ಹಾಸನ ರಾಮನಾಥಪುರ-ಪಿರಿಯಾಪಟ್ಟಣ ರಸ್ತೆ ಬಳಕೆ: ಶುಲ್ಕ ವಸೂಲಿ
ಮೈಸೂರು

ಹಾಸನ ರಾಮನಾಥಪುರ-ಪಿರಿಯಾಪಟ್ಟಣ ರಸ್ತೆ ಬಳಕೆ: ಶುಲ್ಕ ವಸೂಲಿ

December 24, 2019

ಮೈಸೂರು, ಡಿ.23- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ರಾಜ್ಯ ಹೆದ್ದಾರಿ-21ರ ಹಾಸನ ರಾಮನಾಥಪುರ-ಪಿರಿಯಾಪಟ್ಟಣ ರಸ್ತೆಯಲ್ಲಿ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಕೆ.ಆರ್.ಸಿ.ಎಲ್ ಅನುಮತಿ ನೀಡಿದೆ. ಹಾಸನ ತಾಲೂಕು, ಕಟ್ಟಾಯ ಹೋಬಳಿ ಬ್ಯಾಡರಹಳ್ಳಿ, ಅರಕಲಗೂಡು, ದೊಡ್ಡಮಗ್ಗೆ, ನಿಲುವಾಗಿಲು, ಪಿರಿಯಾ ಪಟ್ಟಣ ತಾಲ್ಲೂಕು, ಬೆಟ್ಟದಪುರ ಹೋಬಳಿ ಕೂರ್ಗಲ್ ಗ್ರಾಮದ ಬಳಿ ನಿರ್ಮಿಸಿರುವ ಟೋಲ್ ಕೇಂದ್ರಗಳಲ್ಲಿ ಬಳಕೆದಾರರು ಶುಲ್ಕ ಸಂಗ್ರಹಿಸಲು ವಿಜಯ ರಾಮೇಗೌಡ ಅವರಿಗೆ ಗುತ್ತಿಗೆ ನೀಡಿದ್ದು, ಡಿ.27ರಿಂದ ಈ ರಸ್ತೆಯ ಭಾಗದಲ್ಲಿ ಸಂಚರಿಸುವ ವಿವಿಧ ವಾಹನಗಳಿಂದ ನಿಗದಿತ ದರಗಳ ಶುಲ್ಕ ಸಂಗ್ರಹಣೆಯನ್ನು ಪ್ರಾರಂಭಿಸುತ್ತದೆ. ಸರ್ಕಾರದ ಅಧಿಸೂಚನೆ ಸಂಖ್ಯೆ: ಪಿಡಬ್ಲ್ಯೂಡಿ 24 ಇಎಪಿ 2018 ಬೆಂಗಳೂರು, ದಿನಾಂಕ 22-01-2018ರನ್ವಯ ದ್ವಿಚಕ್ರ ಹಾಗೂ 3 ಚಕ್ರದ ವಾಹನಗಳು, ಟ್ರಾಕ್ಟರ್, ಪ್ರಾಣಿಗಳ ಶಕ್ತಿ ಬಳಸಿ ಸಾಗಿಸುವ ವಾಹನಗಳು, ಕೃಷಿ ಆಧಾರಿತ ಸಾಗಣೆ ವಾಹನಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಟೋಲ್ ಬೂತ್‍ಗಳಿಂದ 20 ಕಿ.ಮೀ.ದೂರದವರೆಗೆ ಬರುವ ವಾಣಿಜ್ಯ ಬಳಕೆಗೆ ಉಪಯೋಗಿಸಲ್ಪಡುವ ಸ್ವಂತ ವಾಹನಗಳಿಗೆ ಮಾಸಿಕ ಪಾಸುಗಳನ್ನು ವಿತರಿಸುವ ವ್ಯವಸ್ಥೆ ಇರುತ್ತದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಯೋಜನಾ ಕಚೇರಿಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Translate »