ಮಂಗಳೂರಿನಲ್ಲಿ ಇಂದು ಕಫ್ರ್ಯೂ ಹಿಂತೆಗೆತ, ನಿಷೇಧಾಜ್ಞೆ ಮುಂದುವರಿಕೆ
ಮೈಸೂರು

ಮಂಗಳೂರಿನಲ್ಲಿ ಇಂದು ಕಫ್ರ್ಯೂ ಹಿಂತೆಗೆತ, ನಿಷೇಧಾಜ್ಞೆ ಮುಂದುವರಿಕೆ

December 23, 2019

ಮಂಗಳೂರು, ಡಿ.22- ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ಜಾರಿ ವಿರೋಧಿಸಿ ರಾಜ್ಯದಲ್ಲಿನ ಹೋರಾಟದ ಕಿಚ್ಚು ಜೋರಾಗಿದೆ. ಮೊನ್ನೆ ಇಬ್ಬರು ಪ್ರತಿಭಟನಾಕಾರರು ಹೋರಾಟದ ವೇಳೆ ಸಾವನ್ನಪ್ಪಿದ್ದರು. ಬಳಿಕ ಮಂಗಳೂರಿನಲ್ಲಿ ಪರಿಸ್ಥಿತಿ ತೀರಾ ಹದ ಗೆಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜೊತೆಗೆ ಕರ್ಫ್ಯೂ ಜಾರಿ ಮಾಡಿ, 48 ಗಂಟೆಗಳ ಕಾಲ ಇಂಟರ್‍ನೆಟ್ ನಿಷೇಧ ಮಾಡಲಾಗಿತ್ತು.

ಬಳಿಕ 12 ಗಂಟೆಗಳ ಕಾಲ ಕರ್ಫ್ಯೂ ಸಡಿಲಗೊಳಿಸಲಾಗಿತ್ತು. ಮತ್ತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಪುನರಾರಂಭ ಮಾಡಲಾಗಿದೆ.ಸೋಮವಾರ ಬೆಳಿಗ್ಗೆ 6 ಗಂಟೆಗೆ ಕಫ್ರ್ಯೂ ಹಿಂತೆಗೆದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಾಳೆಯಿಂದ ಪೆÇಲೀಸ್ ಆಯುಕ್ತರ ಮುಂದಿನ ಸೂಚನೆ ಬರುವವರೆಗೂ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

Translate »