ಭಾರತ ದೇಶ ಧರ್ಮಾತೀತವಾಗಿ ರಾಷ್ಟ್ರದ  ಪ್ರತಿಯೊಬ್ಬರಿಗೂ ಸೇರಿದ್ದೆಂದು ಗಾಂಧಿ ಪ್ರತಿಪಾದಿಸಿದ್ದರು
ಮೈಸೂರು

ಭಾರತ ದೇಶ ಧರ್ಮಾತೀತವಾಗಿ ರಾಷ್ಟ್ರದ  ಪ್ರತಿಯೊಬ್ಬರಿಗೂ ಸೇರಿದ್ದೆಂದು ಗಾಂಧಿ ಪ್ರತಿಪಾದಿಸಿದ್ದರು

December 22, 2019

ಮೈಸೂರು, ಡಿ.21(ಪಿಎಂ)- ಕಳೆದ 15 ವರ್ಷಗಳಿಂದೀಚೆಗೆ ಭಾರತ ಹಿಂದೂಗಳ ಪ್ರಾಬಲ್ಯವಿರುವ ರಾಷ್ಟ್ರವಾಗಬೇಕೆಂಬ ವಾದ ಪ್ರಬಲವಾಗಿ ಮುನ್ನಲೆಗೆ ಬಂದಿದೆ. ಆದರೆ ಗಾಂಧೀಜಿಯವರು ಧರ್ಮಾತೀತ ವಾಗಿ `ಭಾರತ’ ದೇಶದ ಪ್ರತಿ ಪ್ರಜೆಗೂ ಸೇರಿದ್ದಾಗಿದೆ ಎಂದು ದೇಶದ ಒಬ್ಬ ನಾಗರಿಕ ರಾಗಿ ಪ್ರತಿಪಾದಿಸಿದ್ದರು ಎಂದು ಗಾಂಧಿಜೀ ಯವರ ಮೊಮ್ಮಗ ಹಾಗೂ ಪತ್ರಕರ್ತ ರಾಜಮೋಹನ ಗಾಂಧಿ ಹೇಳಿದರು.

ಮೈಸೂರಿನ ಅರವಿಂದನಗರದ ಗಾಂಧಿ ವಿಚಾರ ಪರಿಷತ್ತಿನ ಮೈದಾನದಲ್ಲಿ ಪರಿ ಷತ್ತು ಹಾಗೂ ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ `ಮಾಧ್ಯಮ: ಪ್ರಜಾಸತ್ತೆ’ ಕುರಿತಂತೆ ಹಮ್ಮಿ ಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾ ಟಿಸಿ ಅವರು ಮಾತನಾಡಿದರು.

ಪ್ರಸ್ತುತ ಇಡೀ ವಿಶ್ವದಲ್ಲಿ ಒಂದು ವರ್ಗವೇ ಅಧಿಕಾರಯುತ ಸ್ಥಾನದಲ್ಲಿರಬೇಕು. ಪ್ರಜಾಪ್ರಭುತ್ವ ಎಂಬುದು ಪ್ರಯೋಜನ ವಿಲ್ಲ ಎಂಬ ವಾದ ಪ್ರಬಲವಾಗಿ ಮುಂಚೂ ಣಿಗೆ ಬಂದಿದೆ. ಅಮೆರಿಕದಲ್ಲಿ ಬಿಳಿಯರ ಪ್ರಾಬಲ್ಯವಿರಬೇಕು ಎಂಬ ವಾದ ಕೇಳಿ ಬರುತ್ತಿದ್ದರೆ, ಭಾರತದಲ್ಲಿ ಹಿಂದೂಗಳೇ ಪ್ರಬಲವಾಗಬೇಕು. ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕು ಎಂಬ ವಾದ ವ್ಯಾಪಕವಾಗುತ್ತಿದೆ. ಗಾಂಧಿಯವರು ಧರ್ಮಾತೀತವಾಗಿ ಭಾರತವು ಎಲ್ಲಾ ಭಾರ ತೀಯರಿಗೂ ಸೇರಿದ್ದು ಎಂದು ಹೇಳಿದ್ದರು. ಆದರೆ ಇಂದು ದೇಶದಲ್ಲಿ ಒಂದು ವರ್ಗವೇ ಶ್ರೇಷ್ಠ. ಅದರ ಹಿಡಿತದಲ್ಲೇ ಆಡಳಿತ ನಡೆಯಬೇಕು ಎಂಬ ಕೂಗು ಕೇಳಿಬರುತ್ತಿದೆ. ಹೀಗಾಗಿ ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ಎಂಬ ಪರಿಕಲ್ಪನೆಗಳು ಅಪಾಯದ ಸ್ಥಿತಿ ಯಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಜೈ ಹಿಂದ್, ವಂದೇ ಮಾತರಂ, ಹೇ ರಾಮ್ ಶಬ್ದಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ. ಯಾರನ್ನೂ ಅಧೀನದಲ್ಲಿ ಇಟ್ಟುಕೊಳ್ಳಬೇಡಿ, ಹೆದರಿಸ ಬೇಡಿ, ದಬ್ಬಾಳಿಕೆ ಮಾಡಬೇಡಿ ಎಂಬ ಮಾತನ್ನು ಗಾಂಧಿ ಅಂದೇ ಹೇಳಿದ್ದರು. ಯಾರೂ ಯಾರನ್ನೂ ನಿಯಂತ್ರಿಸುವ ಅವ ಶ್ಯಕತೆಯಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ವಿರಬೇಕು. ಪತ್ರಕರ್ತ ಮತ್ತು ಸಾಮಾನ್ಯ ಜನ ತಮಗನಿಸಿದ್ದನ್ನು ಅಭಿವ್ಯಕ್ತಿಗೊಳಿಸುವ ಸ್ವಾತಂತ್ರ್ಯವಿರಬೇಕು ಎಂದು ಹೇಳಿದರು.

