ಮೈಸೂರಲ್ಲಿ ಮೋದಿ ಮೋಡಿ
ಮೈಸೂರು

ಮೈಸೂರಲ್ಲಿ ಮೋದಿ ಮೋಡಿ

April 10, 2019

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಯವರು, ‘ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಆದರಣೀಯ ನಾಗರಿಕ ಬಂಧುಗಳೇ, ಎಲ್ಲರಿಗೂ ನಿಮ್ಮ ಚೌಕಿ ದಾರ್ ಮೋದಿಯ ನಮಸ್ಕಾರಗಳು. ಚಾಮುಂಡಿ ನಾಡಿನಲ್ಲಿರುವ ನಿಮಗೆಲ್ಲರಿರೂ ನಮಿಸುವೆ. ಸರ್ ಎಂ. ವಿಶ್ವೇಶ್ವರಯ್ಯರಂತಹ ಮಹಾನ್ ನಾಯಕರಿಗೂ ನನ್ನ ನಮನ’ ಎಂದರು. ಈ ಹಿಂದೆಯೂ ನಾನು ಮೈಸೂರಿಗೆ ಬಂದಿದ್ದೇನೆ. ಆದರೆ ಈ ದಿನ ಅತೀ ಹೆಚ್ಚು ಸಂಖ್ಯೆಯಲ್ಲಿ ನೀವು ಸೇರಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದರು.

ಮತ್ತೊಮ್ಮೆ ಮೋದಿ ಸರ್ಕಾರ ಎಂಬ ದೃಢ ಸಂಕಲ್ಪ ದೊಂದಿಗೆ ನೀವು ಇಲ್ಲಿಗೆ ಬಂದಿದ್ದೀರಿ. ಈ ದೃಶ್ಯವನ್ನು ದೆಹಲಿಯ ಎಸಿ ರೂಂನಲ್ಲಿ ಕುಳಿತಿರುವವರು ನೋಡಬೇಕು. ಇದು ಅವರ ನಿದ್ದೆಗೆಡಿಸುತ್ತದೆ. ದಶಕಗಳಿಂದ ಬಡತನ ನಿರ್ಮೂಲನೆ ಮಾಡಬೇಕೆನ್ನುತ್ತಿದ್ದ ಕಾಂಗ್ರೆಸ್ ಗರೀಭಿ ಹಠಾವೋ-ಗರೀಬಿ ಹಟಾವೋ ಎಂದು ಹೇಳಿ ರಾಜಕಾರಣ ಮಾಡುತ್ತಿತ್ತು. ಆದರೆ ಅವರಿಂದ ಬಡವರ ಉದ್ಧಾರ ಮಾಡಲು ಸಾಧ್ಯ ವಾಗಲಿಲ್ಲ. ದೇಶದಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡಿದರೆ ಬಡತನ ತಾನಾಗಿಯೇ ನಿರ್ಮೂಲನೆ ಆಗುತ್ತದೆ ಎಂದು ಮೋದಿ ನುಡಿದರು.

