ಗೃಹಶೋಭೆಯಲ್ಲಿ ಕೇಕ್‍ನಲ್ಲೇ ರೂಪುಗೊಂಡಿವೆ 7 ಅದ್ಭುತಗಳು
ಮೈಸೂರು

ಗೃಹಶೋಭೆಯಲ್ಲಿ ಕೇಕ್‍ನಲ್ಲೇ ರೂಪುಗೊಂಡಿವೆ 7 ಅದ್ಭುತಗಳು

December 23, 2019

ಮೈಸೂರು,ಡಿ.22(ಎಂಟಿವೈ)- ಮೈಸೂರು ಮಹಾ ರಾಜ ಕಾಲೇಜು ಮೈದಾನದಲ್ಲಿ ಆರಂಭವಾಗಿರುವ `ಗೃಹಶೋಭೆ’ ಅಂತಾರಾಷ್ಟ್ರೀಯ ಗೃಹಬಳಕೆ ವಸ್ತು ಪ್ರದರ್ಶನದಲ್ಲಿ ಡಾಲ್ಫಿನ್ ಬೇಕರಿ ಸಂಸ್ಥೆ ವತಿಯಿಂದ ಕೇಕ್ ರೂಪದಲ್ಲಿ ಜಗತ್ತಿನ 7 ಅದ್ಭುತಗಳು ಮೈತಳೆದಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.

ಕ್ರಿಸ್‍ಮಸ್ ಹಿನ್ನೆಲೆಯಲ್ಲಿ `ಗೃಹಶೋಭೆ’ ಪ್ರದರ್ಶನ ದಲ್ಲಿ 10ನೇ ವರ್ಷದ ಕೇಕ್ ಪ್ರದರ್ಶನ ಆಯೋಜಿ ಸಿರುವ ಡಾಲ್ಫಿನ್ ಬೇಕರಿ ಸಂಸ್ಥೆ ಈ ಬಾರಿ ವಸ್ತುಪ್ರದರ್ಶ ನಕ್ಕೆ ಆಗಮಿಸುವ ಗ್ರಾಹಕರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ 7 ಅದ್ಭುತವನ್ನು ಕೇಕ್ ನಲ್ಲಿ ನಿರ್ಮಾಣ ಮಾಡ ಲಾಗಿದೆ ಎಂದು ಡಾಲ್ಫಿನ್ ಸಂಸ್ಥೆ ಮುಖ್ಯಸ್ಥ ಮೊಹ ಮ್ಮದ್ ನಿಸಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇಕ್ ಪ್ರದರ್ಶನದಲ್ಲಿ 5.5ಘಿ10ಘಿ4 ಅಡಿ ವಿಸ್ತೀರ್ಣ ದಲ್ಲಿ ಪೆಟ್ರಾ, ಜೋರ್ಡಾನ್ ನಿರ್ಮಿಸಲಾಗಿದ್ದು, 600 ಕೆಜಿ ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್, ಜೆಲಟಿನ್ ಬಳಸಲಾಗಿದೆ. ಚೀನಾದ ಮಹಾಗೋಡೆಯನ್ನು 5ಘಿ12ಘಿ4 ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. 750 ಕೆಜಿ ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್, ಜಿಲಟಿನ್ ಬಳಸಿ, 8 ಜನರು ನಿರ್ಮಿಸಿದ್ದಾರೆ. ಮೆಕ್ಸಿಕೋದ ಚಿಚೆನ್ ಇಟ್ವಾ ಮಾದರಿಯನ್ನು 5ಘಿ8ಘಿ8 ಅಡಿ ವಿಸ್ತೀರ್ಣ ದಲ್ಲಿ 800 ಕೆಜಿ ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್, ಜೆಲಟಿನ್ ಬಳಸಿ ನಿರ್ಮಿಸಲಾಗಿದೆ. ದೆಹ ಲಿಯ ತಾಜ್‍ಮಹಲ್ ಪ್ರತಿಕೃತಿಯನ್ನು 1750 ಕೆಜಿ ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್, ಜೆಲಟಿನ್ ಬಳಸಿ 7ಘಿ16ಘಿ16 ವಿಸ್ತೀರ್ಣದಲ್ಲಿ ನಿರ್ಮಿಸ ಲಾಗಿದೆ. ಬ್ರೆಜಿಲ್ ಕ್ರೈಸ್ಟ್ ದಿ ರೆಡಿಮರ್ ಪ್ರತಿಮೆಯನ್ನು 750 ಕೆಜಿ ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್, ಜೆಲಟಿನ್ ಬಳಸಿ 9.5ಘಿ8ಘಿ4 ಅಡಿ ವಿಸ್ತೀರ್ಣ ದಲ್ಲಿ ನಿರ್ಮಿಸಲಾಗಿದೆ. ಪೆರು ದೇಶದಲ್ಲಿರುವ ಮಚು ಪಿಚು ಪ್ರತಿಕೃತಿಯನ್ನು 500 ಕೆಜಿ ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್, ಜಿಲಟಿನ್ ಬಳಸಿ 4.5ಘಿ10ಘಿ6 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಇಟಲಿಯ ಕೊಲೊಸಿ ಯಮ್ ಪ್ರತಿಕೃತಿಯನ್ನು 300 ಕೆಜಿ ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್, ಜೆಲಟಿನ್ ಬಳಸಿ, 5ಘಿ10ಘಿ 6 ಅಡಿ ವಿಸ್ತೀರ್ಣ ಕೇಕ್‍ನಲ್ಲಿ ನಿರ್ಮಿಸಲಾಗಿದೆ. ಈ ಎಲ್ಲಾ ಕೇಕ್‍ಗಳು ಕೇವಲ ಪ್ರದರ್ಶ ನಕ್ಕೆ ಮಾತ್ರ ಸೀಮಿತವಾಗಿದ್ದು, ಸೇವಿಸಲು ಯೋಗ್ಯ ವಲ್ಲ. ಕ್ರಿಸ್‍ಮಸ್ ಹಿನ್ನೆಲೆಯಲ್ಲಿ ಗೃಹಶೋಭೆ ಪ್ರದರ್ಶನಕ್ಕೆ ಬರುವ ಪ್ರವಾಸಿಗರು ಒಂದೇ ಸ್ಥಳದಲ್ಲಿ ಜಗತ್ತಿನ 7 ಅದ್ಭುತ ಗಳನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ ಎಂದರು.

