ಕೆಸರಿನಲ್ಲಿ ಸಿಲುಕಿದ ಗಜಪಡೆ ಪರದಾಟ
ಕೊಡಗು

ಕೆಸರಿನಲ್ಲಿ ಸಿಲುಕಿದ ಗಜಪಡೆ ಪರದಾಟ

April 11, 2019

ವಿರಾಜಪೇಟೆ: ವೀರಾಜಪೇಟೆ ಸಮೀಪದ ಪಾಲಂಗಾಲ ಗ್ರಾಮದಲ್ಲಿ ಮತ್ತೆ ಮರಿಯಾನೆ ಸೇರಿ ಒಟ್ಟು ಐದು ಕಾಡಾನೆ ಗಳು ಕೆರೆಯಲ್ಲಿ ಸಿಲುಕಿ ಪರಿತಪಿಸಿದ ಬಗ್ಗೆ ವರದಿಯಾಗಿದೆ.

ಗ್ರಾಮದ ಕರಿನೆರವಂಡ ಅಯ್ಯಪ್ಪ ಅವರ ತೋಟದ ಕೆರೆ ನೀರು ಕುಡಿಯಲು ಬಂದ ಗಜಪಡೆ ಕೆಸರಿನಲ್ಲಿ ಸಿಲುಕಿ, ಮೇಲೆ ಬರಲಾಗದೆ ಒದ್ದಾಡು ವಂತಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿ ಸಿದ ಅರಣ್ಯ ಇಲಾಖೆಯ ವಲಯಾಧಿ ಕಾರಿ ಗೋಪಾಲ್ ಹಾಗೂ ವನಪಾಲಕರು ಗಳು ಕೆರೆಯಿಂದ ಆನೆಯನ್ನು ಜೆಸಿಬಿ ಯಂತ್ರದ ಮೂಲಕ ಮೇಲೆ ತಂದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ಹಲವು ವರ್ಷ ಗಳಿಂದಲೂ ಕಾಡಾನೆ ಹಿಡಿಯುವುದಾಗಿ ಹೇಳುವುದು ಬಿಟ್ಟರೆ ಹಿಡಿಯುತ್ತಿಲ್ಲ, ನಾವು ಗಳು ಬೆಳೆದ ಬೆಳೆ ಕಾಡಾನೆ ದಾಳಿಯಿಂದ ನಷ್ಟ ಉಂಟಾಗಿದೆ. ಕೃಷಿಕರ ಬೆಳೆಹಾನಿಗೆ ಸರಕಾರ ಪರಿಹಾರ ದೊರಕಿಸಿಲ್ಲ. ಈ ಹಿನ್ನ ಲೆಯಲ್ಲಿ ಮೇಲಧಿಕಾರಿಗಳು ಬರುವವ ರೆಗೂ ಕಾರ್ಯಾಚರಣೆ ಮಾಡುವುದು ಬೇಡ ಎಂದು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸ್ಥಳೀಯ ಗ್ರಾಮಸ್ಥರಾದ ಕರಿನೆರವಂಡ ರಮೇಶ್ ಹಾಗೂ ಇತರರು ಅರಣ್ಯಧಿಕಾರಿಯೊಂದಿಗೆ ಮಾತನಾಡಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ನೊಂದು ಹೋಗಿದ್ದಾರೆ. ಮೊದಲು ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು. ಈ ಹಿಂದೆ ಆನೆ ಗಳು ದಾಳಿ ಮಾಡಿ ಮೂರು ಮಂದಿ ಮೃತ ಪಟ್ಟಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ. ಆನೆಯ ಹತ್ಯೆ ಅದಾಗ ಪ್ರಕರಣ ದಾಖ ಲಿಸಿ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತೀರ. ಈಗ ಉಂಟಾಗಿರುವ ನಷ್ಟಕ್ಕೆ ಪರಿಹಾರ ದೊರಕಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಈ ವೇಳೆ ಎಸಿಎಫ್ ರೋಶನಿ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮ ಕೈಗೊಳ್ಳುವು ದಾಗಿಯೂ, ಈ ಕುರಿತು ಹಿರಿಯ ಅಧಿ ಕಾರಿಗಳ ಸಭೆ ಕರೆಯುವ ಭರವಸೆ ನೀಡಿ ದರು. ಪ್ರತಿಬಾರಿಯು ಕಾಡಾನೆ ಹಿಡಿಯು ವುದಾಗಿ ಭರವಸೆ ನೀಡುತ್ತೀರ. ಅಷ್ಟೆ ನಿಮ್ಮ ಆನೆಗಳಿಗೆ ಬೆಲೆ ಇದೆ, ಜನರ ಜೀವಕ್ಕೆ ಮಾತ್ರ ಬೆಲೆ ಇಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತ ನಾಡಿ, ಈ ಹಿಂದೆ ಅನೆ ಹತ್ಯೆ ಪ್ರಕರಣ ದಲ್ಲಿ ಪ್ರಯೋಗಾಲಯಕ್ಕೆಂದು ತೆಗೆದುಕೊಂಡು ಹೋದ ಸ್ಥಳೀಯರ ಕೋವಿ ವಿರಾಜ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಕೊಳೆಯುತ್ತಿದ್ದರೂ ಅದನ್ನು ಹಿಂತಿ ರುಗಿಸಿಲ್ಲ. ಇದೀಗ ಮರಿಯಾನೆ ಗುಂಡು ಹಾಕಿದ ಪ್ರಕರಣದಲ್ಲಿ ಸ್ಥಳೀಯರ ಮೇಲೆ ದೂರು ದಾಖಲಿಸಿದ್ದೀರ. ಇದರಿಂದ ಜನರು ವಿನಾಕಾರಣ ಕಿರುಕುಳ ಅನುಭವಿಸುವಂತಾ ಗಿದೆ. ಬೆಳೆ ಹಾಗೂ ಇತರ ಕೃಷಿ ಹಾನಿಗೆ ಪರಿಹಾರ ಕೂಡಲೇ ನೀಡಬೇಕು ಎಂದು ಗ್ರಾಮಸ್ಥರ ಬಿಗಿ ಪಟ್ಟಿನಿಂದ ಸ್ಥಳಕ್ಕಾಗಮಿ ಸಿದ ಡಿಎಫ್‍ಓ ಕ್ರಿಸ್ತರಾಜು ಗ್ರಾಮಸ್ಥ ರೊಂದಿಗೆ ಮಾತುಕತೆ ನಡೆಸಿ ಈ ಬಾರಿ ಇಲ್ಲಿನ ಕಾಡಾನೆಗಳನ್ನು ಹಿಡಿಯುವ ಕೆಲಸ ಮಾಡಬೇಕು. ಬೆಳೆ, ಕೃಷಿ ಹಾನಿಗೆ ಸೂಕ್ತ ಪರಿಹಾರ, ಕಾಡಾನೆ ಹಿಡಿಯುವ ಪ್ರಕ್ರಿಯೆಗೆ ನಿಯಮಾನುಸಾರ ಕಾಲಾವ ಕಾಶ ಬೇಕು. ಈಗಾಗಲೆ 6 ಕಾಡಾನೆಗಳ ಸೆರೆಗೆ ಅನುಮತಿ ದೊರಕಿದೆ, ಮುಂದೆ ಈ ಗ್ರಾಮದಲ್ಲಿ ಇರುವ ಕೆಲವು ಪುಂಡಾ ನೆಗಳನ್ನು ಹಿಡಿಯಲು ಆರಂಭಿಸುತ್ತೇವೆ. ಸೂಕ್ತ ಪರಿಹಾರ ನೀಡುತ್ತವೆ ಹಾಗೂ ಈ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಶೀಘ್ರದಲ್ಲಿ ಗ್ರಾಮಸ್ಥರ ಸಭೆ ಕರೆಯುವು ದಾಗಿ ಭರವಸೆ ನೀಡಿದರು. ಬಳಿಕ ಕಾಡಾನೆಗಳಿಗೆ ಜೆಸಿಬಿ ಮೂಲಕ ದಾರಿ ಮಾಡಿಕೊಟ್ಟು ಕೆರೆಯಿಂದ ಹೊರ ಬರಲು ಅವಕಾಶ ಮಾಡಿಕೊಡಲಾಯಿತು.

Translate »