ಅಭಿವೃದ್ಧಿ ನಮ್ಮ ಸಂಕಲ್ಪ: ದೇಶದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಸಂಕಲ್ಪ. ರಸ್ತೆ, ವಾಯು ಮಾರ್ಗ ಹಾಗೂ ರೈಲು ಸಂಪರ್ಕವನ್ನು ಅಭಿ ವೃದ್ಧಿಪಡಿಸಿದರೆ, ಮೈಸೂರು ಸೇರಿದಂತೆ ಇಡೀ ದೇಶದ ಅಭಿವೃದ್ಧಿಯಾಗುತ್ತದೆ. ನಿನ್ನೆ ಬಿಜೆಪಿ ಸಂಕಲ್ಪ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಅಷ್ಟನ್ನೂ ನಾವು ಪರಿಪೂರ್ಣ ಮಾಡುತ್ತೇವೆ. ಮುಂದಿನ ಐದು ವರ್ಷ ಗಳಲ್ಲಿ ವಿಮಾನ ನಿಲ್ದಾಣಗಳ ಸಂಪರ್ಕವನ್ನು ದ್ವಿಗುಣ ಗೊಳಿಸುತ್ತೇವೆ. ವೈದ್ಯರುಗಳ ಸಂಖ್ಯೆ ದ್ವಿಗುಣಗೊಳ್ಳ ಬೇಕು, ಉದ್ದಿಮೆದಾರರು ಹೆಚ್ಚಾಗಿ ಬರಬೇಕು. 2030ರ ವೇಳೆಗೆ ಭಾರತ ಜಗತ್ತಿನ ಟಾಪ್-3 ಆರ್ಥಿಕ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಬೇಕು. ದೇಶದ ವಿಕಾಸವೇ ಕೇಂದ್ರ ಸರ್ಕಾರದ ಮೂಲಮಂತ್ರ ಎಂದು ನರೇಂದ್ರ ಮೋದಿಯವರು ಇದೇ ಸಂದರ್ಭ ಹೇಳಿದರು.

ದೇಶದಲ್ಲಿ ಆಧುನಿಕ ಮೂಲ ಸೌಕರ್ಯಗಳು ಬರಬೇಕಾಗಿವೆ. ಇನ್ನೂ 50 ನಗರಗಳಲ್ಲಿ ಮೆಟ್ರೋ ರೈಲು ಸೌಲಭ್ಯ ಬರುತ್ತದೆ. ಯಾವುದೇ ಭದ್ರತೆ ಇಲ್ಲದೇ ಸಾಲ ಸೌಲಭ್ಯ ನೀಡುತ್ತಿದ್ದೇವೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ಅನುಕೂಲ ವಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಕಾಂಗ್ರೆಸ್ ಪ್ರಣಾಳಿಕೆ ಸುಳ್ಳಿನ ಪತ್ರ: ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಒಂದು ಸುಳ್ಳಿನ ಪತ್ರ. ಮೋದಿಯನ್ನು ಅಧಿಕಾರದಿಂದ ಕೆಳಗಿಳಸಬೇಕೆಂಬು ದೊಂದೇ ಅವರ ಉದ್ದೇಶ. ಮೋದಿ ಹಠಾವೋ.. ಮೋದಿ ಹಠಾವೋ.. ಎಂಬುದೇ ಕಾಂಗ್ರೆಸ್ ಅಜೆಂಡಾ ಆಗಿದೆ. 70 ವರ್ಷಗಳಲ್ಲಿ ಅವರು ಮಾಡಲಾಗದಿದ್ದನ್ನು ನಾವು ಕೇವಲ 5 ವರ್ಷಗಳಲ್ಲಿ ಮಾಡಿದ್ದೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಹಣದುಬ್ಬರ ಶೇ. 10ಕ್ಕೂ ಮೀರಿತ್ತು. ಆ ಪಕ್ಷ ದೇಶಕ್ಕೆ 2ಜಿ ಸೆಕ್ಟ್ರಂ ಹಗರಣ ನೀಡಿದ್ದನ್ನು ನೀವು ಮರೆತಿದ್ದೀರಾ? ಎಂದು ಪ್ರಶ್ನಿಸಿದಾಗ ಜನ ಸಮುದಾಯದಿಂದ ಇಲ್ಲಾ… ಇಲ್ಲಾ… ಎಂಬ ಉತ್ತರ ಬಂದಿತು. 2 ಲಕ್ಷದವರೆಗೆ ಮಾತ್ರ ಆದಾಯ ತೆರಿಗೆ ವಿನಾಯಿತಿ ಇತ್ತು. ಅದನ್ನು ನಾವು 5 ಲಕ್ಷದವರೆಗೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ರಾಜ್ಯ ಸಮ್ಮಿಶ್ರ ಸರ್ಕಾರ ಸಾಲ ಮನ್ನಾ ಭರವಸೆ ಮಾತ್ರ ನೀಡುತ್ತಿದೆ. ನಾಳೆ ಬನ್ನಿ, ನಾಳೆ ಬನ್ನಿ ಎಂದು ಸತಾಯಿಸುತ್ತಿದ್ದಾರೆ. ಆದರೆ ನಾವು 3 ಕೋಟಿಗೂ ಅಧಿಕ ರೈತರ ಪೈಕಿ 1.5 ಕೋಟಿ ರೈತರಿಗೆ ನೆರವು ನೀಡಿದ್ದೇವೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ನಂಗಾ ನಾಚ್ ನಡೆಸುತ್ತಿದೆ. ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಾಲ ಪಡೆದಿರುವ ರೈತರ ಪಟ್ಟಿ ಕೊಡಿ ಎಂದು ಕೇಳಿದರೆ ಹಿಂದು-ಮುಂದು ನೋಡುತ್ತಿದೆ ಎಂದು ಪ್ರಧಾನಿ ಟೀಕಿಸಿದರು.

