Tag: Mysore

10 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರು

10 ಲಕ್ಷ ರೂ. ಪರಿಹಾರ ಘೋಷಣೆ

December 23, 2019

ಬೆಂಗಳೂರು,ಡಿ.22-ಮಂಗಳೂರು ಗೋಲಿಬಾರ್ ಘಟನೆಯಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಶಾಂತವಾಗಿದ್ದು, ಅಲ್ಲಿಗೆ ಭೇಟಿ ನೀಡಲು ನಾವು ಯಾರಿಗೂ ತಡೆ ಒಡ್ಡಿಲ್ಲ. ಈಗ ಅಲ್ಲಿ ಕರ್ಫ್ಯೂ ಸಡಿಸಲಿಸಲಾಗಿದೆ. ಮಂಗ ಳೂರು ಘಟನೆಯ ಬಗ್ಗೆ ತನಿಖೆಯನ್ನೂ ನಡೆಸುತ್ತೇವೆ. ಸಿದ್ದರಾಮಯ್ಯ ಯಾವಾಗ ಬೇಕಾದರೂ ಮಂಗಳೂರಿಗೆ ಭೇಟಿ ನೀಡಬಹುದು ಎಂದು ಯಡಿಯೂರಪ್ಪ ತಿಳಿಸಿದರು. ಕಂದಕ್ ನಿವಾಸಿ ಅಬ್ದುಲ್ ಜಲೀಲ್ ಹಾಗೂ ನೌಶೀನ್ ಅವರು ಗೋಲಿಬಾರ್‍ನಲ್ಲಿ ಮೃತಪಟ್ಟಿದ್ದರು….

ಯು.ಟಿ.ಖಾದರ್ ವಿರುದ್ಧ ದೇಶದ್ರೋಹ ಪ್ರಕರಣ
ಮೈಸೂರು

ಯು.ಟಿ.ಖಾದರ್ ವಿರುದ್ಧ ದೇಶದ್ರೋಹ ಪ್ರಕರಣ

December 23, 2019

ಮಂಗಳೂರು,ಡಿ.22-ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಇದೇ 17ರಂದು ನಡೆದ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಯು.ಟಿ.ಖಾದರ್ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ದೇಶದ್ರೋಹದ ಆಪಾದನೆ ಹೊರಿಸಲಾಗಿದೆ. ಡಿಸೆಂಬರ್ 17ರಂದು ಮಾಡಿದ್ದ ಭಾಷಣದ ಆಧಾರದಲ್ಲಿ ಖಾದರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೇಶ್ ಕುಮಾರ್ ಶೆಟ್ಟಿ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಡಿ.19ರಂದು…

ವಿ-ಲೀಡ್‍ನ `ವಾಕ್ ವಿಥಿನ್’ ನಡಿಗೆಗೆ ಡಿಸಿಎಂ ಡಾ.ಅಶ್ವಥ್‍ನಾರಾಯಣ ಚಾಲನೆ
ಮೈಸೂರು

ವಿ-ಲೀಡ್‍ನ `ವಾಕ್ ವಿಥಿನ್’ ನಡಿಗೆಗೆ ಡಿಸಿಎಂ ಡಾ.ಅಶ್ವಥ್‍ನಾರಾಯಣ ಚಾಲನೆ

December 23, 2019

ಮೈಸೂರು,ಡಿ.22(ಆರ್‍ಕೆಬಿ)- ‘ಸಂತೋಷ ದಾಯಕ ಕೊಡುಗೆ’ಯನ್ನು ಪ್ರೇರೇಪಿಸುವ ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ (ಎಸ್‍ವಿವೈಎಂ) ಮತ್ತು ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೋಕಸಿ ಮೂವ್‍ಮೆಂಟ್ (ಗ್ರಾಮ್) ಆಯೋಜಿ ಸಿರುವ ಎಂಟು ದಿನಗಳ `ವಾಕ್ ವಿಥಿನ್ (ನನ್ನೊಳಗಿನ ನಡಿಗೆ) ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾ ಯಣ ಭಾನುವಾರ ಚಾಲನೆ ನೀಡಿದರು. ಗ್ರಾಮೀಣ ಭಾರತದೊಂದಿಗೆ ಸಂಪರ್ಕ ಸಾಧಿಸುವ ಜೊತೆಗೆ ಜನರಲ್ಲಿ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ `ಸಂತೋಷದಾಯಕ ಕೊಡುಗೆ’ ಗಳನ್ನು ಪ್ರೇರೇಪಿಸುವ 40…