ಸೈಮನ್ ಎಕ್ಸಿಬಿಟರ್ಸ್ ಸಂಸ್ಥೆ ನಿರ್ದೇಶಕ ಎಂ.ಎಸ್. ನಾಗಚಂದ್ರ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೃಹಶೋಭೆ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಏರ್ಪಡಿಸುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದ್ದೇವೆ. ಮಹಾರಾಜ ಕಾಲೇಜು ಮೈದಾನದಲ್ಲಿ ಡಿ.20ರಿಂದ ಡಿ.29 ರವರೆಗೆ ನಡೆಯಲಿರುವ ಗೃಹಶೋಭೆ ವಸ್ತುಪ್ರದರ್ಶನ 500ನೇ ವಸ್ತುಪ್ರದರ್ಶನವಾಗಿದೆ. 100ಕ್ಕೂ ಹೆಚ್ಚು ಮಳಿಗೆ ಗಳಲ್ಲಿ ವಿದ್ಯುನ್ಮಾನ ವಸ್ತುಗಳು, ಗೃಹಬಳಕೆ ವಸ್ತುಗಳು, ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು, ಕೇಕ್, ವಿವಿಧ ತಿನಿಸು ಸೇರಿದಂತೆ ಅನೇಕ ವಸ್ತುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಬಡ, ಮಧ್ಯಮ ವರ್ಗದ ಜನರಿಗೂ ಪ್ರದರ್ಶನ ಉಪಯುಕ್ತವಾಗಿದೆ ಎಂದರು. ಡಾಲ್ಫಿನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ನಿಹಾಲ್ ಇದ್ದರು.

Translate »