ಕಾಂಗ್ರೆಸ್‍ನ ಪಂಚಿಂಗ್ ಬ್ಯಾಗ್: ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರನ್ನು ಕಾಂಗ್ರೆಸ್ ಪಂಚಿಂಗ್ ಬ್ಯಾಗ್ ಮಾಡಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಮಾದರಿಯೇ ಹೀಗೆ. ಭ್ರಷ್ಟಾಚಾರ, ಬ್ಲಾಕ್‍ಮೇಲ್ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ನೀತಿಯನ್ನು ಇಡೀ ದೇಶ ನೋಡುತ್ತಿದೆ. ನಾಯಕರ ಸ್ಥಿತಿಯೇ ಹೀಗಿರುವಾಗ ಆ ಪಕ್ಷಗಳ ಕಾರ್ಯಕರ್ತರ ಸ್ಥಿತಿ ಯಾವ ರೀತಿ ಇರ ಬೇಕೆಂದು ನೀವೇ ಯೋಚಿಸಿ ಎಂದು ಪ್ರಧಾನಮಂತ್ರಿಗಳು ತಿಳಿಸಿದರು.

ಶಬರಿಮಲೆ ವಿವಾದ: ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಶಬರಿಮಲೆ ವಿವಾದದ ಬಗ್ಗೆ ಪ್ರಸ್ತಾಪಿಸಿದ ಮೋದಿಯವರು, ಈ ವಿಷಯದಲ್ಲಿ ದೇಶದ ಜನರ ಭಾವನೆಗಳ ಬಗ್ಗೆ ಬಿಜೆಪಿಗೆ ಗೌರವವಿದೆ. ಅಲ್ಲಿನ ಪೂಜಾ ಪದ್ಧತಿಯನ್ನು ಸಂರಕ್ಷಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ಆದರೆ ಕಾಂಗ್ರೆಸ್‍ನವರು ಅಲ್ಲಿಯೂ ರಾಜಕಾರಣ ಮಾಡಿದರು ಎಂದರು.

ಈ ದೇಶದಲ್ಲಿ 18 ವರ್ಷ ತುಂಬಿದ ಯುವಕರು ಅಭಿ ವೃದ್ಧಿಗಾಗಿ, ವಿಕಾಸಕ್ಕಾಗಿ ಬಿಜೆಪಿಗೆ ಮತ ಹಾಕಿದರೆ ಸಾಕು. ಪೂರ್ಣ ಬಹುಮತದ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ಮೋದಿ ಅವರು ಮೊದಲ ಸಲ ಮತದಾನ ಮಾಡುವ ಯುವಕರಿಗೆ ಕರೆ ನೀಡಿದರು.