ಜ.2ರಿಂದ 12ರವರೆಗೆ ಸರ್ಕಾರಿ ಫಾರ್ಮಾಸಿಸ್ಟ್‍ಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧಾರ
ಮೈಸೂರು

ಜ.2ರಿಂದ 12ರವರೆಗೆ ಸರ್ಕಾರಿ ಫಾರ್ಮಾಸಿಸ್ಟ್‍ಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧಾರ

December 23, 2019

ಮೈಸೂರು, ಡಿ.22(ಪಿಎಂ)- ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ವೇತನ ತಾರ ತಮ್ಯ ನಿವಾರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಹಾಗೂ `ಡ್ರಗ್ಸ್ ಅಂಡ್ ಕಾಸ್ಮೆಟಿಕ್ ಕಾಯ್ದೆ ಶೆಡ್ಯೂಲ್-ಕೆ’ಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯು ವಂತೆ ಒತ್ತಾಯಿಸಿ 2020ರ ಜ.2ರಿಂದ 12ರವರೆಗೆ ರಾಜ್ಯದಾದ್ಯಂತ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ಸಂಘ ನಿರ್ಧರಿಸಿದೆ ಎಂದು ಸಂಘದ ರಾಜ್ಯಾ ಧ್ಯಕ್ಷ ಜಿ.ಎಸ್.ದೇಸಾಯಿ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ಸಂಘದ ಮೈಸೂರು…

ಗೃಹಶೋಭೆಯಲ್ಲಿ ಕೇಕ್‍ನಲ್ಲೇ ರೂಪುಗೊಂಡಿವೆ 7 ಅದ್ಭುತಗಳು
ಮೈಸೂರು

ಗೃಹಶೋಭೆಯಲ್ಲಿ ಕೇಕ್‍ನಲ್ಲೇ ರೂಪುಗೊಂಡಿವೆ 7 ಅದ್ಭುತಗಳು

December 23, 2019

ಮೈಸೂರು,ಡಿ.22(ಎಂಟಿವೈ)- ಮೈಸೂರು ಮಹಾ ರಾಜ ಕಾಲೇಜು ಮೈದಾನದಲ್ಲಿ ಆರಂಭವಾಗಿರುವ `ಗೃಹಶೋಭೆ’ ಅಂತಾರಾಷ್ಟ್ರೀಯ ಗೃಹಬಳಕೆ ವಸ್ತು ಪ್ರದರ್ಶನದಲ್ಲಿ ಡಾಲ್ಫಿನ್ ಬೇಕರಿ ಸಂಸ್ಥೆ ವತಿಯಿಂದ ಕೇಕ್ ರೂಪದಲ್ಲಿ ಜಗತ್ತಿನ 7 ಅದ್ಭುತಗಳು ಮೈತಳೆದಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. ಕ್ರಿಸ್‍ಮಸ್ ಹಿನ್ನೆಲೆಯಲ್ಲಿ `ಗೃಹಶೋಭೆ’ ಪ್ರದರ್ಶನ ದಲ್ಲಿ 10ನೇ ವರ್ಷದ ಕೇಕ್ ಪ್ರದರ್ಶನ ಆಯೋಜಿ ಸಿರುವ ಡಾಲ್ಫಿನ್ ಬೇಕರಿ ಸಂಸ್ಥೆ ಈ ಬಾರಿ ವಸ್ತುಪ್ರದರ್ಶ ನಕ್ಕೆ ಆಗಮಿಸುವ ಗ್ರಾಹಕರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ 7 ಅದ್ಭುತವನ್ನು ಕೇಕ್ ನಲ್ಲಿ ನಿರ್ಮಾಣ ಮಾಡ ಲಾಗಿದೆ ಎಂದು…

ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ ಮಾನಸಧಾರ
ಮೈಸೂರು

ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ ಮಾನಸಧಾರ

December 23, 2019

ಮೈಸೂರು,ಡಿ.22-ಇಲ್ಲಿನ ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ `ಮಾನಸಧಾರ ಹಬ್ಬ’ದ ಅಂಗವಾಗಿ 2 ದಿನಗಳ ಕಾಲ `ಅಂತರ ಶಾಲಾ ಶಾಸ್ತ್ರೀಯ ಯುಗಳ ನೃತ್ಯ ಸ್ಪರ್ಧೆ’ ಆಯೋ ಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಸಂಗೀತ ವಿದ್ವಾಂಸ ಡಾ.ಆರ್.ಎಸ್. ನಂದ ಕುಮಾರ್ ಮಾತನಾಡಿ, ಇಂತಹ ಸ್ಪರ್ಧೆಗಳನ್ನು ಹೆಚ್ಚು ಆಯೋಜಿಸುವುದರಿಂದ ನಮ್ಮ ಕಲೆಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಜತೆಗೆ ಉಳಿಸಿ, ಬೆಳೆಸಬಹುದು ಎಂದರು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾತ ನಾಡಿ, ‘ಕಲೆಗೆ ಭಾಷೆಯ ಭೇದವಿಲ್ಲ. ಎಲ್ಲರನ್ನೂ ಹಿಡಿದಿಡುವ ಶಕ್ತಿ ಅದಕ್ಕಿದೆ. ನಮ್ಮ ಸಂಸ್ಥೆಯು ಕಲೆಗಳಿಗೆ…

ನಟರಾಜ ಮಹಿಳಾ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ
ಮೈಸೂರು

ನಟರಾಜ ಮಹಿಳಾ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ

December 23, 2019

ಮೈಸೂರು,ಡಿ.22-ಖಿಲ್ಲೆ ಮೊಹಲ್ಲಾದ ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಕೆ.ಆರ್.ಪೊಲೀಸ್ ಠಾಣೆ ಸಂಯುಕ್ತಾಶ್ರಯ ದಲ್ಲಿ `ಅಪರಾಧ ತಡೆ ಮಾಸಾಚರಣೆ’ ಕಾರ್ಯ ಕ್ರಮವನ್ನು ಆಯೋಜಿಸ ಲಾಗಿತ್ತು. ಕೆ.ಆರ್.ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಮಾತನಾಡಿ, ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯುವ ಸಮೂಹ ಹೆಚ್ಚು ಅಪರಾಧಗಳನ್ನು ಮಾಡುತ್ತಿರುವುದು ಕಳವಳಕಾರಿ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಶೋಷಣೆಗೆ ಒಳಗಾಗುತ್ತಿದ್ದು, ಮುಂಜಾಗ್ರತ ಕ್ರಮಗಳನ್ನು ವಹಿಸಬೇಕಿದೆ. ಯುವಸಮೂಹ ಅಪರಾಧ ಕೃತ್ಯಗಳಿಂದ ದೂರವಿರಬೇಕು. ಅಪರಾಧ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ…

