ಸೂರ್ಯಗ್ರಹಣ ವೀಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ
ಮೈಸೂರು

ಸೂರ್ಯಗ್ರಹಣ ವೀಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ

December 24, 2019

ಕುಶಾಲನಗರ, ಡಿ.23- ಇದೇ 26 ರಂದು ಸಂಭವಿಸಲಿರುವ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ವಿದ್ಯಾರ್ಥಿ ಗಳು ಹಾಗೂ ನಾಗರಿಕರು ಸುರಕ್ಷಿತವಾಗಿ ವೀಕ್ಷಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜನಜಾಗೃತಿ ಮೂಡಿಸಲಾಯಿತು.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ, ಹವ್ಯಾಸಿ ಖಗೋಳ ವೀಕ್ಷಕ ಜಿ.ಶ್ರೀನಾಥ್ ಮಾತನಾಡಿ, ಸೂರ್ಯ ಗ್ರಹಣ ವೀಕ್ಷಣೆ ಕುರಿತು ಮಾಹಿತಿ ನೀಡಿ ದರು. ಜೊತೆಗೆ, ಗ್ರಹಣವನ್ನು ಬರೀಗಣ್ಣಿ ನಿಂದ ವೀಕ್ಷಿಸದೆ ಸೌರ ಕನ್ನಡಗಳನ್ನು ಬಳಸಿ ವೀಕ್ಷಿಸಬೇಕು ಎಂದು ತಿಳಿಸಿದರು.

ಈ ಬಾರಿ ಕುಟ್ಟ ವಿಭಾಗದಲ್ಲಿ ಶೇ. 94 ರಷ್ಟು ಗ್ರಹಣ ವೀಕ್ಷಿಸಬಹುದು. ಖಗೋಳ ದಲ್ಲಿ ಕೌತುಕದ ಸನ್ನಿವೇಶ ಉಂಟು ಮಾಡುವ ನೆರಳು-ಬೆಳಕಿನ ಚೆಲ್ಲಾಟದ ವಿದ್ಯಾ ಮಾನದ ಗ್ರಹಣವನ್ನು ವೀಕ್ಷಿಸಿ ಎಂದರು.

ವಿಜ್ಞಾನ ಪರಿಷತ್ತಿನ ಸಂಚಾಲಕ ಟಿ.ಜಿ.ಪ್ರೇಮ್‍ಕುಮಾರ್ ಮಾತನಾಡಿ, ಅಂದು ಬೆಳಿಗ್ಗೆ 8.05 ರಿಂದ 11.05 ರವರೆಗೆ ಜಿಲ್ಲೆಯ ಕುಟ್ಟ ಮತ್ತು ಕಾಯಿಮನಿ ಎಂಬ ಸ್ಥಳಗಳಲ್ಲಿ ಸೂರ್ಯಗ್ರಹಣ ವೀಕ್ಷಿಸಲು ವಿಶೇಷ ವೀಕ್ಷಣಾ ಕೇಂದ್ರ ಸ್ಥಾಪಿಸಲಾಗಿದೆ. ಜೊತೆಗೆ ಜಿಲ್ಲಾ ಕೇಂದ್ರ ಮ್ಯಾನ್ಸ್ ಕಾಂಪೌಂಡ್, ತಾಲೂಕು ಕೇಂದ್ರಗಳು ಸೇರಿದಂತೆ ಕುಶಾಲನಗರ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ ಹಾಗೂ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆ ಹಾಗೂ ಎಲ್ಲಾ ಸರ್ಕಾರಿ ಶಾಲೆಗಳ ಲ್ಲಿಯೂ ಮಕ್ಕಳು ಸೂರ್ಯಗ್ರಹಣ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಸೂರ್ಯಗ್ರಹಣ ವೀಕ್ಷಣೆ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿದ ರೋಟರಿ ಕ್ಲಬ್ ಉಪಾಧ್ಯಕ್ಷ ಕೆ.ಪಿ.ಚಂದ್ರಶೇಖರ್ ಗ್ರಹಣ ವೀಕ್ಷಣೆಗೆ ರೋಟರಿ ಸಂಸ್ಥೆ ವಿಜ್ಞಾನ ಪರಿಷತ್‍ನೊಂದಿಗೆ ಸಹಕಾರ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ, ವಿಜ್ಞಾನ ಪರಿಷತ್ತಿನ ಸದಸ್ಯ ಶ್ರೀಹರ್ಷ, ಪ್ರೌಢಶಾಲಾ ಮುಖ್ಯಶಿಕ್ಷಕಿ ಬಿ.ಎ.ಪುಷ್ಪಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್.ರಾಣಿ, ಕಾವೇರಿ ಆಂದೋಲನದ ಚಂದ್ರಮೋಹನ್, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Translate »