ವಿ-ಲೀಡ್‍ನ `ವಾಕ್ ವಿಥಿನ್’ ನಡಿಗೆಗೆ ಡಿಸಿಎಂ ಡಾ.ಅಶ್ವಥ್‍ನಾರಾಯಣ ಚಾಲನೆ
ಮೈಸೂರು

ವಿ-ಲೀಡ್‍ನ `ವಾಕ್ ವಿಥಿನ್’ ನಡಿಗೆಗೆ ಡಿಸಿಎಂ ಡಾ.ಅಶ್ವಥ್‍ನಾರಾಯಣ ಚಾಲನೆ

December 23, 2019

ಮೈಸೂರು,ಡಿ.22(ಆರ್‍ಕೆಬಿ)- ‘ಸಂತೋಷ ದಾಯಕ ಕೊಡುಗೆ’ಯನ್ನು ಪ್ರೇರೇಪಿಸುವ ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ (ಎಸ್‍ವಿವೈಎಂ) ಮತ್ತು ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೋಕಸಿ ಮೂವ್‍ಮೆಂಟ್ (ಗ್ರಾಮ್) ಆಯೋಜಿ ಸಿರುವ ಎಂಟು ದಿನಗಳ `ವಾಕ್ ವಿಥಿನ್ (ನನ್ನೊಳಗಿನ ನಡಿಗೆ) ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾ ಯಣ ಭಾನುವಾರ ಚಾಲನೆ ನೀಡಿದರು.

ಗ್ರಾಮೀಣ ಭಾರತದೊಂದಿಗೆ ಸಂಪರ್ಕ ಸಾಧಿಸುವ ಜೊತೆಗೆ ಜನರಲ್ಲಿ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ `ಸಂತೋಷದಾಯಕ ಕೊಡುಗೆ’ ಗಳನ್ನು ಪ್ರೇರೇಪಿಸುವ 40 ಗ್ರಾಮಗಳಲ್ಲಿ ಒಟ್ಟು 114 ಕಿ.ಮೀ. ನಡಿಗೆ ಕಾರ್ಯಕ್ರಮವನ್ನು ಅವರು ಮೈಸೂರಿನ ಹೆಬ್ಬಾಳ ಬಳಿಯ ಸಂಸ್ಥೆಯ ಆವ ರಣಲ್ಲಿ ಹಸಿರು ಬಾವುಟ ತೋರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ, ಎನ್.ಆರ್. ಫೌಂಡೇಷನ್‍ನ ಚೇರ್ಮನ್ ಗುರು, ಸ್ವಾಮಿ ವಿವೇಕಾನಂದ ಯೂವ್ ಮೂವ್‍ಮೆಂಟ್ (ಎಸ್‍ವಿವೈಎಂ) ಮತ್ತು ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೋಕಸಿ ಮೂವ್‍ಮೆಂಟ್ (ಗ್ರಾಮ್) ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ, ಚಿದಾನಂದಗೌಡ, ನಾಗಾನಂದ, ಚಕ್ರವರ್ತಿ, ಡಿ.ಮಾದೇಗೌಡ, ಎಸ್‍ವಿವೈಎಂ ಸಿಇಓ ಡಾ. ಜಿ.ಎಸ್.ಕುಮಾರ್, ವಿ-ಲೀಡ್ ನಿರ್ದೇಶಕ ವಿ.ರಮೇಶ್ ಇನ್ನಿತರರು ಉಪಸ್ಥಿತರಿದ್ದರು.