ಸಮಾನತೆ, ನ್ಯಾಯವನ್ನು ಪ್ರೀತಿಸುವ ಜನ ದಕ್ಷಿಣ ಭಾರತದಲ್ಲಿ ಹೆಚ್ಚಿದ್ದಾರೆ. ಕೆಲ ಶಕ್ತಿಗಳು ಭಾರತ ತಮ್ಮ ಕೈವಶದಲ್ಲಿರಬೇಕು ಎಂದು ಒತ್ತಾಯಪೂರ್ವಕವಾಗಿ ತಮ್ಮ ಅಭಿಪ್ರಾಯ ಹೇರಲು ಮುಂದಾಗಿದ್ದು, ಪ್ರಜಾಪ್ರಭುತ್ವದ ಉಳಿವಿಗೆ ಅಂತಹ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ. ಅಂತಹ ಹೋರಾ ಟಕ್ಕೆ ದಕ್ಷಿಣ ಭಾರತದ ನಾಯಕತ್ವ ಶಕ್ತ ವಾಗಿದೆ. ಬಹುತೇಕ ಮಂದಿ ಗಾಂಧಿ ಯವರ ಸ್ಫೂರ್ತಿಯಿಂದ ಹೋರಾಡುತ್ತಿ ದ್ದಾರೆ. ಗಾಂಧಿ ಓರ್ವ ಮನುಷ್ಯ, ಅವರು ದೇವರಲ್ಲ. ಎಲ್ಲಾ ವರ್ಗದವರನ್ನು ಒಂದಾಗಿ ಕಾಣುವುದೇ ಅವರ ಅಂತಿಮ ಗುರಿಯಾಗಿತ್ತು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋ ದ್ಯಮ ಬಾಯಿ ಮುಚ್ಚಿಕೊಂಡಿದ್ದರೆ ಜನರೇ ಪತ್ರಕರ್ತರಾಗಿ ಸುದ್ದಿಗಳನ್ನು ಮನೆ ಮನೆಗೆ ತಲುಪಿಸಬೇಕು. ಅಂದು ಬ್ರಿಟಿಷ್ ಸರ್ಕಾರ ವಿನೋಭಾ ಭಾವೆ ಹಾಗೂ ನೆಹರು ಅವ ರನ್ನು ಬಂಧಿಸಿ, ಈ ಸಂಬಂಧ ತಮ್ಮ ಪತ್ರಿಕೆ ಯಲ್ಲಿ ಸುದ್ದಿ ಪ್ರಕಟಿಸದಂತೆ ಗಾಂಧಿಯ ವರಿಗೆ ಸೂಚನೆ ನೀಡಿತ್ತು. ಆಗ ಗಾಂಧಿ ಹೇಳಿದ ಮಾತು ಇಂದಿಗೆ ಪ್ರಸ್ತುತವಾಗಿದ್ದು, ನಾನು ಪತ್ರಿಕೆಯನ್ನೇ ಪ್ರಕಟಿಸುವುದಿಲ್ಲ. ಆದರೆ ಜನರ ಬಾಯಿಯಿಂದ ಬಾಯಿಗೆ ಹರಡುವ ಸುದ್ದಿ ತಡೆಯಲಾಗದು ಎಂದು ಗಾಂಧಿ ಪ್ರತ್ಯುತ್ತರ ನೀಡಿದ್ದರು. ಹೀಗಾಗಿ ಇಂದು ಸಹ ಜನತೆ ನಡೆದಾಡುವ ಸುದ್ದಿ ಪತ್ರಿಕೆಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುವುದನ್ನು ಯಾರೂ ತಡೆಯ ಲಾಗದು ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗಾಂಧಿ ವಿಚಾರ ಪರಿಷತ್ತಿನ ಅಧ್ಯಕ್ಷ ಪ.ಮಲ್ಲೇಶ್, ದೇಶ ಸ್ವಾತಂತ್ರ್ಯ ಪಡೆದಾಗ ಹಾಗೂ ಅದಕ್ಕೂ ಪೂರ್ವದಲ್ಲಿ ಮಾಧ್ಯಮ ಸತ್ಯ ಹೇಳುವ ದೀಕ್ಷೆ ತೊಟ್ಟಂತೆ ಕ್ರಿಯಾಶೀಲವಾಗಿದ್ದವು. ಆದರೆ ಇಂದು ಮಾಧ್ಯಮ ಸತ್ಯ ಹೇಳಲು ಕಷ್ಟಪಡುತ್ತಿವೆ. ಪ್ರಸ್ತುತ ಮಾಧ್ಯಮ ಕಾಪೋ ರ್ರೇಟ್ ವಲಯಕ್ಕೆ ಮಾರಿಕೊಂಡಿದ್ದು, ಮತ್ತೊಂದೆಡೆ ನ್ಯಾಯಾಂಗದ ಮೇಲಿದ್ದ ನಂಬಿಕೆ ಹಾಗೂ ಗೌರವ ಕಡಿಮೆಯಾಗು ತ್ತಿದೆ ಎಂದರು. ಪರಿಷತ್ತಿನ ಗೌರವ ಉಪಾ ಧ್ಯಕ್ಷರೂ ಆದ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಪರಿಷತ್ತಿನ ಕಾರ್ಯ ದರ್ಶಿ ಸಂಸ್ಕøತಿ ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Translate »