Tag: Mysore

ಗೋಕುಲಂ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ
ಮೈಸೂರು

ಗೋಕುಲಂ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ

December 24, 2019

ಮೈಸೂರು,ಡಿ.23(ಆರ್‍ಕೆ)-ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೋಮ ವಾರ ಬೆಳಿಗ್ಗೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ಅಧಿಕಾರಿಗಳೊಂದಿಗೆ ಪಾದ ಯಾತ್ರೆ ನಡೆಸಿ ಮೂಲ ಸೌಲಭ್ಯಗಳ ಕುಂದು -ಕೊರತೆಗಳ ಪರಿಶೀಲನೆ ನಡೆಸಿದರು. ಸಿಟಿ ಬಸ್ ನಿಲ್ದಾಣದಿಂದ ಬರುವ ನಗರ ಸಾರಿಗೆ ಬಸ್ಸುಗಳು ಗೋಕುಲಂ, ಕುಂಬಾರ ಕೊಪ್ಪಲಿನ ಹೊಸ ತಂಗುದಾಣಗಳಲ್ಲಿ ನಿಲ್ಲಿಸ ಬೇಕು. ಮ್ಯಾನ್‍ಹೋಲ್‍ಗಳನ್ನು ಸರಿ ಪಡಿಸಬೇಕು. ಹೈಟೆನ್ಷನ್ ಮಾರ್ಗದಡಿ ಮದ್ಯ ಪಾನ ಮಾಡುವುದನ್ನು ತಪ್ಪಿಸಿ ಹಾಗೂ ಉದ್ಯಾನವನದಲ್ಲಿ ವಾಯುವಿಹಾರಿಗಳಿಗೆ ವಿಶ್ರಾಂತಿ ತಾಣ ನಿರ್ಮಿಸುವಂತೆ ಶಾಸ ಕರು ಅಧಿಕಾರಿಗಳಿಗೆ ಸೂಚಿಸಿದರು. ನಾಯಕರ ಬಡಾವಣೆಯಲ್ಲಿ…

ಮಂಗಳೂರು ಗೋಲಿಬಾರ್: ಮೃತರ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವನ, ಪರಿಹಾರ ವಿತರಣೆ
ಮೈಸೂರು

ಮಂಗಳೂರು ಗೋಲಿಬಾರ್: ಮೃತರ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವನ, ಪರಿಹಾರ ವಿತರಣೆ

December 24, 2019

ಮಂಗಳೂರು,ಡಿ.23-ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ ಬಳಿಕ ನಡೆದ ಗೋಲಿಬಾರ್‍ಗೆ ಬಲಿಯಾದ ಕುದ್ರೋಳಿಯ ಯುವಕ ನೌಶೀನ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಖಾನ್ ಸೋಮವಾರ ಭೇಟಿ ನೀಡಿದರು. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂ.ನ ಚೆಕ್ ವಿತರಿಸಿದರು. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದಲೂ 2.5 ಲಕ್ಷ ರೂ.ನ ಚೆಕ್ ಅನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಾಯಿತು. ಈ ವೇಳೆ ಮಾಜಿ ಸಚಿವರಾದ…

