ಗೆಲುವು ನಿಶ್ಚಿತ: ವಿಜಯಶಂಕರ್
ಮೈಸೂರು

ಗೆಲುವು ನಿಶ್ಚಿತ: ವಿಜಯಶಂಕರ್

April 19, 2019

ಮೈಸೂರು: ಇಡೀ ಕ್ಷೇತ್ರದಲ್ಲಿ ಎಲ್ಲಿಯೂ ಇವರಿಗೆ ಮತ ಏಕೆ ಹಾಕಬೇ ಕೆಂಬ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿಲ್ಲ. ಹೀಗಾಗಿ ಖಂಡಿತ ಮತ್ತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜನತೆ ಆಶೀರ್ವದಿಸುವ ವಿಶ್ವಾಸವಿದೆ ಎಂದು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಆಶಾಭಾವನೆ ವ್ಯಕ್ತಪಡಿಸಿದರು.

ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗುರುವಾರ ರಾತ್ರಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಸಮಸ್ತ ಸಮಾಜಗಳು ನನಗೆ ಮತದಾನ ಮಾಡುವ ಮೂಲಕ ಬೆಂಬಲ ನೀಡಿರುವ ವಿಶ್ವಾಸ ನನಗಿದೆ. ಕಾಂಗ್ರೆಸ್ ಪರವಾಗಿರುವ ಅಗೋಚರ ಮತದಾರರು ನನ್ನ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದರು.

ಕಾಂಗ್ರೆಸ್ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಪಕ್ಷವಾಗಿದ್ದು, ಹೀಗಾಗಿ ನನಗೆ ಆಶೀರ್ವಾದ ಮಾಡುವ ಬಲವಾದ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲಾ ವರ್ಗದ ಬಡವರು, ದೀನ-ದಲಿತರು ಯಾವುದೇ ಜಾತಿ-ಧರ್ಮದ ಪ್ರಭಾವ ಗಳಿಗೆ ಒಳಗಾಗುವುದಿಲ್ಲ. ಅವರಿಗೆ ತಮ್ಮ ಬದುಕು ಮತ್ತು ಸಮಾಜದ ಸ್ವಾಸ್ಥ್ಯವೇ ಮುಖ್ಯವಾಗಿದ್ದು, ಇದಕ್ಕೆ ಆದ್ಯತೆ ನೀಡುವ ಕಾಂಗ್ರೆಸ್‍ಗೆ ಬೆಂಬಲ ನೀಡಲಿದ್ದಾರೆ. ಹೀಗಾಗಿ ಕಣ್ಣಿಗೆ ಕಾಣುವಂತಹ ಶೇಕಡಾವಾರು ಮತ ಪ್ರಮಾಣದಲ್ಲಿ ಫಲಿತಾಂಶವನ್ನು ಲೆಕ್ಕಾಚಾರ ಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್‍ನ ಅಗೋಚರ ಶಕ್ತಿ ನನ್ನ ಕೈಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Translate »