Tag: Mysuru-Kodagu Constituency

ಸ್ಕೇಟಿಂಗ್ ಮೂಲಕ ಮತದಾನ ಜಾಗೃತಿ
ಮೈಸೂರು

ಸ್ಕೇಟಿಂಗ್ ಮೂಲಕ ಮತದಾನ ಜಾಗೃತಿ

April 19, 2019

ಮೈಸೂರು: ಕಡ್ಡಾಯ ಮತದಾನ ಮಾಡುವ ಕುರಿತು ಯುವಕರು ಸ್ಕೇಟಿಂಗ್ ಮೂಲಕ ಮೈಸೂರಲ್ಲಿ ವಿನೂತನ ಶೈಲಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು. ಮತದಾನ ಜಾಗೃತಿ ಕುರಿತ ಟೀ ಶರ್ಟ್ ಹಾಗೂ ಸ್ಕೇಟಿಂಗ್ ತೊಟ್ಟ ಯುವಕರು, ಸಿದ್ದಾರ್ಥ ಬಡಾವಣೆ, ನಜರ್‍ಬಾದ್, ಪುರಭವನ, ಮೆಡಿಕಲ್ ಕಾಲೇಜು, ಅರಸು ಬೋರ್ಡಿಂಗ್ ಸ್ಕೂಲ್, ಜಿಲ್ಲಾಧಿಕಾರಿ ಕಚೇರಿ, ಶಿವರಾಂಪೇಟೆ, ಡೈರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಕೇಟಿಂಗ್ ನಡೆಸಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮತದಾನ ನಮ್ಮ ಹಕ್ಕು. ಹಾಗಾಗಿ ನಮ್ಮ ತಂಡದಿಂದ ಪ್ರತಿಯೊಬ್ಬರೂ ತಪ್ಪದೇ ಮತ ದಾನ…

ಕೊಡಗಿನ ಹಿರಿಯ ದಂಪತಿ ಉತ್ಸಾಹ
ಮೈಸೂರು

ಕೊಡಗಿನ ಹಿರಿಯ ದಂಪತಿ ಉತ್ಸಾಹ

April 19, 2019

ಮೈಸೂರು: ಸುಡು ಬಿಸಿಲನ್ನು ಲೆಕ್ಕಿಸದೆ 86ರ ಪ್ರಾಯದ ಕೊಡಗಿನ ದಂಪತಿ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದರು. ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ನಿರ್ಮಲಾ ಶಾಲೆಯ ಮತಗಟ್ಟೆ ಸಂಖ್ಯೆ-84ಕ್ಕೆ ಆಗಮಿಸಿದ ಕೊಡಗು ಮೂಲದ ವಿವಿ ಮೊಹಲ್ಲಾ ನಿವಾಸಿಗಳಾದ ಎಂ.ಎಂ. ನಂಜಪ್ಪ (86) ಹಾಗೂ ಇವರ ಪತ್ನಿ ಚಿಮ್ಮಿ ನಂಜಪ್ಪ (81) ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಾಥ್ ನೀಡಿದರು. ಇದೇ ವೇಳೆ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ನಾವೇ ಮತ ಹಾಕದಿದ್ದರೇ ಮತ್ಯಾರು ಮತ ನೀಡುತ್ತಾರೆ….

ಗೆಲುವು ನಿಶ್ಚಿತ: ವಿಜಯಶಂಕರ್
ಮೈಸೂರು

ಗೆಲುವು ನಿಶ್ಚಿತ: ವಿಜಯಶಂಕರ್

April 19, 2019

ಮೈಸೂರು: ಇಡೀ ಕ್ಷೇತ್ರದಲ್ಲಿ ಎಲ್ಲಿಯೂ ಇವರಿಗೆ ಮತ ಏಕೆ ಹಾಕಬೇ ಕೆಂಬ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿಲ್ಲ. ಹೀಗಾಗಿ ಖಂಡಿತ ಮತ್ತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜನತೆ ಆಶೀರ್ವದಿಸುವ ವಿಶ್ವಾಸವಿದೆ ಎಂದು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಆಶಾಭಾವನೆ ವ್ಯಕ್ತಪಡಿಸಿದರು. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗುರುವಾರ ರಾತ್ರಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಸಮಸ್ತ ಸಮಾಜಗಳು ನನಗೆ ಮತದಾನ ಮಾಡುವ ಮೂಲಕ ಬೆಂಬಲ ನೀಡಿರುವ ವಿಶ್ವಾಸ ನನಗಿದೆ. ಕಾಂಗ್ರೆಸ್ ಪರವಾಗಿರುವ ಅಗೋಚರ ಮತದಾರರು ನನ್ನ ಗೆಲುವಿಗೆ…