ಡಾ.ಆರ್.ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ ವಿ.ಲೀಡ್ ಆಶ್ರಮದಿಂದ ಹೊರಟ `ವಾಕ್ ವಿಥಿನ್’ ನಡಿಗೆಯು ಚಿಗುರು ಸೇವಾಶ್ರಮ, ಬೆಳ ವಾಡಿ, ಬಸವನಪುರ, ಮರಟಿಕ್ಯಾತನಹಳ್ಳಿ, ಕೇರ್ಗಳ್ಳಿ, ರಾಮನಹುಂಡಿ, ಕೆ.ಸಾಲುಂಡಿ, ಮೂಗನ ಹುಂಡಿ, ನಗರ್ತಹಳ್ಳಿ, ಧನಗಳ್ಳಿ, ಡಿ.ಸಾಲುಂಡಿ, ಕೆಲ್ಲಹಳ್ಳಿ, ಬಿ.ಕಾಟೂರು, ಮಾರ್ಬಳ್ಳಿ, ಅಹಲ್ಯ, ಗೌಡರಹುಂಡಿ, ರಾಮಪುರ, ಹುಲ್ಲಹಳ್ಳಿ, ಶಿರಮಳ್ಳಿ, ಹೆಗ್ಗಡಹಳ್ಳಿ, ಮೊಬ್ಬಳ್ಳಿ, ಬ್ಯಾಲೂರು, ದೇಬೂರು, ಹಂಡುವಿನ ಹಳ್ಳಿ, ನಂಜನಗೂಡು, ಹೆಜ್ಜಿಗೆ, ತೊರೆ ಮಾವು, ಹಿಮ್ಮಾವು, ಹುಳಿಮಾವು, ಬೊಕ್ಕ ಹಳ್ಳಿ, ಹದಿನಾರು, ಹದಿನಾರು ಮೋಳೆ, ಮಾದಯ್ಯನಹಳ್ಳಿ, ಅಲತ್ತೂರು, ಸುತ್ತೂರು, ಹೊಸಕೋಟೆ, ಕಿರಾಳು, ಮೊಸಂಬಾಯ ನಹಳ್ಳಿ, ಜಂತಗಳ್ಳಿ, ಮಾರಶೆಟ್ಟಿಹಳ್ಳಿ, ಹಡ ಜನ, ಹೊಸಹುಂಡಿ, ದತ್ತಪೀಠ, ಪಿಕೆಟಿಬಿ ಮೂಲಕ ಡಿ.29ರಂದು ಮತ್ತೆ ವಿ-ಲೀಡ್‍ಗೆ ವಾಪಸಾಗಲಿದೆ. ಒಂದು ನೈಜ ಭಾರತದ ಅನುಭವದೊಂದಿಗೆ ಆಂತರಿಕ ಅನ್ವೇ ಷಣೆಯ ಈ ನಡಿಗೆಯಲ್ಲಿ ಮೈಸೂರು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ದೆಹಲಿ, ಅಮೆರಿಕಾ ಸಂಯುಕ್ತ ಸಂಸ್ಥಾನ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದಾರೆ.

ಜನರನ್ನು ಸಂಪರ್ಕಿಸುವ `ವಾಕ್ ವಿಥಿನ್’ ನಡಿಗೆ: ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಾ.ಎನ್.ಆರ್.ಆಶ್ವಥ್‍ನಾರಾಯಣ, ಜಗತ್ತು ಇಂದು ಪ್ರಗತಿ ಯತ್ತ ಸಾಗುತ್ತಿ ದ್ದರೂ ಸಮಾಜದಲ್ಲಿ ಹಿಂದುಳಿದ ಒಂದು ಸಮೂಹ ಇದೆ. ಇದು ಉತ್ತಮ ಸೌಕರ್ಯ ಗಳು ಸಿಗದಿರುವುದರಿಂದ ಅವರ ನಡತೆ, ಸರ್ಕಾರದ ವೈಫಲ್ಯತೆಯಿಂದ ಹಿಂದುಳಿದಿರ ಬಹುದು. ಆ ಜನಸಮೂಹವನ್ನು ಹೇಗೆ ಸಂಪರ್ಕಿಸುತ್ತೇವೆ ಎಂಬುದನ್ನು ಈ ನಡಿಗೆ ತಿಳಿಸಿಕೊಡಲಿದೆ ಎಂದರು. ನಾವು ವಿದ್ಯೆ ಪಡೆದ ಬಳಿಕ ನಮ್ಮ ಹಿತವನ್ನು ಬಯಸು ತ್ತೇವೆಯೇ ಹೊರತು ಸಮಾಜಕ್ಕಾಗಿ ನಮ್ಮ ಸೇವೆ ಎಂಬುವುದನ್ನು ಮರೆತು ಬಿಡುತ್ತೇವೆ. ಸಮಾಜ ಸೇವೆ ಮಾಡುವ ಗುಣ ಬರಲು ಅವರಿಗೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಮಠ ಹಾಗೂ ಮುಕ್ತನಂದಾಸ್ವಾಮೀಜಿ ಸ್ಫೂರ್ತಿದಾಯಕರಾಗಿದ್ದಾರೆ ಎಂದರು. ಎಲ್ಲರೂ ಈ ವಾಕ್ ವಿಥಿನ್ ನಡಿಗೆಗೆ ಹಣಕಾಸು ಹಾಗೂ ಶ್ರಮದಾನದ ಮೂಲಕ ಸಹಕರಿಸಬೇಕು. ಸ್ವ-ಇಚ್ಛೆಯಿಂದ ವಿವಿಧ ರಾಜ್ಯ ಹಾಗೂ ರಾಷ್ಟ್ರಗಳಿಂದ ಒಂದು ಗುರಿ ಇಟ್ಟುಕೊಂಡು ಈ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಭಾಗವಹಿಸಿರುವುದು ಸಂತೋಷದ ವಿಚಾರ ಎಂದರು.

Translate »