ಸದುದ್ದೇಶಕಷ್ಟೇ ಬಂದೂಕು ಬಳಸಲು ಸಲಹೆ
ಕೊಡಗು

ಸದುದ್ದೇಶಕಷ್ಟೇ ಬಂದೂಕು ಬಳಸಲು ಸಲಹೆ

December 24, 2019

ಗೋಣಿಕೊಪ್ಪಲು, ಡಿ.23- ಬಂದೂಕುಗಳು ಸದುದ್ದೇಶಕಷ್ಟೇ ಬಳಸಬೇಕು ಎಂದು ಮಡಿಕೇರಿಯ ಸಶಸ್ತ್ರ ಪೊಲೀಸ್ ದಳದ ಮುಖ್ಯಸ್ಥ ರಾಚಯ್ಯ ಸಲಹೆ ನೀಡಿದರು.

ಗೋಣಿಕೊಪ್ಪದಲ್ಲಿ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ತಂದೆ ತಾಯಿಯ ಹೆಸರಿನಲ್ಲಿರುವ ಬಂದೂಕುಗಳನ್ನು ಬಳಸಲು ಇಂತಹ ತರಬೇತಿಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕೊಡಗಿನ ಗೋಣಿಕೊಪ್ಪದಲ್ಲಿ ಪೊಲೀಸ್ ಇಲಾಖೆಯಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಗೋಣಿಕೊಪ್ಪ ವೃತ್ತ ನಿರೀಕ್ಷಕ ಎನ್.ಎನ್.ರಾಮರೆಡ್ಡಿ ಮಾತನಾಡಿ, ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ತಮ್ಮ ದೈಹಿಕ ಸಾಮಾಥ್ರ್ಯ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಬಂದೂಕುಗಳನ್ನು ಸುರಕ್ಷಿತವಾಗಿ ಕಾಪಾಡಲು ಹಾಗೂ ಬಳಸುವ ಕುರಿತು ತರಬೇತಿಯಲ್ಲಿ ತಿಳಿಸಲಾಗುವುದು. ವನ್ಯ ಜೀವಿಗಳಿಂದ ರಕ್ಷಣೆ ಪಡೆಯಲು ಬಂದೂಕುಗಳಿದ್ದರೂ, ತರಬೇತಿ ಇಲ್ಲದೆ ಅದನ್ನು ಬಳಸಲು ಸಾಧ್ಯವಿಲ್ಲ. ಈ ಕಾರಣದಿಂದ ವಿರಾಜಪೇಟೆ ಉಪ ವಿಭಾಗದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ತರಬೇತಿದಾರ ಹಾಗೂ ಸಹಾಯಕ ಉಪ ನಿರೀಕ್ಷಕ ವೆಂಕಪ್ಪ ಮಾತನಾಡಿದರು. ವೇದಿಕೆ ಯಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಪೊಲೀಸ್ ಸಿಬ್ಬಂದಿ ಧನಪತಿ, ಮಂಜು ಶಾಲಿಯಾನ್ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು.

Translate »