ನಾಳೆ ಹಲವೆಡೆ ವಿದ್ಯುತ್ ನಿಲುಗಡೆ
ಮೈಸೂರು

ನಾಳೆ ಹಲವೆಡೆ ವಿದ್ಯುತ್ ನಿಲುಗಡೆ

December 23, 2019

ಮೈಸೂರು,ಡಿ.22-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಡಿ.24ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ  66/11 ಕೆವಿ ಮೇಗಳಾ ಪುರ ವ್ಯಾಪ್ತಿಯ ಮೇಗಳಾಪುರ, ಕೀಳನಪುರ, ಸಿದ್ದರಾಮನಹುಂಡಿ, ಎಂ.ಸಿ.ಹುಂಡಿ, ಇನಾಂ ಉತ್ತನಹಳ್ಳಿ, ಕುಪ್ಪೆಗಾಲ, ಮುದ್ದೇಗೌಡನ ಹುಂಡಿ, ರಂಗನಾಥಪುರ, ಶ್ರೀನಿವಾಸಪುರ, ದೇವೇಗೌಡನಹುಂಡಿ, ಯಡಕೊಳ, ಕಡವೆಕಟ್ಟೆಹುಂಡಿ, ಹೊಸಹಳ್ಳಿ, ಗುರುಕಾರಪುರ, ದುದ್ದಗೆರೆ, ಮಹದೇವಿಕಾಲೋನಿ, ಲಕ್ಷ್ಮೀಪುರ, ಮಾಧವಗೆರೆ, ವರಕೋಡು ಪೇಪರ್ ಮಿಲ್, ಕುಪ್ಯ, ಬೊಮ್ಮನಾಯಕನಹಳ್ಳಿ, ಕೆ.ಪಿ.ಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ನಂಜನಗೂಡು ವಿಭಾಗ ವ್ಯಾಪ್ತಿಯ ಕುಪ್ಯ ಗ್ರಾಮ ಪಂಚಾಯಿತಿಯ…

ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ: ಜಿಪಂ ಸದಸ್ಯ ಬೋರಯ್ಯ
ಮೈಸೂರು

ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ: ಜಿಪಂ ಸದಸ್ಯ ಬೋರಯ್ಯ

December 23, 2019

ಮದ್ದೂರು, ಡಿ.22- ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ. ಊಹಾಪೋಹಗಳಿಗೆ ಪಕ್ಷದ ಕಾರ್ಯಕರ್ತರು ಕಿವಿಗೊಡಬೇಡಿ ಎಂದು ಜಿಪಂ ಸದಸ್ಯ ಬೋರಯ್ಯ ಮನವಿ ಮಾಡಿದರು. ಬೆಸಗರಹಳ್ಳಿಯ ಯಲ್ಲಮ್ಮ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಜಿಪಂ ಸದಸ್ಯ ಮರಿ ಹೆಗ್ಗಡೆ ಹಾಗೂ ನನ್ನ ಮೇಲೆ ಇಲ್ಲದ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾವು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದೇವೆ. ಹೀಗಾಗಿ ಶಾಸಕ ಡಿ.ಸಿ.ತಮ್ಮಣ್ಣ ನವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಸದಾ ಸಿದ್ಧರಿದ್ದೇವೆ….

ಮೈಸೂರಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ
ಮೈಸೂರು

ಮೈಸೂರಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ

December 22, 2019

ಮೈಸೂರು,ಡಿ.21(ಆರ್‍ಕೆ)- ಮೈಸೂ ರಿನ ಜೆಕೆ ಮೈದಾನದ ಅಲ್ಯೂಮಿನಿ ಅಸೋಸಿಯೇಷನ್ ಸಭಾಂಗಣದಲ್ಲಿ ಶನಿವಾರ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಕಾರ್ಡ್ ನೋಂದಣಿ ಮಾಡಿ, ವಿತರಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರದ ಸಂಯುಕ್ತಾಶ್ರಯದಲ್ಲಿ ಏರ್ಪಡಿ ಸಿದ್ದ ಶಿಬಿರ ಉದ್ಘಾಟಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ. ಒಂಟಿಗೋಡಿ ಅವರು, ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ಸಾಂಕೇತಿಕ ವಾಗಿ ವಿತರಿಸಿದರು….

1 99 100 101 102 103 330
Translate »