ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ ಮಾನಸಧಾರ
ಮೈಸೂರು

ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ ಮಾನಸಧಾರ

December 23, 2019

ಮೈಸೂರು,ಡಿ.22-ಇಲ್ಲಿನ ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ `ಮಾನಸಧಾರ ಹಬ್ಬ’ದ ಅಂಗವಾಗಿ 2 ದಿನಗಳ ಕಾಲ `ಅಂತರ ಶಾಲಾ ಶಾಸ್ತ್ರೀಯ ಯುಗಳ ನೃತ್ಯ ಸ್ಪರ್ಧೆ’ ಆಯೋ ಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಸಂಗೀತ ವಿದ್ವಾಂಸ ಡಾ.ಆರ್.ಎಸ್. ನಂದ ಕುಮಾರ್ ಮಾತನಾಡಿ, ಇಂತಹ ಸ್ಪರ್ಧೆಗಳನ್ನು ಹೆಚ್ಚು ಆಯೋಜಿಸುವುದರಿಂದ ನಮ್ಮ ಕಲೆಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಜತೆಗೆ ಉಳಿಸಿ, ಬೆಳೆಸಬಹುದು ಎಂದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾತ ನಾಡಿ, ‘ಕಲೆಗೆ ಭಾಷೆಯ ಭೇದವಿಲ್ಲ. ಎಲ್ಲರನ್ನೂ ಹಿಡಿದಿಡುವ ಶಕ್ತಿ ಅದಕ್ಕಿದೆ. ನಮ್ಮ ಸಂಸ್ಥೆಯು ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಮಕ್ಕಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು. ವಿದ್ಯಾರ್ಥಿನಿ ವರ್ಷಿಣಿ ನಿರೂಪಿಸಿದರೆ, ಶಿಕ್ಷಕಿ ರಾಜೇಶ್ವರಿ ವಂದಿಸಿದರು. ನಂತರ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ಎಲ್ಲರನ್ನೂ ರಂಜಿಸಿದರು.

Translate »