ಪೌರತ್ವ ಕಾಯ್ದೆ, ಎನ್‍ಆರ್‍ಸಿ ವಿರುದ್ಧ ಪ್ರತಿಭಟನೆ
ಮೈಸೂರು

ಪೌರತ್ವ ಕಾಯ್ದೆ, ಎನ್‍ಆರ್‍ಸಿ ವಿರುದ್ಧ ಪ್ರತಿಭಟನೆ

December 24, 2019

ಬೀದಿಗಿಳಿದು ಮುಸ್ಲಿಮರ ಆಕ್ರೋಶ ಹಾರಾಡಿದ ರಾಷ್ಟ್ರಧ್ವಜ ಮೊಳಗಿದ ರಾಷ್ಟ್ರಗೀತೆ ರಕ್ಷಣಾ ಕವಚ ತೊಟ್ಟು ಕರ್ತವ್ಯ ನಿರ್ವಹಿಸಿದ ಎಸ್ಪಿ, ಎಎಸ್ಪಿ ಚಾಮರಾಜನಗರ, ಡಿ.23(ಎಸ್‍ಎಸ್)- ಪೌರತ್ವ ಮಸೂದೆ ಕಾಯ್ದೆಯನ್ನು ಹಿಂಪಡೆಯ ಬೇಕು ಹಾಗೂ ಎನ್‍ಆರ್‍ಸಿ ದೇಶಾದ್ಯಂತ ಜಾರಿ ಗೊಳಿಸಬಾರದು ಎಂದು ಆಗ್ರಹಿಸಿ ಮುಸ್ಲಿಂ ಸಮು ದಾಯ ಸೋಮವಾರ ಪ್ರತಿಭಟನೆ ನಡೆಸಿದರು. ಎನ್‍ಆರ್‍ಸಿ ಮತ್ತು ಸಿಎಎ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಹಸ್ರಾರು ಮುಸ್ಲಿಂರು ಜಮಾಯಿಸಿದರು. ರಾಷ್ಟ್ರಧ್ವಜ ಹಿಡಿದು ಪೌರತ್ವ ಮಸೂದೆ ಕಾಯ್ದೆ, ಎನ್‍ಆರ್‍ಸಿ ವಿರುದ್ಧ ಬರೆಯಲಾಗಿದ್ದ ಭಿತ್ತಿಪತ್ರ…

ವಿವಾಹವಾಗುವುದಾಗಿ ಮತ್ತೋರ್ವ ವಿಧವೆಗೆ ವಂಚಿಸಿದ್ದ ವಿನೀತ್‍ರಾಜ್ 
ಮೈಸೂರು

ವಿವಾಹವಾಗುವುದಾಗಿ ಮತ್ತೋರ್ವ ವಿಧವೆಗೆ ವಂಚಿಸಿದ್ದ ವಿನೀತ್‍ರಾಜ್ 

December 24, 2019

ಮೈಸೂರು,ಡಿ.23(ಎಸ್‍ಬಿಡಿ)-ವಿಧವೆಯರನ್ನು ವಂಚಿಸಿ, ಬಂಧನಕ್ಕೊಳ ಗಾಗಿರುವ ತಮಿಳುನಾಡು ಮೂಲದ ವ್ಯಕ್ತಿ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಕೊಯಮತ್ತೂರಿನ ವಿನೀತ್‍ರಾಜ್ ಅಲಿಯಾಸ್ ಯುವರಾಜ್(45) ವಿರುದ್ಧ ವಿಧವೆಯೊಬ್ಬರು ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾದಿ ಡಾಟ್ ಕಾಮ್‍ನಲ್ಲಿ ಪರಿಚಯವಾದ ವಿನೀತ್ ರಾಜ್, ನನ್ನನ್ನು ವಿವಾಹವಾಗುವುದಾಗಿ ತಿಳಿಸಿದ್ದ. ಭೇಟಿಯ ನಂತರ ಒಂದು ದೋಷವಿರುವುದರಿಂದ ನಾವು ವಿವಾಹವಾಗಲು ಅಡ್ಡಿಯಾಗುತ್ತಿದೆ. ದೇವರ ಸನ್ನಿಧಿಯಲ್ಲಿ ನಾವಿಬ್ಬರೂ ಚಿನ್ನದ ಸರವನ್ನು ಪರಸ್ಪರ ಬದಲಿಸಿಕೊಂಡರೆ ಆ ದೋಷ ನಿವಾರಣೆಯಾಗುತ್ತದೆ ಎಂದು ಹೇಳಿದ. ಅವನ ಮಾತನ್ನು…

ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ
ಮೈಸೂರು

ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ

December 24, 2019

ಗುಂಡ್ಲುಪೇಟೆ, ಡಿ.23(ಸೋಮ್.ಜಿ)- ಕಾಣೆ ಯಾಗಿದ್ದ ವ್ಯಕ್ತಿಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತೆರಕಣಾಂಬಿ ಪೆÇಲೀಸ್ ಠಾಣೆ ವ್ಯಾಪ್ತಿಯ ಹುಲುಗಿನಮುರಡಿ ಶ್ರೀ ವೆಂಕಟರಮಣ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಕುಮಚ ಹಳ್ಳಿ ಗ್ರಾಮದ ವಾಸಿ ಶಿವಲಿಂಗಪ್ಪ (58) ಎಂಬುವರೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿರುವ ವ್ಯಕ್ತಿ. ಇವರ ಶವವು ಬೆಟ್ಟ ಸಮೀಪದಲ್ಲಿರುವ ಪೆÇದೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ಬೆಟ್ಟದ ತಪ್ಪಲಿನ ಪೆÇದೆಯಲ್ಲಿ ಪುರುಷನ ಕೊಳೆತ ದೇಹವನ್ನು ಕಂಡ ದನಗಾಹಿಗಳು ಪೆÇಲೀಸರಿಗೆ…

