ಗೋಕುಲಂ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ
ಮೈಸೂರು

ಗೋಕುಲಂ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ

December 24, 2019

ಮೈಸೂರು,ಡಿ.23(ಆರ್‍ಕೆ)-ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೋಮ ವಾರ ಬೆಳಿಗ್ಗೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ಅಧಿಕಾರಿಗಳೊಂದಿಗೆ ಪಾದ ಯಾತ್ರೆ ನಡೆಸಿ ಮೂಲ ಸೌಲಭ್ಯಗಳ ಕುಂದು -ಕೊರತೆಗಳ ಪರಿಶೀಲನೆ ನಡೆಸಿದರು.

ಸಿಟಿ ಬಸ್ ನಿಲ್ದಾಣದಿಂದ ಬರುವ ನಗರ ಸಾರಿಗೆ ಬಸ್ಸುಗಳು ಗೋಕುಲಂ, ಕುಂಬಾರ ಕೊಪ್ಪಲಿನ ಹೊಸ ತಂಗುದಾಣಗಳಲ್ಲಿ ನಿಲ್ಲಿಸ ಬೇಕು. ಮ್ಯಾನ್‍ಹೋಲ್‍ಗಳನ್ನು ಸರಿ ಪಡಿಸಬೇಕು. ಹೈಟೆನ್ಷನ್ ಮಾರ್ಗದಡಿ ಮದ್ಯ ಪಾನ ಮಾಡುವುದನ್ನು ತಪ್ಪಿಸಿ ಹಾಗೂ ಉದ್ಯಾನವನದಲ್ಲಿ ವಾಯುವಿಹಾರಿಗಳಿಗೆ ವಿಶ್ರಾಂತಿ ತಾಣ ನಿರ್ಮಿಸುವಂತೆ ಶಾಸ ಕರು ಅಧಿಕಾರಿಗಳಿಗೆ ಸೂಚಿಸಿದರು.

ನಾಯಕರ ಬಡಾವಣೆಯಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ದಾಖ ಲಾತಿ ಪರಿಶೀಲಿಸಿ ಅರ್ಹ ಫಲಾನುಭವಿ ಗಳಿಗೆ ಮನೆ ನಿರ್ಮಿಸಿ ಕೊಡಿ. ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದ ಅವರು, ನರ್ಮ್ ಮನೆಗಳಲ್ಲಿ ವಾಸಿಸುತ್ತಿ ರುವವರಿಗೆ ಹಕ್ಕು ಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದರು.

ಈ ಮನೆಗಳು ಸೋರುತ್ತಿರುವುದನ್ನು ಕಂಡು ತಕ್ಷಣವೇ ರಿಪೇರಿ ಮಾಡಿಸಬೇಕು. ವಾಣಿವಿಲಾಸ ವಾಟರ್ ವಕ್ರ್ಸ್‍ನಿಂದ ನೀರು ಸರಬರಾಜು ಮಾಡಿಸಿ ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅರ್ಧಕ್ಕೆ ನಿಂತಿರುವ ಗೋಕುಲಂ 3ನೇ ಹಂತದ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 10 ಲಕ್ಷ ರೂ. ಅನುದಾನ ಕೊಡುವುದಾಗಿ ತಿಳಿ ಸಿದ ಅವರು, ಬಡಾವಣೆಯ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಚತೆ, ಪಾರ್ಕುಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಗೆ ವಲಯ ಕಚೇರಿ 4ರ ಅಭಿವೃದ್ಧಿ ಅಧಿಕಾರಿ ಸುನೀಲ್, ಮುಡಾ, ಚೆಸ್ಕಾಂ ಆರೋಗ್ಯಾಧಿ ಕಾರಿ, ಪಶುಪಾಲನಾಧಿಕಾರಿಗಳು, ಮಾಜಿ ಪಾಲಿಕೆ ಸದಸ್ಯ ಗಿರೀಶ್‍ಪ್ರಸಾದ್, ಮುಖಂಡರಾದ ಸೋಮಶೇಖರ್, ರಾಜು, ಚಿಕ್ಕವೆಂಕಟು, ಅಶೋಕ್, ಜಯಣ್ಣ, ಶಿವು, ರವಿ, ನಂಜಪ್ಪ, ದಿನೇಶಗೌಡ, ಕಾರ್ತಿಕ್, ಬಸವರಾಜು ಪಾದಯಾತ್ರೆಯಲ್ಲಿದ್ದರು.

Translate »