ಚೌಕಿದಾರ: ಹಳ್ಳಿ ಹಳ್ಳಿಗಳಲ್ಲಿ, ನಗರ-ನಗರಗಳಲ್ಲಿ, ಮನೆ ಮನೆಗಳಲ್ಲಿ ದೇಶದ ಗಡಿಯಲ್ಲಿ, ಶಿಕ್ಷಕರು, ಇಂಜಿನಿಯರ್, ರೈತರು, ವ್ಯಾಪಾರಿಗಳು, ವಕೀಲರು, ವೈದ್ಯರು, ಪತ್ರಕರ್ತರು ಎಲ್ಲರೂ ಚೌಕಿದಾರರು. ನೀವೆಲ್ಲರೂ ಈ ಚೌಕಿದಾರ ಮೋದಿ ಅವರಿಗೆ ಆಶೀರ್ವದಿಸಿದರೆ, ದೇಶದಲ್ಲಿ ವಿಕಾಸ-ಅಭಿವೃದ್ಧಿ ಸರ್ಕಾರ ನೀಡುತ್ತೇವೆ ಎಂದು ನರೇಂದ್ರ ಮೋದಿಯವರು ಮನವಿ ಮಾಡಿದರು.

ರಾಹುಲ್ ಕೇರಳಕ್ಕೆ ಪಲಾಯನ

ಮೈಸೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಸೋಲಿಸ ಬಹುದೆಂಬ ಭಯದಿಂದ ರಾಹುಲ್‍ಗಾಂಧಿ ಕರ್ನಾ ಟಕ ಬಿಟ್ಟು ಕೇರಳದ ವೈನಾಡಿನಲ್ಲಿ ಸ್ಪರ್ಧಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿಲ್ಲಿ ವ್ಯಂಗ್ಯ ಮಾಡಿದ್ದಾರೆ. ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ಇಂದು ನಡೆದ ಬಿಜೆಪಿ ಸಂಕಲ್ಪ ರ್ಯಾಲಿಯಲ್ಲಿ ಮಾತನಾಡು ತ್ತಿದ್ದ ಅವರು, ರಾಹುಲ್‍ಗಾಂಧಿ ಕರ್ನಾಟಕಕ್ಕೆ ಬಂದು ಸ್ಪರ್ಧಿಸಿದರೆ, ದೇವೇಗೌಡರೇ ಸೋಲಿಸುತ್ತಾರೆ ಎಂಬ ಅನುಮಾನ ಸೋನಿಯಾ ಗಾಂಧಿಗಿತ್ತು ಎಂದರು. ಈ ಹಿಂದೆ ಪ್ರಧಾನಮಂತ್ರಿಯಾಗಿದ್ದಾಗ ದೇವೇ ಗೌಡರನ್ನು ಬೆನ್ನಿಗೆ ಚೂರಿ ಹಾಕಿ ಅಧಿಕಾರದಿಂದ ಕೆಳಗಿಳಿಸಿದ್ದ ಸೋನಿಯಾಗಾಂಧಿಗೆ ಈಗ ದೇವೇಗೌಡರು ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳುತ್ತಾರೆಂಬ ಭಯದಿಂದ ತಮ್ಮ ಮಗನನ್ನು ಕೇರಳದಲ್ಲಿ ಸ್ಪರ್ಧೆಗಿಳಿಸಿದ್ದಾರೆ ಎಂದು ಪ್ರಧಾನಿಗಳು ಟೀಕಿಸಿದರು.

