇಶ್, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜಕ ಜೆ. ಸತ್ಯ ನಾರಾಯಣಗೌಡ ಇದ್ದರು.

Translate »