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಗಮನ ನೀಡಿ
ಮೈಸೂರು

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಗಮನ ನೀಡಿ

December 24, 2019

ಚಿನಕುರುಳಿ, ಡಿ.23- ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿ ಕೆಗೂ ಹೆಚ್ಚು ಗಮನ ನೀಡಬೇಕು ಎಂದು ಬೆಂಗಳೂರು ವಿವಿ ನಿವೃತ್ತ ರಿಜಿಸ್ಟರ್ ಕೆ.ಎನ್.ನಿಂಗೇಗೌಡ ಸಲಹೆ ನೀಡಿದರು. ಗ್ರಾಮದ ಎಸ್‍ಟಿಜಿ ವಿದ್ಯಾಸಂಸ್ಥೆಯಲ್ಲಿ 3 ದಿನಗಳ ಕಾಲ ನಡೆದ ಕಲಾ ವಿಸ್ಮಯ-2019 ಶಾಲಾ ವಾರ್ಷಿಕೋತ್ಸವದ ಸಮಾ ರೋಪದಲ್ಲಿ ಮಾತನಾಡಿದ ಅವರು, ಶಿಕ್ಷಣ ವಾಣೀಜ್ಯಕರಣವಾಗಿರುವ ದಿನಗಳಲ್ಲಿ ಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡ ಬೇಕೆಂಬ ಆಶಯದೊಂದಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ತಂದೆ-ತಾಯಿ ಹೆಸರಲ್ಲಿ ಎಸ್‍ಟಿಜಿ ಶಿಕ್ಷಣ ಸಂಸ್ಥೆ…

ಸೂರ್ಯಗ್ರಹಣ ವೀಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ
ಮೈಸೂರು

ಸೂರ್ಯಗ್ರಹಣ ವೀಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ

December 24, 2019

ಕುಶಾಲನಗರ, ಡಿ.23- ಇದೇ 26 ರಂದು ಸಂಭವಿಸಲಿರುವ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ವಿದ್ಯಾರ್ಥಿ ಗಳು ಹಾಗೂ ನಾಗರಿಕರು ಸುರಕ್ಷಿತವಾಗಿ ವೀಕ್ಷಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜನಜಾಗೃತಿ ಮೂಡಿಸಲಾಯಿತು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ, ಹವ್ಯಾಸಿ ಖಗೋಳ ವೀಕ್ಷಕ ಜಿ.ಶ್ರೀನಾಥ್ ಮಾತನಾಡಿ, ಸೂರ್ಯ ಗ್ರಹಣ ವೀಕ್ಷಣೆ ಕುರಿತು ಮಾಹಿತಿ ನೀಡಿ ದರು. ಜೊತೆಗೆ, ಗ್ರಹಣವನ್ನು ಬರೀಗಣ್ಣಿ ನಿಂದ…