ಮೋದಿ ಅಲೆಯಲ್ಲಿ ನನ್ನ ಗೆಲುವು ನಿಶ್ಚಿತ: ಪ್ರತಾಪ್ ಸಿಂಹ
ಮೈಸೂರು

ಮೋದಿ ಅಲೆಯಲ್ಲಿ ನನ್ನ ಗೆಲುವು ನಿಶ್ಚಿತ: ಪ್ರತಾಪ್ ಸಿಂಹ

April 19, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅಲೆ ಇರುವುದರಿಂದ ನನ್ನ ಗೆಲುವು ನಿಶ್ಚಿತ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ಮತ ದಾನದ ಪ್ರಮಾಣ ಹೆಚ್ಚಾಗಿರುವುದರಿಂದ ಯುವ ಕರೂ ಸೇರಿದಂತೆ ಕ್ಷೇತ್ರದ ಜನರು ನನ್ನನ್ನು ಬೆಂಬ ಲಿಸಿದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೂ ಮೋದಿ ಅವರ ಅಲೆ ಇರುವುದರಿಂದ ನಾನು ಗೆಲುವು ಸಾಧಿಸುವುದು ನಿಶ್ಚಿತ ಎಂದು ಅವರು ತಿಳಿಸಿದರು. ಕ್ಷೇತ್ರದಾದ್ಯಂತ ಬೆಳಿಗ್ಗೆಯಿಂದ ಸಂಜೆವರೆಗೂ ಸ್ವಯಂಪ್ರೇರಿತವಾಗಿ ಮತದಾರ ತನ್ನ ಹಕ್ಕು ಚಲಾಯಿಸಿರುವುದನ್ನು ಗಮನಿಸಿದರೆ,…

ಮತಗಟ್ಟೆ, ಹೆಸರು ಗೊಂದಲ
ಮೈಸೂರು

ಮತಗಟ್ಟೆ, ಹೆಸರು ಗೊಂದಲ

April 19, 2019

ಮೈಸೂರು: ಎಂದಿನಂತೆ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಮತಗಟ್ಟೆಯ ಗೊಂದಲ ಮೈಸೂರು -ಕೊಡಗು ಲೋಕಸಭಾ ಚುನಾವಣೆಯಲ್ಲೂ ಕಂಡು ಬಂದಿತು. ಕೆ.ಆರ್. ಕ್ಷೇತ್ರದಲ್ಲಿ ಕೆಲವು ಮತದಾರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದೆ ಪರ ದಾಡುವಂತಾಯಿತು. ಮತದಾನ ಮಾಡಲು ಆಗಮಿಸಿದ್ದ 79ವರ್ಷದ ವೃದ್ಧೆ ಶೀಲಾ ಶಾಂಭವಮೂರ್ತಿ ಅವರ ಹೆಸರು ಪಟ್ಟಿಯಲ್ಲಿರಲಿಲ್ಲ. ಆದರೆ, ಎಲ್ಲಾ ದಾಖಲೆಗಳಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಹಲವರು ತಮ್ಮ ಹೆಸರು…

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ

April 19, 2019

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಪ್ರತಿಷ್ಠೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಶೇ.71.75ರಷ್ಟು ಮತದಾನ ದಾಖಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಪ್ರತಿಷ್ಠೆಯ ಕ್ಷೇತ್ರ. ಇಲ್ಲಿ ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಅಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಕಂಡಿದ್ದರು. ಜಿ.ಟಿ.ದೇವೇಗೌಡ ವಿಜಯ ಸಾಧಿ ಸಿದ್ದರು. ಅಂದಿನಿಂದಲೂ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡರ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿರುವ…

ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು
ಮೈಸೂರು

ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು

April 19, 2019

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಿನಕಲ್‍ನಲ್ಲಿ ಅವಳಿ-ಜವಳಿ ಸಹೋದರಿಯರಾದ ನಿಸರ್ಗ ಮತ್ತು ವಿಸ್ಮಯ ಇದೇ ಮೊದಲ ಬಾರಿಗೆ ಮತದಾನ ಮಾಡಿದರು. ಗ್ರಾಮದ ವಿಜಯಾ ಸ್ಕೂಲ್‍ನಲ್ಲಿ ಮತದಾನ ಮಾಡಿದ ಅವರು ಕೈ ಬೆರ ಳಿಗೆ ಶಾಯಿ ಹಾಕಿಸಿಕೊಂಡು ಮೊದಲ ಬಾರಿ ಮತದಾನ ಮಾಡಿದ ಖುಷಿ ಅವರಲ್ಲಿತ್ತು. ಈ ಇಬ್ಬರೂ ಅವಳಿ ಸಹೋದರಿಯರು ಹಿನಕಲ್‍ನ ಹೋಟೆಲ್ ವ್ಯಾಪಾರಿ ಕುಶಾಲಪ್ಪ-ದಾಕ್ಷಾಯಿಣಿ ದಂಪತಿ ಪುತ್ರಿಯರು. ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪಿಜಿ ಸೆಂಟರ್‍ನ ವಿದ್ಯಾರ್ಥಿನಿಯರು.

ಇಂದು ಮತದಾನ
ಮೈಸೂರು

ಇಂದು ಮತದಾನ

April 18, 2019

ಮೈಸೂರು: ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರ ದಲ್ಲಿ ನಾಳೆ(ಏ.18) ಮೊದಲ ಹಂತದ ಚುನಾ ವಣೆ ನಡೆಯಲಿದ್ದು, ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಐದು ಜಿಲ್ಲೆಗಳ ಜಿಲ್ಲಾಡಳಿತ ಮತದಾನಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಮತ ದಾರರಿಗೆ ಮತಗಟ್ಟೆಗಳಲ್ಲಿ ಸಕಲ ಸೌಲಭ್ಯ ಒದ ಗಿಸಿವೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್‍ಸಿಂಹ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಂಸದ ಸಿ.ಹೆಚ್….

ಮೈಸೂರಲ್ಲಿ ಮೋದಿ ಮೋಡಿ
ಮೈಸೂರು

ಮೈಸೂರಲ್ಲಿ ಮೋದಿ ಮೋಡಿ

April 10, 2019

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಯವರು, ‘ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಆದರಣೀಯ ನಾಗರಿಕ ಬಂಧುಗಳೇ, ಎಲ್ಲರಿಗೂ ನಿಮ್ಮ ಚೌಕಿ ದಾರ್ ಮೋದಿಯ ನಮಸ್ಕಾರಗಳು. ಚಾಮುಂಡಿ ನಾಡಿನಲ್ಲಿರುವ ನಿಮಗೆಲ್ಲರಿರೂ ನಮಿಸುವೆ. ಸರ್ ಎಂ. ವಿಶ್ವೇಶ್ವರಯ್ಯರಂತಹ ಮಹಾನ್ ನಾಯಕರಿಗೂ ನನ್ನ ನಮನ’ ಎಂದರು. ಈ ಹಿಂದೆಯೂ ನಾನು ಮೈಸೂರಿಗೆ ಬಂದಿದ್ದೇನೆ. ಆದರೆ ಈ ದಿನ ಅತೀ ಹೆಚ್ಚು ಸಂಖ್ಯೆಯಲ್ಲಿ ನೀವು ಸೇರಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದರು. ಮತ್ತೊಮ್ಮೆ ಮೋದಿ ಸರ್ಕಾರ ಎಂಬ ದೃಢ…

ಮೋದಿ ಆಳ್ವಿಕೆ ದೇಶಕ್ಕೆ ನೀಡಿರುವ ಅತ್ಯಂತ ಶ್ರೇಷ್ಠ ಕೊಡುಗೆ
ಮೈಸೂರು

ಮೋದಿ ಆಳ್ವಿಕೆ ದೇಶಕ್ಕೆ ನೀಡಿರುವ ಅತ್ಯಂತ ಶ್ರೇಷ್ಠ ಕೊಡುಗೆ

April 10, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರದ್ದು ಕಳಂಕ ರಹಿತ ನಾಯಕತ್ವ. ಭ್ರಷ್ಟಾ ಚಾರ ಸುಳಿಯಲೂ ಅವಕಾಶ ನೀಡದೆ 5 ವರ್ಷ ಆಡಳಿತ ನಡೆಸಿರುವುದು ಅವರು ದೇಶಕ್ಕೆ ನೀಡಿರುವ ಅತ್ಯಂತ ಶ್ರೇಷ್ಠ ಕೊಡುಗೆ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಬಣ್ಣಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ಮಾತನಾಡಿದ ಅವರು, ವಿಶ್ವ ನಾಯಕರ ಸಮಾನರಾಗಿ ನಿಂತಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಮರ್ಪಿ ಸುತ್ತೇನೆ….

1 2 3
Translate »