ಮೈಸೂರಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ
ಮೈಸೂರು

ಮೈಸೂರಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ

December 22, 2019

ಮೈಸೂರು,ಡಿ.21(ಆರ್‍ಕೆ)- ಮೈಸೂ ರಿನ ಜೆಕೆ ಮೈದಾನದ ಅಲ್ಯೂಮಿನಿ ಅಸೋಸಿಯೇಷನ್ ಸಭಾಂಗಣದಲ್ಲಿ ಶನಿವಾರ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಕಾರ್ಡ್ ನೋಂದಣಿ ಮಾಡಿ, ವಿತರಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರದ ಸಂಯುಕ್ತಾಶ್ರಯದಲ್ಲಿ ಏರ್ಪಡಿ ಸಿದ್ದ ಶಿಬಿರ ಉದ್ಘಾಟಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ. ಒಂಟಿಗೋಡಿ ಅವರು, ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ಸಾಂಕೇತಿಕ ವಾಗಿ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಬಡತನವು ಆರೋಗ್ಯಕ್ಕೆ ಅಡ್ಡಿಯಾಗಬಾರದು. ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೊತೆಯಾಗಿ ಆಯು ಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ದೇವಮಾನೆಯವರು ಮಾತನಾಡಿ, ಕಲಂ 12 ಅಡಿ ಕಾನೂನು ಸೇವೆಗಳನ್ನು ಉಚಿತ ವಾಗಿ ನೀಡಲು ಅವಕಾಶವಿದೆ. ಮಹಿಳೆ ಯರು, ಮಕ್ಕಳು, ಎಸ್ಸಿ-ಎಸ್ಟಿ ಸಮುದಾಯ ಗಳು, ಪ್ರಕೃತಿ ವಿಕೋಪಕ್ಕೆ ತುತ್ತಾದವರು ಪ್ರಾಧಿಕಾರದಲ್ಲಿ ಸೇವೆ ಪಡೆಯಬಹುದಾಗಿ ರುವುದರಿಂದ ಈ ಸೌಲಭ್ಯವನ್ನು ಸದುಪ ಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಡಾ.ಸಿ.ಪಿ. ನಂಜರಾಜ್, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಬಿ.ಎಲ್.ನಂಜುಂಡಸ್ವಾಮಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ.ಎಸ್. ರಾಜೇಶ್‍ಕುಮಾರ್, ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಕೆ.ವೆಂಕಟೇಶ್, ನೋಡಲ್ ಅಧಿಕಾರಿ ಡಾ.ಎ.ಬಿ.ಮಂಜು ಪ್ರಸಾದ್, ಕೆ.ಆರ್.ಆಸ್ಪತ್ರೆ ಸಿಬ್ಬಂದಿ ಶ್ರೀನಿವಾಸ್ ಅವರು ಶಿಬಿರದಲ್ಲಿ ಭಾಗವಹಿಸಿದ್ದರು.

ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವ ಎಬಿಎಆರ್‍ಕೆ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಹಾಗೂ ಪಡಿತರ ಕಾರ್ಡ್ ತರ ಬೇಕು. ಬಿಪಿಎಲ್ ಕುಟುಂಬವು ವರ್ಷ 5 ಲಕ್ಷ ರೂ.ವರೆಗೆ ಹಾಗೂ ಎಪಿಎಲ್ ಕುಟುಂಬದವರಿಗೆ ವರ್ಷಕ್ಕೆ 1.5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಇಂದಿನ ಶಿಬಿರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಆರೋಗ್ಯ ಕಾರ್ಡ್‍ಗಳನ್ನು ವಿತರಿಸಲಾಯಿತು. ಸುಮಾರು 30ಕ್ಕೂ ಹೆಚ್ಚು ಕೌಂಟರ್‍ಗಳನ್ನು ತೆರೆದು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತಂದಿದ್ದವರಿಗೆ ನೋಂದಣಿ ಮಾಡಿ 150ಕ್ಕೂ ಹೆಚ್ಚು ಸಿಬ್ಬಂದಿ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾ ಟಕ ಕಾರ್ಡ್‍ಗಳನ್ನು ವಿತರಿಸಿದರು.

ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ
ಮೈಸೂರು ನಗರದ ಕೆ.ಆರ್, ಚೆಲುವಾಂಬ, ಪಿಕೆಟಿಬಿ, ಸರ್ಕಾರಿ ಆಯುರ್ವೇದ ಆಸ್ಪತ್ರೆ, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳು, ಗ್ರಾಮೀಣ ಭಾಗದ ತಾಲೂಕು ಸಾರ್ವಜನಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡುದಾರರಿಗೆ ಉಚಿತ ಚಿಕಿತ್ಸಾ ಸೇವೆ ಲಭ್ಯವಾಗುತ್ತದೆ.

ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಲಭ್ಯವಿಲ್ಲದಿದ್ದಲ್ಲಿ ಮಾತ್ರ ವೈದ್ಯರು ಸಲಹೆ ನೀಡಿದರೆ (ರೆಫರ್ ಮಾಡಿದರೆ) ಖಾಸಗಿ ಆಸ್ಪತ್ರೆಗಳಾದ ಮೈಸೂರಿನ ಅಪೊಲೋ ಬಿಜಿಎಸ್, ಭಾನವಿ ಆಸ್ಪತ್ರೆ, ಭಾರತ್ ಕ್ಯಾನ್ಸರ್ ಆಸ್ಪತ್ರೆ, ಬೃಂದಾವನ, ಕಾವೇರಿ, ಸಿಎಸ್‍ಐ ಹೋಲ್ಡ್ಸ್‍ವರ್ತ್ ಸ್ಮಾರಕ ಆಸ್ಪತ್ರೆ, ಡಿಆರ್‍ಎಂ, ಜೆಎಸ್‍ಎಸ್, ಕೃಷ್ಣಾ ಆಸ್ಪತ್ರೆ, ನಾಗರಾಜೇಗೌಡ ಮೆಮೋರಿಯಲ್ ಆಸ್ಪತ್ರೆ, ನಂದನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನಂಜಮ್ಮ ಜವರೇಗೌಡ ಆಸ್ಪತ್ರೆ, ನಾರಾಯಣ ಹೃದಯಾಲಯ, ಶುಭೋದಯ, ಸಿಗ್ಮಾ ಆಸ್ಪತ್ರೆ, ಸೆಂಟ್ ಜೋಸೆಫ್, ಸುಪ್ರಿಯ, ಸುಯೋಗ್, ದಿ ರೇಡಿಯಂಟ್ ಹಾಗೂ ವಿದ್ಯಾರಣ್ಯ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದು ಎಂದು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ನೋಡಲ್ ಅಧಿಕಾರಿ ಡಾ.ಎಂ.ಎಸ್.ಮಂಜುಪ್ರಸಾದ್ ತಿಳಿಸಿದ್ದಾರೆ.

ಆರೋಗ್ಯ ಕಾರ್ಡ್ ಸಿಗುವ ಸ್ಥಳ
ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕೊಂಡೊಯ್ದು ಪ್ರತಿಯೊಬ್ಬ ನಾಗರಿಕರೂ ಈ ಕೆಳಕಂಡ ಸ್ಥಳಗಳಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಆರೋಗ್ಯ ಕಾರ್ಡ್‍ಗಳನ್ನು ಪಡೆಯಬಹುದು.

