ಜ.2ರಿಂದ 12ರವರೆಗೆ ಸರ್ಕಾರಿ ಫಾರ್ಮಾಸಿಸ್ಟ್‍ಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧಾರ
ಮೈಸೂರು

ಜ.2ರಿಂದ 12ರವರೆಗೆ ಸರ್ಕಾರಿ ಫಾರ್ಮಾಸಿಸ್ಟ್‍ಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧಾರ

December 23, 2019

ಮೈಸೂರು, ಡಿ.22(ಪಿಎಂ)- ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ವೇತನ ತಾರ ತಮ್ಯ ನಿವಾರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಹಾಗೂ `ಡ್ರಗ್ಸ್ ಅಂಡ್ ಕಾಸ್ಮೆಟಿಕ್ ಕಾಯ್ದೆ ಶೆಡ್ಯೂಲ್-ಕೆ’ಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯು ವಂತೆ ಒತ್ತಾಯಿಸಿ 2020ರ ಜ.2ರಿಂದ 12ರವರೆಗೆ ರಾಜ್ಯದಾದ್ಯಂತ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ಸಂಘ ನಿರ್ಧರಿಸಿದೆ ಎಂದು ಸಂಘದ ರಾಜ್ಯಾ ಧ್ಯಕ್ಷ ಜಿ.ಎಸ್.ದೇಸಾಯಿ ತಿಳಿಸಿದರು.

ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಶಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 58ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಫಾರ್ಮಾಸಿಸ್ಟ್‍ಗಳ ಬೇಡಿಕೆ ಯನ್ನು ಈಡೇರಿಸುವಲ್ಲಿ ಕಳೆದ 3 ದಶಕ ಗಳಿಂದ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. 1965ರಿಂದ ಇಲ್ಲಿವರೆಗೂ ನೇಮಕಾತಿಯನ್ನೇ ಮಾಡಿಲ್ಲ. ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡು ಕೇವಲ 12 ಸಾವಿರ ರೂ. ವೇತನ ನೀಡಿದರೆ ಬದುಕು ದೂಡಲು ಸಾಧ್ಯವೇ? ಇಲಾಖೆಯಲ್ಲಿ ಸಾವಿ ರಕ್ಕೂ ಹೆಚ್ಚು ಫಾರ್ಮಾಸಿಸ್ಟ್ ಹುದ್ದೆಗಳು ಖಾಲಿ ಉಳಿದಿವೆ. ಹೀಗಾಗಿ ಹೆಚ್ಚುವರಿ ಯಾಗಿ ಮತ್ತೊಂದೆಡೆಗೆ ನಿಯೋಜಿಸುವ ಮೂಲಕ ಫಾರ್ಮಾಸಿಸ್ಟ್‍ಗಳಿಗೆ ಹೆಚ್ಚು ಒತ್ತಡ ಹಾಕಲಾಗುತ್ತಿದೆ. ಹೀಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ 10 ದಿನಗಳ ಕಾಲ ಕಪ್ಪುಪಟ್ಟಿ ಧರಿಸಿ ಸರ್ಕಾರಿ ಫಾರ್ಮಾಸಿಸ್ಟ್‍ಗಳು ಕರ್ತವ್ಯ ನಿರ್ವಹಿ ಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ `ಡ್ರಗ್ಸ್ ಅಂಡ್ ಕಾಸ್ಮೆ ಟಿಕ್ ಕಾಯ್ದೆ ಶೆಡ್ಯೂಲ್-ಕೆ’ಗೆ ತಿದ್ದುಪಡಿ ತರುವ ಮೂಲಕ ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಆಶಾ ಕಾರ್ಯಕರ್ತೆ ಯರೂ ಔಷಧ ವಿತರಣೆ ಮಾಡಲು ಅವ ಕಾಶ ನೀಡಿದೆ. ಇದು ಅಪಾಯಕಾರಿ. ಇಂತಹ ಗಂಭೀರ ವಿಷಯ ಕುರಿತು ಸಂಸತ್‍ನಲ್ಲಿ ಕೇರಳದ ಒಬ್ಬರು ಸಂಸದರು ಮಾತ್ರವೇ ಧ್ವನಿ ಎತ್ತಿದ್ದಾರೆ. 1980ಕ್ಕೂ ಮುನ್ನ ಇದ್ದ ಕಾಯ್ದೆಯಲ್ಲಿ ಫಾರ್ಮಾಸಿಸ್ಟ್‍ಗಳು ಹಾಗೂ ವೈದ್ಯರು ಮಾತ್ರವೇ ರೋಗಿಗಳಿಗೆ ಔಷಧ ವಿತರಣೆ ಮಾಡಲು ಅವಕಾಶವಿತ್ತು. ಆದರೆ 1980ರಲ್ಲಿ ಡ್ರಗ್ಸ್ ಅಂಡ್ ಕಾಸ್ಮೆಟಿಕ್ ಕಾಯ್ದೆಗೆ ತಿದ್ದುಪಡಿ ತಂದು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಕಿರಿಯ ಆರೋಗ್ಯ ಸಹಾಯಕರು ಔಷಧ ನೀಡಲು ಅವಕಾಶ ಕಲ್ಪಿಸಲಾಯಿತು ಎಂದು ತಿಳಿಸಿದರು.

ಈಗ ಇನ್ನು ಮುಂದುವರೆದು ಅಂಗನ ವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಔಷಧಗಳನ್ನು ನೀಡ ಬಹುದು ಎಂದು ತಿದ್ದುಪಡಿ ಮಾಡಲಾ ಗಿದೆ. ಇದು ಅತ್ಯಂತ ಅಪಾಯಕಾರಿಯಾ ಗಿದ್ದು, ಕೇಂದ್ರ ಸರ್ಕಾರಕ್ಕೆ ನಮ್ಮ ಅಧಿಕಾರಿ ವರ್ಗ ಇದನ್ನು ಮನವರಿಕೆ ಮಾಡಿಕೊಡ ಬೇಕು. ಫಾರ್ಮಾಸಿಸ್ಟ್‍ಗಳು ಬೀದಿಗಿಳಿದು ಹೋರಾಟ ಮಾಡಿದಾಗಲೇ ನಮ್ಮ ಮಹತ್ವ ಸರ್ಕಾರಕ್ಕೆ ಅರಿವಾಗುವುದು. ಪ್ರತಿವರ್ಷ 3 ಸಾವಿರ ಹೊಸ ಔಷಧಗಳು ಮಾರು ಕಟ್ಟೆಗೆ ಬರುತ್ತಿವೆ. ಫಾರ್ಮಾಸಿಸ್ಟ್‍ಗಳು ಔಷ ಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು. ಅವರೊಡನೆ ಸಮಾ ಲೋಚನೆ ನಡೆಸಿ ಔಷಧಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ವಿಭಾಗೀಯ ಸಹ ನಿರ್ದೇಶಕಿ ಡಾ.ಬಿ.ಎಸ್.ಪುಷ್ಪಲತಾ ಮಾತನಾಡಿ, ಆರೋಗ್ಯ ಇಲಾಖೆ `ಎಲ್ಲರಿಗೂ ಆರೋಗ್ಯ, ಎಲ್ಲೆಡೆ ಆರೋಗ್ಯ’ ಧ್ಯೇಯದಡಿ ಕೆಲಸ ಮಾಡುತ್ತಿದೆ. ಇಲಾಖೆಯಲ್ಲಿ ಫಾರ್ಮಾಸಿಸ್ಟ್ ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ನಿಮ್ಮ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರದ ಗಮನ ಸೆಳೆಯುವ ಪ್ರಾಮಾ ಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಮೈಸೂರು ವೈದ್ಯ ಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ. ನಂಜರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕ ಡಾ.ಕೆ. ಹೆಚ್.ಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಶಾಖೆ ಅಧ್ಯಕ್ಷ ಸಿ.ಎಲ್.ಸೋಮಶೇಖರ್ ಮತ್ತಿತರರು ಹಾಜರಿದ್ದರು.

Translate »