ಕಾಯ್ದೆ ಬಗ್ಗೆ ರಾಹುಲ್ ಗಾಂಧಿ 10 ಸಾಲುಗಳನ್ನು ಮಾತನಾಡಲಿ
ಮೈಸೂರು

ಕಾಯ್ದೆ ಬಗ್ಗೆ ರಾಹುಲ್ ಗಾಂಧಿ 10 ಸಾಲುಗಳನ್ನು ಮಾತನಾಡಲಿ

December 23, 2019

ನವದೆಹಲಿ, ಡಿ.22- ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 10 ಸಾಲುಗಳನ್ನು ಮಾತನಾಡಲಿ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸವಾಲು ಹಾಕಿದ್ದಾರೆ. ಇಂದೋರ್ ನಲ್ಲಿ ನಡೆದ ಕಾರ್ಯಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಯುವಕರಿಗೆ ಪ್ರಚೋದನೆ ನೀಡುವ ಮೂಲಕ ಹಿಂಸಾ ಚಾರಕ್ಕೆ ಕಾರಣರಾಗಿದ್ದಾರೆ. ಇಷ್ಟೆಲ್ಲ ಮಾತನಾಡುವ ರಾಹುಲ್ ಗಾಂಧಿಯವರು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು 10 ಸಾಲುಗಳನ್ನು ಮಾತನಾಡಲಿ, ಇದರಲ್ಲಿ ದೇಶದ ಜನರಿಗೆ ನೋವುಂಟು ಮಾಡುವ 2 ಸಾಲುಗಳನ್ನು ತೋರಿಸಲಿ ಎಂದು…

ಮಂಗಳೂರಿನಲ್ಲಿ ಇಂದು ಕಫ್ರ್ಯೂ ಹಿಂತೆಗೆತ, ನಿಷೇಧಾಜ್ಞೆ ಮುಂದುವರಿಕೆ
ಮೈಸೂರು

ಮಂಗಳೂರಿನಲ್ಲಿ ಇಂದು ಕಫ್ರ್ಯೂ ಹಿಂತೆಗೆತ, ನಿಷೇಧಾಜ್ಞೆ ಮುಂದುವರಿಕೆ

December 23, 2019

ಮಂಗಳೂರು, ಡಿ.22- ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ಜಾರಿ ವಿರೋಧಿಸಿ ರಾಜ್ಯದಲ್ಲಿನ ಹೋರಾಟದ ಕಿಚ್ಚು ಜೋರಾಗಿದೆ. ಮೊನ್ನೆ ಇಬ್ಬರು ಪ್ರತಿಭಟನಾಕಾರರು ಹೋರಾಟದ ವೇಳೆ ಸಾವನ್ನಪ್ಪಿದ್ದರು. ಬಳಿಕ ಮಂಗಳೂರಿನಲ್ಲಿ ಪರಿಸ್ಥಿತಿ ತೀರಾ ಹದ ಗೆಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜೊತೆಗೆ ಕರ್ಫ್ಯೂ ಜಾರಿ ಮಾಡಿ, 48 ಗಂಟೆಗಳ ಕಾಲ ಇಂಟರ್‍ನೆಟ್ ನಿಷೇಧ ಮಾಡಲಾಗಿತ್ತು. ಬಳಿಕ 12 ಗಂಟೆಗಳ ಕಾಲ ಕರ್ಫ್ಯೂ ಸಡಿಲಗೊಳಿಸಲಾಗಿತ್ತು. ಮತ್ತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆ 6…

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೈಸೂರಲ್ಲಿ ಹಿಂದೂ ಪರ ಸಂಘಟನೆಗಳ ಶಕ್ತಿ ಪ್ರದರ್ಶನ
ಮೈಸೂರು

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೈಸೂರಲ್ಲಿ ಹಿಂದೂ ಪರ ಸಂಘಟನೆಗಳ ಶಕ್ತಿ ಪ್ರದರ್ಶನ

December 23, 2019

ಮೈಸೂರು,ಡಿ.22(ಎಂಟಿವೈ)- ಪೌರತ್ವ ತಿದ್ದುಪಡಿ ಕಾಯ್ದೆ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿ ಮೈಸೂರು ವಿವಿಯ ಓವೆಲ್ ಮೈದಾನ ದಲ್ಲಿ ಭಾನುವಾರ ವಿವಿಧ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಸೇರಿ ತ್ವರಿತಗತಿಯಲ್ಲಿ ಕಾಯ್ದೆ ಅನುಷ್ಠಾನಕ್ಕೆ ತಂದು ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವಂತೆ ಆಗ್ರಹಿಸಿದರು. ಅರಮನೆ ಮುಂಭಾಗದಿಂದ ಡಿಸಿ ಕಚೇರಿ ವರೆಗೆ ಮೆರವಣಿಗೆ ನಡೆಸಲು ಉದ್ದೇಶಿ ಸಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘ ಟನೆಗಳ ಕಾರ್ಯಕರ್ತರಿಗೆ ಪೊಲೀಸರು ಮೆರವಣಿಗೆ ನಡೆಸದಂತೆ ಎಚ್ಚರಿಕೆ ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ…

1 98 99 100 101 102 330
Translate »