ಸುಮಲತಾಗೆ ಮೋದಿ ಅಭಯ

ಮೈಸೂರು:ಮೈಸೂರಿನ ಬಿಜೆಪಿ ಚುನಾವಣಾ ಪ್ರಚಾರ ಭಾಷಣ ದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಗ್ಗೆ ಪ್ರಸ್ತಾಪಿ ಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಂಬರೀಶ್ ಅವರು ಕನ್ನಡಕ್ಕಾಗಿ, ನಾಡಿನ ಸಂಸ್ಕøತಿಗಾಗಿ ಮಾಡಿರುವ ಕೆಲಸ ನಿಮಗೆ ಗೊತ್ತಿದೆಯಲ್ಲವೆ’ ಎಂದು ಹೇಳಿ ಅಚ್ಚರಿ ಮೂಡಿಸಿ ದರು. ಸುಮಲತಾ ಅವರೂ ಸಹ ಅಂಬರೀಶ್ ಜೊತೆ ಸೇರಿ ನಾಡಿನ ಕಲೆ, ಸಂಸ್ಕøತಿಗೆ ಏನು ಮಾಡಿದರೆಂಬುದು ನಿಮಗೆ ಗೊತ್ತಿದೆಯಲ್ಲವೆ. ಹೀಗಾಗಿ ಅವರಿಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದ ಅವರು, ನಮ್ಮ ಸಾಥಿಗಳಿಗೆ ನಿಮ್ಮ ಮತ ಎಂದು ಮೈತ್ರಿ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಅಂಬರೀಶ್ ಮತ್ತು ಸುಮಲತಾ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ಸಭಿಕರು ಜೋರಾಗಿ ಕೂಗಿದರು. ಅವರಿಗೆ ಶಕ್ತಿ ತುಂಬ ಬೇಕೆಂದಾಗ ಸಭಾ ಮಂಟಪವೇ ಕಿತ್ತು ಹೋಗುವಂತೆ ಭೋರ್ಗರೆಸಿದರು.

ಹೃದಯಪೂರ್ವಕ ಧನ್ಯವಾದಗಳು

ಮಂಡ್ಯ: ಮೈಸೂರಿನಲ್ಲಿ ಇಂದು ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ನೆನಪಿಸಿ ಹೊಗಳಿದ್ದಕ್ಕೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಹೃದಯಪೂರ್ವಕ ಧನ್ಯವಾದ ತಿಳಿಸಿ ದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಅಂಬರೀಶ್ ಅವರನ್ನ ನೆನಪು ಮಾಡಿಕೊಂಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ ಹೇಳಲು ಪದಗಳೇ ಬರುತ್ತಿಲ್ಲ.
ಮೋದಿ ಅವರಿಗೆ ಹಾರ್ಟ್ ಫೆಲ್ಟ್ ಥ್ಯಾಂಕ್ಸ್. ಇದು ಹೆಮ್ಮೆ ಪಡುವಂತ ವಿಚಾರ. ಇದಕ್ಕೆ ಕಾರಣ ಅಂಬರೀಶ್ ಅವರ ಸಾಧನೆ. ಮೋದಿ ಈ ಮಾತಿನಿಂದ ನಮ್ಮ ಕಾರ್ಯಕರ್ತರಲ್ಲಿ ಇನ್ನಷ್ಟು ಸ್ಫೂರ್ತಿ ಬರುತ್ತದೆ ಎಂದು ಅಭಿನಂದಿಸಿದರು.

ಸುಮಲತಾಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ: ಪ್ರಧಾನಿ ಮೋದಿ ಮೈಸೂರಿನಲ್ಲಿ ಅಂಬಿಯನ್ನು ನೆನೆದ ಮೋದಿ ಅವರು, ಅಂಬರೀಶ್ ಅವರು ನಾಡಿಗಾಗಿ, ಕನ್ನಡ ಸಂಸ್ಕೃತಿಗಾಗಿ ತುಂಬಾ ಕೆಲಸ ಮಾಡಿದ್ದಾರೆ. ಈಗ ಸುಮಲತಾ ಅವರು ಕೂಡ ಅವರ ಹಾದಿಯಲ್ಲಿ ಹೋಗುತ್ತಿದ್ದಾರೆ ಎನ್ನುವ ಮೂಲಕ ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ, ನಟ ಅಂಬರೀಶ್ ಕನ್ನಡ ನಾಡಿನ ಜನರ ಹೃದಯ ದಲ್ಲಿದ್ದಾರೆ. ಅಂಬರೀಶ್ ಅವರು ಸುಮಲತಾ ಜೊತೆ ಸೇರಿಕೊಂಡು ಈ ಸಂಸ್ಕೃತಿ ಸೇವೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮೋದಿ ಮನವಿ ಮಾಡಿದ್ದಾರೆ.

Translate »