‘ವಿರಾಜಪೇಟೆ ಪ್ರೀಮಿಯರ್ ಲೀಗ್’ಗೆ ಚಾಲನೆ
ಕೊಡಗು

‘ವಿರಾಜಪೇಟೆ ಪ್ರೀಮಿಯರ್ ಲೀಗ್’ಗೆ ಚಾಲನೆ

December 24, 2019

ವಿರಾಜಪೇಟೆ, ಡಿ.23- ಸ್ನೇಹ ಸೌಹಾರ್ದ ವನ್ನು ಬಿಂಬಿಸುವ ಕ್ರೀಡಾ ಹಬ್ಬ ‘ವಿರಾಜ ಪೇಟೆ ಪ್ರೀಮಿಯರ್ ಲೀಗ್’ಗೆ ನಗರದಲ್ಲಿ ಚಾಲನೆ ನೀಡಲಾಯಿತು. ಡಿ. 24ರಿಂದ 29ರವರೆಗೆ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ 6 ದಿನಗಳ ಕಾಲ ಲೀಗ್ ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ.ಮೆಗ್ನೋಲಿಯ ರೆಸಾರ್ಟ್ ವ್ಯವಸ್ಥಾಪಕ ಪ್ರವೀಣ್ ವಿಪಿಎಲ್ ಅಧಿಕೃತ ಲಾಂಚನ ಮುದ್ರಿತ ಬಾವುಟ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ನಗರದ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯ ಮುಂಭಾಗದಿಂದ ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪಲು ರಸ್ತೆ ಮಾರ್ಗ ವಾಗಿ ಸಾಗಿ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಜಾಥಾ ಅಂತ್ಯಗೊಂಡಿತ್ತು. ಜಾಥಾದಲ್ಲಿ ಒಟ್ಟು 12 ತಂಡಗಳ ಮಾಲೀಕರು, 180 ಆಟಗಾರರು ಮತ್ತು ಆಯೋಜಕರು ಭಾಗವಹಿಸಿದ್ದರು.

ಕಾಲೇಜಿನ ಬಯಲು ಸಭಾ ವೇದಿಕೆ ಯಲ್ಲಿ ಪಂದ್ಯಾಟದ ಟ್ರೋಫಿ ವಿರಾಜಪೇಟೆ ನಗರದ ವೃತ್ತ ನೀರಿಕ್ಷಕ ಕ್ಯಾತೆಗೌಡ, ಠಾಣಾ ಧಿಕಾರಿ ಮರಿಸ್ವಾಮಿ ಅನಾವರಣಗೊಳಿಸಿ ದರು. ಟ್ರೋಫಿ ದಾನಿಗಳಾದ ಸಾಗರ್ ಡೆಕೊರೇಟರ್ಸ್ ಮಾಲೀಕ ಸಾಗರ್, ಸ್ಫೋಟ್ರ್ಸ್ ವಲ್ರ್ಡ್ ಮಾಲೀಕ ಅನ್ಸಫ್, ಕ್ರೀಡಾ ಆಯೋಜಕರಾದ ಇಂಮ್ತಿಯಾಜ್, ನಿತಿನ್‍ಲೆಪು, ಅಭಿಲಾಷ್, ಶವಾಜ್, ಮೊಹಿನ್ ಉಪಸ್ಥಿತರಿದ್ದರು.

 

Translate »