ಕೆ.ಆರ್.ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆಗಳು, ಮೈಸೂರು ಜಿಲ್ಲೆಯ 9 ಸಮುದಾಯ ಆರೋಗ್ಯ ಕೇಂದ್ರಗಳು, 6 ತಾಲೂಕು ಮಟ್ಟದ ಆಸ್ಪತ್ರೆಗಳು, ಯೋಜನೆಯಡಿ ನೋಂದಣಿಯಾಗಿರುವ 122 ಸೇವಾ ಸಿಂಧು ಕೇಂದ್ರಗಳು, ಎಲ್ಲಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದು. ವಿಪಿಸಿ ಅಳತೆ ಕಾರ್ಡ್‍ಗೆ 35 ರೂ. ಹಾಗೂ ಎ-4 ಅಳತೆ ಕಾರ್ಡ್‍ಗೆ 10 ರೂ. ಶುಲ್ಕ ಪಾವತಿಸ ಬೇಕು. 2020ರ ಜನವರಿ 1ರಿಂದ ಎಲ್ಲಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕಾರ್ಡ್ ವಿತರಿಸಲಾಗುವುದು. ಜಿಲ್ಲೆಯ 266 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 255 ವಾರ್ಡ್ ಗಳನ್ನೂ ಸಹ ಗುರುತಿಸಲಾಗಿದ್ದು, ಶೀಘ್ರ ಕಾರ್ಡ್ ವಿತರಿಸಲಾಗುವುದು. ಹೃದಯಾ ಘಾತ, ಸ್ಟ್ರೋಕ್, ಅಪಘಾತದಲ್ಲಿ ಗಾಯಗೊಂಡವರು, ಕ್ಯಾನ್ಸರ್ ಸೇರಿದಂತೆ ಒಟ್ಟು 1650 ಬಗೆಯ ರೋಗಗಳಿಗೆ ಚಿಕಿತ್ಸೆ ಲಭ್ಯವಾಗಲಿದೆ.

ಮುಡಾ ನೋಟಿಸ್; ಲಲಿತಾದ್ರಿಪುರ ಕಂದಾಯ ಭೂಮಿ ನಿವಾಸಿಗಳ ಕಳವಳ
ಮೈಸೂರು,ಡಿ.21(ಎಂಟಿವೈ)- ಲಲಿತಾದ್ರಿಪುರ ಕಂದಾಯ ಭೂಮಿಯಲ್ಲಿ 23 ವರ್ಷಗಳಿಂದ ವಾಸ ಇರುವ ಜಾಗವನ್ನು ಮುಡಾ ಸ್ವಾಧೀನ ಪಡಿಸಿಕೊಂಡು ಅಲ್ಲಿಯ ಮನೆಗಳನ್ನು ನೆಲಸಮ ಮಾಡಲು ಮುಂದಾಗುವ ಮೂಲಕ ಅಲ್ಲಿಯ ನಿವಾಸಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಲಲಿತಾದ್ರಿಪುರ ನಿವಾಸಿ ಉತ್ತನಹಳ್ಳಿ ಮಾಯಣ್ಣ ಆರೋಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1994ರಲ್ಲಿ ರೈತರಿಂದ ಕೃಷಿ ಭೂಮಿಯನ್ನು ನೇರವಾಗಿ ಖರೀದಿ ಮಾಡಿ. ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಆ ಭಾಗದಲ್ಲಿ 140 ಮನೆಗಳಿವೆ. ಖಾತೆ ಮಾಡಿಸಿಕೊಂಡು ಆಲನಹಳ್ಳಿ ಗ್ರಾಮ ಪಂಚಾ ಯಿತಿಗೆ ನಿಯಮಿತವಾಗಿ ಕಂದಾಯ ಪಾವತಿಸಲಾಗುತ್ತಿದೆ. ಆದರೆ ಇದೀಗ ಮುಡಾದಿಂದ ಸಮಸ್ಯೆ ಎದುರಾಗಿದೆ. `ಇಲ್ಲಿಯ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದೇವೆ. ಮನೆಗಳನ್ನು ಖಾಲಿ ಮಾಡಿ. ಇಲ್ಲದಿದ್ದರೆ ಒಡೆದು ಹಾಕಲಾಗುವುದು’ ಎಂದು ಮುಡಾ ನೋಟಿಸ್ ನೀಡಿದೆ. ಇದು ಸರಿಯಾದ ಕ್ರಮವಲ್ಲ. ಇಲ್ಲಿಯೇ ವಾಸ ಮಾಡಲು ನಮಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

Translate »