ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ: ಜಿಪಂ ಸದಸ್ಯ ಬೋರಯ್ಯ
ಮೈಸೂರು

ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ: ಜಿಪಂ ಸದಸ್ಯ ಬೋರಯ್ಯ

December 23, 2019

ಮದ್ದೂರು, ಡಿ.22- ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ. ಊಹಾಪೋಹಗಳಿಗೆ ಪಕ್ಷದ ಕಾರ್ಯಕರ್ತರು ಕಿವಿಗೊಡಬೇಡಿ ಎಂದು ಜಿಪಂ ಸದಸ್ಯ ಬೋರಯ್ಯ ಮನವಿ ಮಾಡಿದರು.

ಬೆಸಗರಹಳ್ಳಿಯ ಯಲ್ಲಮ್ಮ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಜಿಪಂ ಸದಸ್ಯ ಮರಿ ಹೆಗ್ಗಡೆ ಹಾಗೂ ನನ್ನ ಮೇಲೆ ಇಲ್ಲದ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾವು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದೇವೆ. ಹೀಗಾಗಿ ಶಾಸಕ ಡಿ.ಸಿ.ತಮ್ಮಣ್ಣ ನವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಸದಾ ಸಿದ್ಧರಿದ್ದೇವೆ. ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ದಲಿತರಿಗೆ ರಾಜಕೀಯ ಮೀಸಲಾತಿ ನೀಡದಿದ್ದರೆ ನಾವು ಜಿಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಆಡಳಿತ ನಡೆಸಲು ಸಾಧ್ಯವಾಗು ತ್ತಿರಲಿಲ್ಲ. ದೇವೇಗೌಡರ ಕೊಡುಗೆಯಿಂದ ದಲಿತರಿಗೆ ರಾಜಕೀಯ ಅಧಿಕಾರ ದೊರೆತಿದೆ. ಹೆಚ್.ಡಿ.ದೇವೇಗೌಡರಿಗೆ ಹಾಗೂ ಈ ಕ್ಷೇತ್ರದ ಶಾಸಕರಿಗೆ ಮೋಸ ಮಾಡಿ ನಾವು ಯಾವ ಪಕ್ಷಕ್ಕೂ ಹೋಗಲ್ಲ ಎಂದು ನಿಮ್ಮ ಮುಂದೆ ಪ್ರಮಾಣ ಮಾಡುತ್ತೇನೆ ಎಂದರು.

ಜಿಪಂ ಸದಸ್ಯ ಮರಿಹೆಗಡೆ ಮಾತನಾಡಿ, ಜೆಡಿಎಸ್ ಪಕ್ಷ ಹಾಗೂ ಡಿ.ಸಿ.ತಮ್ಮಣ್ಣನವರ ನಿಲುವಿಗೆ ನಾವು ಬದ್ಧರಾಗಿರು ತ್ತೇವೆ. ಕೆಲವು ಕಾರ್ಯಕ್ರಮಗಳಿಗೆ ನಾವು ಅನಿವಾರ್ಯ ಕಾರಣಗಳಿಂದ ಹೋಗಲು ಸಾಧ್ಯವಾಗದ ಕಾರಣ ಇಲ್ಲದ ಸಲ್ಲದ ಆರೋಪಗಳನ್ನು ನಮ್ಮ ಮೇಲೆ ಮಾಡುವುದು ಸರಿಯಲ್ಲ. ಕಾರ್ಯಕರ್ತರು ನಮ್ಮನ್ನು ಗೆಲ್ಲಿಸಿದ್ದಾರೆ. ಅವರ ಋಣ ತೀರಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿ ಗಾಗಿ ಶಾಸಕರ ಜೊತೆ ಕೈ ಜೋಡಿಸುತ್ತೇವೆ ಎಂದರು.

ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಜಿಪಂ ಸದಸ್ಯರು ಜೆಡಿಎಸ್ ಬಿಟ್ಟು ದೂರ ಸರಿದಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಜೆಡಿಎಸ್ ಮುಖಂಡರನ್ನು ಇತರೆ ಪಕ್ಷದವರ ಜೊತೆ ನಿಲ್ಲಿಸಿ ಫೋಟೋ ತೆಗೆಸಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಫೋಟೋ ತೆಗೆಸಿದಾಕ್ಷಣ ನಮ್ಮನ್ನು ಬಿಟ್ಟು ಹೋಗಿದ್ದಾರೆಂದು ಅಪಾರ್ಥ ಮಾಡಿಕೊಳ್ಳುವುದು ನಮ್ಮ ಮುರ್ಖತನ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಟ್ಟಿ ಬೆಳೆಸಿ ರುವ ಜೆಡಿಎಸ್ ಪಕ್ಷಕ್ಕೆ ಮುಖಂಡರು, ಕಾರ್ಯಕರ್ತರು ಪ್ರ್ರಾಮಾಣೀಕರಾಗಿದ್ದಾರೆ. ಸಂಘಟಿತರೇ ಈ ಕ್ಷೇತ್ರದ ಬುನಾದಿ. ಹಾಗಾಗಿ ಇಲ್ಲಿ ಯಾರೇ ಕುತಂತ್ರ, ಅಪಪ್ರಚಾರ ನಡೆಸಿದರೂ ಪ್ರಯೋಜನವಿಲ್ಲ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು.

ವೇದಿಕೆಯಲ್ಲಿ ಜೆಡಿಎಸ್ ತಾ.ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ದಾಸೇಗೌಡ, ಮುಖಂಡರಾದ ಎಚ್.ಎಂ. ಮರಿಮಾದೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ, ಶೇಖರ್, ಶಿವನಂಜಪ್ಪ, ಮಲ್ಲರಾಜು ಸೇರಿದಂತೆ ಇತರರಿದ್ದರು.

Translate »